ಮಕರ ಸಂಕ್ರಾಂತಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು
ಸಂಕ್ರಾಂತಿಯು ಹೊಸತನದ ಪ್ರತೀಕ. ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದ್ದು, ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ಸಲುವಾಗಿ ಸಂಭ್ರಮ ಸಡಗರದಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಸಂಕ್ರಾಂತಿಯ ದಿನ ಬೆಳಗ್ಗೆ ಕರಿ ಎಳ್ಳನ್ನು ಪುಡಿ ಮಾಡಿ ಮೈಗೆ ಹಚ್ಚಿ ಸ್ನಾನ ಮಾಡಿ, ಸೂರ್ಯ ದೇವನಿಗೆ ಪೂಜೆ ಮಾಡುತ್ತೇವೆ. ಕರಿ ಎಳ್ಳು, ಕುಂಬಳಕಾಯಿಯನ್ನು ದಾನವಾಗಿ ನೀಡಿ ಎಲ್ಲರ ಮನೆಗೆ ಎಳ್ಳು, ಬೆಲ್ಲ ಹಾಗೂ ಕಬ್ಬನ್ನು ಹಂಚುತ್ತೇವೆ. ಶನಿ ದೋಷ ನಿವಾರಣೆಗೆಂದು...