ಯೋಗದ ಮೂಲಕ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ
ಕೋವಿಡ್-೧೯ ನಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳು: ಕೋವಿಡ್-೧೯ ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿಯಾಗಿ ತಲೆಯೆತ್ತಿದೆ. ಕೊರೋನಾ ವೈರಸ್‌ನ ದಾಳಿಯಾದ ಮೇಲೆ ಚಿಕಿತ್ಸೆಗಾಗಿ ಒದ್ದಾಡುವ ಬದಲು ವೈರಸ್‌ನ ದಾಳಿಯಿಂದ ತಪ್ಪಿಸಿಕೊಳ್ಳುವುದು ಒಳಿತು. ಉತ್ತಮ ಜೀವನಶೈಲಿಯಿಂದ ಕೊರೋನ ಅಟ್ಟಹಾಸ ತಡೆಗಟ್ಟಲು ಸಾಧ್ಯವಿದೆ. ಶುಚಿಯಾಗಿರುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರ ಜೊತೆಗೆ ಒಂದಿಷ್ಟು ಯೋಗಾಭ್ಯಾಸ ಮಾಡಿದ್ದಲ್ಲಿ ಕೊರೋನಾದಿಂದ ದೂರ ಉಳಿಯಬಹುದು. ಯೋಗಾಭ್ಯಾಸದಿಂದ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಆತ್ಮಸ್ಥೈರ್ಯ,...