ಚಾಮುಂಡಿ ಬೆಟ್ಟದಲ್ಲಿ ಅಂಧಕಾಸುರ ಸಂಹಾರ: ಕತ್ತಲೆಯಿಂದ ಬೆಳಕಿನೆಡೆಗೆ ಒಂದು ದೈವಿಕ ಪಯಣ
ಮೈಸೂರು: ಸಂಪ್ರದಾಯ ಮತ್ತು ಆಧ್ಯಾತ್ಮದ ನೆಲೆಬೀಡಾದ ಚಾಮುಂಡಿ ಬೆಟ್ಟ ಇಂದು ಒಂದು ಅಪರೂಪದ ಹಾಗೂ ಪವಿತ್ರವಾದ ಧಾರ್ಮಿಕ ವಿಧಿವಿಧಾನಕ್ಕೆ ಸಾಕ್ಷಿಯಾಯಿತು. ಲೋಕಮಾತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಇಂದು ಸಂಜೆ ಭಕ್ತಿಯ ಪರವಶತೆಯ ನಡುವೆ 'ಅಂಧಕಾಸುರ ವಧೆ'ಆಚರಣೆ ಜರುಗಿತು. ಏನಿದು ಅಂಧಕಾಸುರ ವಧೆ? ಚಾಮುಂಡಿ ಬೆಟ್ಟವು ಮಹಿಷಾಸುರ ಮರ್ಧಿನಿಯ ವಿಜಯಕ್ಕೆ ಹೆಸರಾಗಿದ್ದರೂ, ಅಂಧಕಾಸುರನ ಸಂಹಾರದ ಕಥೆಯೂ ಅಷ್ಟೇ ಮಹತ್ವದ್ದಾಗಿದೆ. ಪುರಾಣಗಳ ಪ್ರಕಾರ, 'ಅಂಧಕಾಸುರ' ಎಂದರೆ ಕೇವಲ ಒಬ್ಬ ರಾಕ್ಷಸನಲ್ಲ; ಅವನು ಅಜ್ಞಾನ ಮತ್ತು ಅಹಂಕಾರದ ಸಂಕೇತ....





