ಪೆಟ್ರೋಲಿಯಂ ಉತ್ಪನ್ನಗಳ ಕಲಬೆರಕೆಯ ರಿಫೈನ್ಡ್ ಎಣ್ಣೆ ಬೇಕೋ..? ಆರೋಗ್ಯಕ್ಕೆ ಪೂರಕವಾದ ಅಂಶಗಳೇ ತುಂಬಿರುವ ಗಾಣದ ಎಣ್ಣೆ ಬೇಕೋ..?
ಎಸ್.ಜೆ. ಹೇಮಂತ್
ಆತ್ಮೀಯ ರೈತ ಬಾಂಧವರೇ ಯುವ ರೈತರೇˌ ಕೆ.ಆರ್.ನಗರ ತಾಲ್ಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿಯೊಂದಿಗೆ ಮರದ ಎತ್ತಿನಗಾಣವಾಡಿಸುತ್ತಾ ಅದರ ದೇಸಿ ಸೊಗಡನ್ನು ದೇಶದಾದ್ಯಂತ ಹಾಗೂ ಕೆಲವು ಹೊರದೇಶಗಳಿಗೂ ಪಸರಿಸುತ್ತಿರುವ ಶ್ರೀ ನವೀನ್ ಕುಮಾರ್ ರವರ ಕ್ಷೇತ್ರಕ್ಕೆ ಸ್ನೇಹಿತನೊಂದಿಗೆ ತೆರಳಿದ್ದೆನು.
ನಿಜಕ್ಕೂ ಅಲ್ಲಿ ನನಗಾದಂತಹ ಅನುಭವ ಅದ್ಬುತ. 2 ಎಕರೆ ಪ್ರದೇಶದಲ್ಲಿ ಸುಭಾಷ್ ಪಾಳೇಕಾರ್ ಪದ್ದತಿಯಲ್ಲಿ ನುಗ್ಗೆˌ ಸೀಬೆˌ ಪಪಾಯˌ ಸೊಪ್ಪುˌ ತರಕಾರಿಗಳುˌ ಅಲಸಂದೆˌ ತೆಂಗುˌಅಡಿಕೆˌ ಶುಂಠಿˌ ಅರಿಶಿನˌ ಬೆಂಡೆ ˌಹೀಗೆ ಸುಮಾರು 20-25 ತರಹೇವಾರು ಬೆಳೆಗಳು. ಸುವಾಸನೆಯುಕ್ತ ಸಮೃದ್ದ ಸಾವಯವ ಮಣ್ಣುˌ ಸಮೃದ್ದವಾಗಿರುವ ತಿಪ್ಪೆಗೊಬ್ಬರದ ರಾಶಿಗಳುˌ ಜಮೀನಿನ ಸುತ್ತಲೂ ತೇಗˌ ಸಾಗುವಾನಿˌ ಅಲ್ಲಲ್ಲ ಹಬ್ಬಿರುವ ಕಾಳು ಮೆಣಸುˌ ವಿಳ್ಯೆದೆಲೆಗಳು ಕಣ್ಣಿಗೆ ಮುದ ನೀಡಿದವು.
ನಂತರ ಒಂದರ ಪಕ್ಕ ಒಂದರಂತೆ ಎರಡು ಅಂಕಣಗಳಲ್ಲಿ ತಾರಿಸಿದ ಸಗಣಿ ನೆಲದಲ್ಲಿ ಹಾಕಿರುವ 6 ಗಾಣಗಳು. ಆ ಗಾಣಗಳನ್ನು ನೆಡೆಸಲು ಸಿದ್ದ ಎಂಬಂತೆ ಎದ್ದು ನಿಂತಿರುವ 8-10 ದೇಸಿ ತಳಿ ಹಸು ಮತ್ತು ಎತ್ತುಗಳು. ನಂತರ ಪ್ರಾರಂಭವಾದ ಗಾಣಗಳು ನಿಮಿಷಕ್ಕೆ ಎರಡು ಬಾರಿ ತಿರುಗುವ ಈ ಮರದ ಗಾಣಗಳು ಅರೆಯಲು ಬೇಕಾದ ನಿಯಮಿತ ಉಷ್ಣಾಂಶವನ್ನುಂಟು ಮಾಡಿ ಪದಾರ್ಥವನ್ನು ಅರೆದು ಎಣ್ಣೆಯನ್ನು ಕೈಗೀಯುತ್ತವೆ. ಇಲ್ಲಿ ಕುಸುಬೆ ಎಣ್ಣೆˌ ಎಳ್ಳೆಣ್ಣೆ ˌಹರಳೆಣ್ಣೆˌ ಕೊಬ್ಬರಿ ಎಣ್ಣೆˌ ಕಡಲೇ ಕಾಯಿ ಎಣ್ಣೆˌ ಹುಚ್ಚೆಳ್ಳು ಎಣ್ಣೆಗಳು ಹಾಗೂ ಅವುಗಳ ಹಿಂಡಿ ಇಲ್ಲಿ ಉತ್ಪಾದನೆಯಾಗುತ್ತದೆ.
ಇವರ ಧ್ಯೇಯ ಪ್ರತೀ ಹಳ್ಳಿ ಹಳ್ಳಿಯಲ್ಲೂ ಎರಡೆರಡು ಎತ್ತಿನ ಗಾಣಗಳಾಗಬೇಕು ಈ ನಿಮಿತ್ತ ಜನರಿಗೆ ರಾಸಾಯನಿಕ ಮುಕ್ತ ವಿಷಮುಕ್ತ ಎಣ್ಣೆಯು ತಲುಪಬೇಕು ಎನ್ನುವುದು. ಈ ನಿಟ್ಟಿನಲ್ಲಿ ಇವರು ತಮ್ಮದೇ ಆದ ಒಂದು ಬ್ರಾಂಡಿಂಗ್ ಮಾಡಿ “ದೇಸಿರಿ ನ್ಯಾಚುರಲ್ಸ್” ಮೂಲಕ ತಮ್ಮ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.
ನಿಮಗೆ ಮೊದಲೇ ಹೇಳಿದಂತೆ ನೀವುಗಳು ಉಪಯೋಗಿಸುತ್ತಿರುವ ರೀಫೈನ್ಡ್ ಆಯಿಲ್ ಗಳು ವೈಟ್ ಆಯಿಲ್ ಎಂಬ ಮಾರಕವಾದ ಪೆಟ್ರೋಲಿಯಂ ಉತ್ಪನ್ನಗಳ ಕಲಬೆರಕೆಯಿಂದ ಶೇ 90% ವಿಷಮಯವಾಗಿ ನಮ್ಮ ತಟ್ಟೆಗೆ ಬಂದು ಬೀಳುತ್ತಿವೆ. ಅದನ್ನು ಚಪ್ಪರಿಸಿಕೊಂಡು ಸೇವಿಸುತ್ತಿರುವ ನಾವುಗಳು ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಹೆಚ್ಚಾಗಿ ಬಿ.ಪಿˌ ಶುಗರ್ˌ ಕ್ಯಾನ್ಸರ್ˌಹೃದಯಾಘಾತದಂತಹ ಮಾರಕ ಖಾಯಿಲೆಗಳಿಗೆ ತುತ್ತಾಗಿ ಕೇವಲ 20-35 ವರ್ಷದೊಳಗೇ ಶಿವನ ಪಾದ ಸೇರುವ ಗತಿ ಬಂದೊದಗಿದೆ.ಇದಕ್ಕೆಲ್ಲಾ ಕಾರಣ ನಾವುಗಳೇ!!
ಎಲ್ಲದಕ್ಕೂ ಕಾರ್ಪೋರೇಟ್ ಗಳ ಮೇಲೆ ಅವಲಂಬಿತರಾಗಿರುವ ನಾವುಗಳು ಇಂದು ಅವರುಗಳಿಂದ ಪಡೆಯುತ್ತಿರುವ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವುದಾಗಲೀ ಒಳಿತು ಕೆಡಕುಗಳನ್ನಾಗಲಿ ಪರೀಕ್ಷಿಸುವ ಕೆಲಸ ಮಾಡುತ್ತಿಲ್ಲ. ಕಡಿಮೆ ಬೆಲೆಗೆ ಸಿಗುತ್ತದೆಂಬ ಕಾರಣಕ್ಕಾಗಿ ಇಂದು ನಾವು ವಿಷಾಹಾರಗಳನ್ನು ಸೇವಿಸುವ ಗತಿ ಬಂದೊದಗಿದೆ. ಇದು ಬದಲಾಗಬೇಕು. ನವೀನ್ ರಂತೆ ರೈತರ ಬ್ರಾಂಡ್ ಪ್ರತೀ ಹಳ್ಳಿಗಳಲ್ಲೂ ದೊರೆಯಬೇಕು. ಕಾರ್ಪೊರೇಟ್ ವಲಯಗಳನ್ನು ಬಡಿದೋಡಿಸಿ ನಮ್ಮಲ್ಲೇ ಇರುವ ನಮ್ಮ ಆರೋಗ್ಯವನ್ನು ಅಭಿವೃದ್ದಿಗೊಳಿಸುವ ದೇಸಿ ಉತ್ಪನ್ನಗಳನ್ನು ಉತ್ಪಾದಿಸಿ ನಮ್ಮದೇ ಬ್ರಾಂಡ್ ಸೃಷ್ಟಿಸಿ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯ ಗ್ರಾಮ ಸ್ವಾವಲಂಬನೆ ಕನಸನ್ನು ನನಸು ಮಾಡುವ ಮೂಲಕ ಇಡೀ ದೇಶದಲ್ಲೇ ಇದೊಂದು ಬೃಹತ್ ಆಂದೋಲನವಾಗಲು ಸಹಕಾರಿಗಳಾಗಬೇಕು.
ಇಂದು ನಾವು ದಿನನಿತ್ಯ ತಪ್ಪದೇ ಅಡುಗೆಗಳಲ್ಲ ಉಪಯೋಗಿಸುವ ವಸ್ತುವೆಂದರೇ ಅದು ಅಡುಗೆ ಎಣ್ಣೆ.ಈ ಎತ್ತಿನ ಗಾಣದ ಎಣ್ಣೆಯು ಸ್ವಲ್ಪ ದುಬಾರಿ ಅನ್ನುವುದನ್ನು ಬಿಟ್ಟರೇ ಉಳಿದೆಲ್ಲ ಅಂಶಗಳು ನಮ್ಮೆಲ್ಲರ ಸ್ವಸ್ಥ ಆರೋಗ್ಯಕ್ಕೆ ಪೂರಕವಾದ ಅಂಶಗಳೇ ಇವೆ.ಇಲ್ಲಿಯವರೆಗೂ ನಾವು ಗೊತ್ತಿದ್ದೂ ಸಹ ವಿಷವನ್ನು ಸೇವಿಸುತ್ತಾ ಬಂದಿದ್ದೇವೆ.
ಇನ್ನೂ ಮುಂದಾದರೂ ನಾವು ಜಾಗೃತರಾಗಿ ವಿಷಮುಕ್ತವಾದ ರಾಸಾಯನಿಕಮುಕ್ತವಾದ ಉತ್ತಮ ಪೋಷಕಾಂಶಗಳುಳ್ಳ ಪರಿಶುದ್ದವಾದ ದೇಸಿ ಮರದ ಎತ್ತಿನಗಾಣದಿಂದ ಪಡೆದ ಎಣ್ಣೆಗಳನ್ನೇ ಉಪಯೋಗಿಸುವ ಹಾಗೂ ಇತರರಿಗೂ ಉಪಯೋಗಿಸುವಂತೆ ಮನವೊಲಿಸುವ ಪ್ರಯತ್ನ ಮಾಡಲೇಬೇಕು. ಇದು ನನ್ನ ಸ್ವಂತ ಅನುಭವ. ತಾವುಗಳೂ ಕೂಡಾ ಈ ಬಗ್ಗೆ ಯೋಚನೆ ಮಾಡದೇ ಎತ್ತಿನ ಗಾಣದಿಂದಲೇ ಉತ್ಪತ್ತಿಯಾಗುವ ಪರಿಶುದ್ದವಾದ ಎಣ್ಣೆಗಳನ್ನೇ ಬಳಸುವ ಶಪಥಗೈದು ನಿಮ್ಮ ಹಾಗೂ ನಿಮ್ಮ ಮಕ್ಕಳು ಮತ್ತು ಕುಟುಂಬವನ್ನು ವಿಷಾಹಾರ ಸೇವನೆಯಿಂದ ಮುಕ್ತಗೊಳಿಸಿ ಮುಂದಾಗುವ ಅನಾಹುತಗಳನ್ನು ಇಂದೇ ತಪ್ಪಿಸಿ.
ಇಂತಿ ನಿಮ್ಮವˌ
ಎಸ್.ಜೆ.ಹೇಮಂತ್
ಸಹಾಯಕ ತಾಂತ್ರಿಕ ವ್ಯವಸ್ಥಾಪಕರು.
ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ.
ಮೈಸೂರು ತಾ.
Follow us on:
https://facebook.com/askmysuru
https://instagram.com/askmysuru
Join us on:
https://facebook.com/groups/askmysuru
Email:
lets(at)askmysuru.com
Website:
http://askmysuru.com
Subscribe us on:
https://youtube.com/c/askmysuru