ಇಲ್ಲಿ ಎಲ್ಲವೂ ಹೊಸತು.. ಹಾಗಾಗಿ ಡಾಲಿ ಧನಂಜಯ್ ಕೂಡ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ಲಾಕ್ ಡೌನ್ ಮುಗಿದ ಆ ಗ್ಯಾಪ್ ನಲ್ಲಿ ಧನಂಜಯ್ ಅವರಿಗೆ ಕಥೆ ಹೇಳಿದಾಗ, ಅವರಿಂದ ಒಪ್ಪಿಗೆ ದೊರೆಯಿತು. ತಕ್ಷಣವೇ ಸಿನಿಮಾ ತಯಾರಿ ನಡೆಸಿದೆವು. ಇದೊಂದು ತನಿಖಾ ರೂಪದ ಕಥೆ. ಬೆಂಗಳೂರಿನಲ್ಲಿ ಕಿಡ್ನಾಪ್ ಆಗುವ ಕೇರಳ ಹುಡುಗಿಯ ಆರೋಪಿಗಳ ಪತ್ತೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸುವುದು ಕಥೆ. ಧನಂಜಯ್ ಇಲ್ಲಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು ನಿರ್ದೇಶಕರು. ಅಂದ ಹಾಗೆ ನಿರ್ದೇಶಕ ಜೈಶಂಕರ್ ಪಂಡಿತ್ ಭಾರತೀಯ ಮಟ್ಟದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಜಾಹಿರಾತು ನಿರ್ದೇಶನ ಮಾಡಿದ ಅನುಭವ ಉಳ್ಳವರು.
ಮುಖ್ಯ ಪಾತ್ರದಲ್ಲಿ ಧನಂಜಯ್ ಅವರಿದ್ದರೆ, ಕೇರಳ ಮೂಲದ ಸುದೇವ್ ನಾಯರ್, ರಾಹುಲ್ ನಾಯರ್ ಹಾಗೂ ಇತರ ಕಲಾವಿದರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಭಾಷೆಯ ಈ ಚಿತ್ರ ಕೇರಳ ಕನ್ನಡದಲ್ಲಿಯೂ ಇರುತ್ತದೆ ಎಂಬ ಮಾಹಿತಿಗಳು ಬಂದವು.
ಜೈಶಂಕರ್ ಪಂಡಿತ್ ಅವರಿಗೆ ಇದು ಮೊದಲ ಸಿನಿಮಾ. ಇಬ್ಬರ ಜೀವನದಲ್ಲಿ ಏನಾಗುತ್ತದೆ ಎಂಬುದು ಕಥೆ. ಸಂಜೆ ಆರರಿಂದ ನಡೆಯುವ ಇಪ್ಪತ್ತೊಂದು ಗಂಟೆಗಳಲ್ಲಿ ಏನಾಗುತ್ತದೆ ಎಂಬುದು ಕುತೂಹಲ. ನಾನು ಧನಂಜಯ್ ಅವರ ‘ಟಗರು’ ಮಾತ್ರ ನೋಡಿದ್ದೆ. ಅಚ್ಚರಿ ಆಯ್ತು ಅವರು ಅಷ್ಟು ಸರಳ. ನಿರ್ದೇಶಕರ ನಟ ಎಂದು ಧನಂಜಯ್ ಅವರಿಗೆ ಹೊಗಳಿಕೆ ಕೂಡ ಬಂತು ನಿರ್ದೇಶಕರಿಂದ.
ಚಿತ್ರತಂಡದ ಬಾಲು, ಅಭಿ, ಸುನಿಲ್, ಶಂಕರ್, ಅಭಿಷೇಕ್ ಮಾತನಾಡಿದರು. ಧನಂಜಯ್ ಅವರ ಸೇರ್ಪಡೆ ಬಳಿಕ ಈ ಚಿತ್ರ ಬೇರೆಯದೇ ರೂಪ ಪಡೆದು ಕೊಂಡಿತು ಎಂಬ ವಿವರ ಕೊಟ್ಟರು.
ಚಿತ್ರದ ಹೆಸರು ‘ಟ್ವೆಂಟಿ ಒನ್ ಅವರ್ಸ್’ ಈ ಚಿತ್ರ ೨೦ನೇ ತಾರೀಕು ತೆರೆಗೆ ಬರಲು ಸಜ್ಜಾಗಿದೆ.