ಜನವರಿ 26 ರಂದೇ ಗಣರಾಜ್ಯೋತ್ಸವ ಯಾಕೆ?
ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಮಹಾನ್ ದೇಶ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನೆಲ, ಜಲ ,ಭಾಷೆ ,ಸಂಸ್ಕೃತಿ ,ಇತಿಹಾಸ, ವೈಭವ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ ಮತ್ತು ವಿಶೇಷ . ನಮ್ಮ ದೇಶವು ಪ್ರಪಂಚದ ಅತಿ ದೊಡ್ಡ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸುತ್ತೇವೆ. ದೇಶದೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಅಭಿಮಾನದಿಂದ ಗಣರಾಜ್ಯೋತ್ಸವವನ್ನು ನೆರವೇರಿಸುತ್ತೇನೆ. ಗಣರಾಜ್ಯೋತ್ಸವದ...