Latest News

ಬಿಲ್‌ ಕಟ್ಟದಿದ್ದರೆ ನೀರು ಇಲ್ಲ!

AskMysuru 20/09/2021

ನೀರಿನ ಕರ ಪಾವತಿಯನ್ನು ನಿಯಮಿತವಾಗಿ ಕೇವಲ 1.10 ಲಕ್ಷ ಮಂದಿ ಮಾತ್ರ ಮಾಡುತ್ತಿದ್ದು, ಉಳಿದ 70 ಸಾವಿರ ಮಂದಿ ಸಮರ್ಪಕವಾಗಿ ನೀರಿನ ಕರ ಪಾವತಿ ಮಾಡದೇ ಇರುವುದರಿಂದ ಕರ ಬಾಕಿ ಬೆಟ್ಟದಂತೆ ಬೆಳೆದಿದೆ. ಇದಕ್ಕೆ ಸರಕಾರಿ ಸಂಸ್ಥೆಗಳ ಪಾಲೂ ಕೂಡ ಶೇ.50 ರಷ್ಟು ಇದ್ದು, ಪಾಲಿಕೆಗೆ ಸಂದಾಯವಾಗದಿರುವ ನೀರಿನ ಬಾಕಿಯೇ 195 ಕೋಟಿ ರೂ. ಆಗಿದೆ.

  • ನೀರಿನ ಕರ ಬಾಕಿ ಪಾವತಿ ಮಾಡದ ಗ್ರಾಹಕರ ಮನೆಗೆ ನೀರಿನ ಸಂಪರ್ಕ ಕಡಿತಗೊಳಿಸಲು ಮುಂದಾದ ಪಾಲಿಕೆ
  • ಕಳೆದ ಒಂದು ವಾರದಲ್ಲಿ 120ಕ್ಕೂ ಹೆಚ್ಚು ಮಂದಿ ಗ್ರಾಹಕರ ಮನೆಯ ನೀರಿನ ಸಂಪರ್ಕ ಕಡಿತ
  • ನೀರಿನ ಬಾಕಿಯೇ 195 ಕೋಟಿ ರೂ.; ಕರ ಪಾವತಿಸದ ಶೇ.50 ಸರಕಾರಿ ಸಂಸ್ಥೆಗಳು; ಪಾಲಿಕೆ ವ್ಯಾಪ್ತಿಯಲ್ಲಿ 1.80 ಲಕ್ಷ ಮಂದಿ ಗ್ರಾಹಕರು!
  • ಕೇವಲ 1.10 ಲಕ್ಷ ಮಂದಿ ಮಾತ್ರ ತೆರಿಗೆ ಪಾವತಿ; 70 ಸಾವಿರ ಮಂದಿ ನೀರಿನ ಕರ ಪಾವತಿಸದೇ ಬಾಕಿ
  • ಬಾಕಿ ಉಳಿಸಿಕೊಂಡಿರುವ ಗ್ರಾಹಕರ ನೀರಿನ ಸಂಪರ್ಕ ಕಡಿತ ಕಾರ್ಯಾಚರಣೆ ತೀವ್ರ
  • ನಿಮ್ಮ ಸಾಮಾನ್ಯ ಜ್ಞಾನವನ್ನು ಇನ್ನೂ ಹೆಚ್ಚಿಸಿ! ದಿನವೂ ಕ್ಯುರೇಕಾ ಕ್ವಿಜ್‌ ಆಡಿ!

ಮೈಸೂರು: ಸೆಸ್ಕ್‌ ಮಾದರಿಯಲ್ಲಿ ಮೈಸೂರು ನಗರ ಪಾಲಿಕೆ ಕೂಡ ಕಾರ್ಯೋನ್ಮುಖವಾಗಿದೆ. ಇದುವರೆವಿಗೂ ನೋಟಿಸ್‌ ನೀಡುತ್ತಾ ನೀರಿನ ಬಾಕಿ ಪಾವತಿಸಿ ಎಂದು ಗ್ರಾಹಕರಿಗೆ ಮನವಿ ಮಾಡುತ್ತಿದ್ದ ಮೈಸೂರು ನಗರ ಪಾಲಿಕೆ ಈಗ ರಸ್ತೆಗಳಿದಿದೆ.

sri krishnadevaraya hampi

ನೀರಿನ ಕರ ಬಾಕಿ ಪಾವತಿ ಮಾಡದ ಗ್ರಾಹಕರ ಮನೆಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದೆ. ನೋಟಿಸ್‌ ಕೊಟ್ಟರೂ ಬಗ್ಗದ ಗ್ರಾಹಕರಿಗೆ ಅಂತಿಮ ಎಚ್ಚರಿಕೆ ನೀಡಿ, ನೀರಿನ ಸಂಪರ್ಕವನ್ನು ಕಡಿತಗೊಳಿಸುತ್ತಿದೆ. ಕಳೆದ ಒಂದು ವಾರದಲ್ಲಿ 120ಕ್ಕೂ ಹೆಚ್ಚು ಮಂದಿ ಗ್ರಾಹಕರ ಮನೆಯ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ. ಮುಂದಿನ ದಿನಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸುವ ಕಾರ್ಯಾಚರಣೆ ತೀವ್ರಗೊಳಿಸಲು ವಿಶೇಷ ಅಭಿಯಾನ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಪಾಲಿಕೆ ವಾಣಿವಿಲಾಸ ನೀರು ಸರಬರಾಜು ವಿಭಾಗದಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರು ಬಳಕೆ ಮಾಡುವ ಗ್ರಾಹಕರಿಗೆ ಶುಲ್ಕ ಕೂಡ ವಿಧಿಸಲಾಗುತ್ತಿದೆ. ಕೆಲ ಗ್ರಾಮಾಂತರ ಪ್ರದೇಶಗಳಿಗೂ ನೀರು ಪೂರೈಕೆಯಾಗುತ್ತಿದ್ದರೂ ಮೀಟರ್‌ ಅಳವಡಿಕೆಯಾಗದ ಕಾರಣ ತೆರಿಗೆ ಪಾವತಿಯಾಗುತ್ತಿಲ್ಲ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿನ 65 ವಾರ್ಡ್‌ಗಳಲ್ಲಿ 1.80 ಲಕ್ಷ ಮಂದಿ ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಜತೆಗೆ ಸರಕಾರಿ ಸಂಸ್ಥೆಗಳಿಗೂ ನೀರು ಪೂರೈಕೆ ಮಾಡಲಾಗುತ್ತಿದೆ.ನೀರಿನ ಕರ ಪಾವತಿಯನ್ನು ನಿಯಮಿತವಾಗಿ ಕೇವಲ 1.10 ಲಕ್ಷ ಮಂದಿ ಮಾತ್ರ ಮಾಡುತ್ತಿದ್ದು, ಉಳಿದ 70 ಸಾವಿರ ಮಂದಿ ಸಮರ್ಪಕವಾಗಿ ನೀರಿನ ಕರ ಪಾವತಿ ಮಾಡದೇ ಇರುವುದರಿಂದ ಕರ ಬಾಕಿ ಬೆಟ್ಟದಂತೆ ಬೆಳೆದಿದೆ. ಇದಕ್ಕೆ ಸರಕಾರಿ ಸಂಸ್ಥೆಗಳ ಪಾಲೂ ಕೂಡ ಶೇ.50 ರಷ್ಟು ಇದ್ದು, ಪಾಲಿಕೆಗೆ ಸಂದಾಯವಾಗದಿರುವ ನೀರಿನ ಬಾಕಿಯೇ 195 ಕೋಟಿ ರೂ. ಆಗಿದೆ.

ಸರಕಾರಿ ಕಚೇರಿಗಳಿಗೆ 15 ದಿನ ಗಡುವು
ಈಗಾಗಲೇ ಸಾಕಷ್ಟು ಬಾಕಿ ಉಳಿಸಿಕೊಂಡಿರುವ ಸರಕಾರಿ ಕಚೇರಿಗಳಿಗೆ ನೀರಿನ ತೆರಿಗೆ ಪಾವತಿ ಮಾಡುವಂತೆ ನೋಟಿಸ್‌ ನೀಡಲಾಗಿದೆ. 15 ದಿನಗಳಲ್ಲಿ ಸಂಬಂಧ ಪಟ್ಟ ಸರಕಾರಿ ಕಚೇರಿಗಳು ಅಥವಾ ಸಂಸ್ಥೆಗಳಿಗೆ ತೆರಿಗೆ ಪಾವತಿಯಾಗದೇ ಇದ್ದರೆ ನೀರಿನ ಸಂಪರ್ಕವನ್ನು ಅನಿವಾರ್ಯವಾಗಿ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್‌ ರೆಡ್ಡಿ.
195 ಕೋಟಿ ರೂ. ನೀರಿನ ಕರ ಬಾಕಿ ಇರುವುದರಿಂದ ನಿರ್ವಹಣೆಗೆ ಸಮಸ್ಯೆಯಾಗಿದೆ. ಹಲವು ಬಾರಿ ನೋಟಿಸ್‌ ನೀಡಲಾಗಿದ್ದರೂ ಸಾಕಷ್ಟು ಮಂದಿ ತೆರಿಗೆ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ. ನೀರಿನ ಕರ ಬಾಕಿ ಪಾವತಿ ಮಾಡದ ಸರಕಾರಿ ಸಂಸ್ಥೆಗಳಿಗೂ ಸಹ 15 ದಿನ ಗಡುವು ನೀಡಲಾಗಿದ್ದು, ಬಳಿಕ ಸಂಪರ್ಕ ಕಡಿತಗೊಳಿಸಲಾಗುವುದು.
ಜಿ.ಲಕ್ಷ್ಮಿಕಾಂತ್ ರೆಡ್ಡಿ, ಆಯುಕ್ತ, ಮೈಸೂರು ಮಹಾನಗರ ಪಾಲಿಕೆಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಪಟ್ಟಿ ಮಾಡಲಾಗಿದೆ. ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸುವರ್ಣಾ, ಇಇ, ವಾಣಿವಿಲಾಸ ನೀರು ಸರಬರಾಜು ವಿಭಾಗ.

Contact us for classifieds and ads : +91 9742974234



 
error: Content is protected !!