ಅರ್ಜುನ. ಹೆಸರಿಗೆ ತಕ್ಕಂತೆಯೇ ಇದ್ದ. ಕಂಬದಂಥ ಕಾಲು, ಗಟ್ಟಿ ಮುಟ್ಟಾದ ಮೈಕಟ್ಟು, ಬೆಟ್ಟವನ್ನೂ ಅಲುಗಾಡಿವಷ್ಟು ಶಕ್ತಿಶಾಲಿ. ತಾನು ಎಷ್ಟೇ ಬಲಾಢ್ಯನಾಗಿದ್ರೂ ಅಷ್ಟೇ ಸೌಮ್ಯ ಸ್ವಭಾವ. 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿ ವಿಗ್ರಹ ಹೊತ್ತು ಹೆಜ್ಜೆ ಹಾಕುತ್ತಿದ್ರೆ ಇಡೀ ರಾಜಬೀದಿಯೇ ಕಂಪಿಸುತ್ತಿತ್ತು. ಲಕ್ಷಾಂತರ ಕಂಗಳು ಅರ್ಜುನನ ಮೇಲೆಯೇ ನೆಟ್ಟಿರುತ್ತಿತ್ತು. ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದ್ದ ಅದೇ ಅರ್ಜುನ ಇಂದು ನಮ್ಮೊಂದಿಗಿಲ್ಲ. ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಚಿರನಿದ್ರೆಗೆ ಜಾರಿದ್ದಾನೆ. ಅರಣ್ಯಾಧಿಕಾರಿಗಳ...
ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...