ಮೈಸೂರು ಮುಡಾ ಆಯುಕ್ತರಾದ ಶ್ರೀ ನಟೇಶ್ ಹಾಗೂ ಅಧ್ಯಕ್ಷರಾದ ಶ್ರೀ ರಾಜೀವ್ ರವರ ದೂರದೃಷ್ಟಿಯಿಂದ ಮುಡಾ ವ್ಯಾಪ್ತಿಗೆ ಬರುವ ನಗರದ ಉದ್ಯಾನವನಗಳನ್ನು ಹಾಗು ಸುತ್ತಮುತ್ತ ಸಾವಿರಾರು ಗಿಡಗಳ ನೆಡುವಿಕೆ ಹಾಗು ಪೋಷಣೆಯ ನಗರ ಹಸರೀಕರಣದ ಮಹತ್ವವಾದ ಯೋಜನೆಯಿಂದ ಮುಂದಿನ ಪೀಳಿಗೆಯೂ ಸಹ ಆಮ್ಲಜನಕದ ಕೊರತೆಯನ್ನು ಎದುರಿಸುವುದಿಲ್ಲ.
ನಮ್ಮ ಸಾಂಸ್ಕೃತಿಕ ನಗರ ಮೈಸೂರು ಹಚ್ಚ ಹಸಿರಿನಿಂದ ಕಂಗೊಳಿಸಬೇಕೆಂಬುದೇ ಇದರ ಗುರಿಯಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಸವಮಾರ್ಗ ಫೌಂಡೇಷನ್ ಗೆ ವಿಜಯನಗರ 4ನೇ ಹಂತದಲ್ಲಿರುವ ಮುಡಾ ಉದ್ಯಾನವನವನ್ನು ಹಸ್ತಾಂತರಿಸಿತ್ತು.
೨೫೦ ಗಿಡಗಳನ್ನು ನೆಟ್ಟು ನೀರುಣಿಸಿ ಉದ್ಯಾನವನವನ್ನು ಸ್ವಚ್ಛ ಗೊಳಿಸಿ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ “ಎಸ್. ಬಸವರಾಜು” ರವರು ಈ ಯೋಜನೆಯನ್ನು ಸಫಲಗೊಳಿಸುವಲ್ಲಿ ಮಹತ್ವವಾದ ಪಾತ್ರ ವಹಿಸಿದ್ದಾರೆ.