History

ಕನ್ನಡದಲ್ಲೇ ಮೊಟ್ಟ ಮೊದಲ ಸಂದರ್ಶನ: ವಿಜಯನಗರ ಸಂಸ್ಥಾನದ ಮುಂದುವರೆದ ಭಾಗ ನಿಮಗೆ ಗೊತ್ತಾ?

Purushotham Agni

ವಿಜಯನಗರ ಎಂದ ಕೂಡಲೇ ಇಡೀ ವಿಶ್ವವೇ ಅಲ್ಲಿನ ಶಿಲ್ಪಕಲೆಗಳ ವೈಭವವನ್ನ ಒಮ್ಮೆ ರೋಮಾಂಚನಕಾರಿಯಾಗಿ ನೋಡುತ್ತದೆ.

sri krishnadevaraya hampi

ವಿಜಯನಗರ ಸಾಮ್ರಾಜ್ಯದ ಹಂಪಿ ವಿಶ್ವಪರಂಪರೆಯ ಪ್ರತೀಕ. ಅಲ್ಲಿನ ಪ್ರತಿ ಶಿಲ್ಪಕಲೆಗಳು, ಕಲ್ಲುಗಳು, ಕಣಿವೆಗಳು, ಹಿಂದಿನ ವಜ್ರ ವೈಡೂರ್ಯಗಳನ್ನು ಸೇರಿನಲ್ಲಿ ಮಾರುತ್ತಿದ್ದರೆನ್ನುವ ಬಜಾರಿನ ದಾರಿಗಳು, ಸಾಹಿತ್ಯ ಸಂಗೀತಕ್ಕೆ ಕೊಟ್ಟ ಪಾಧಾನ್ಯತೆ, ಪರಿಸರ ಪ್ರೇಮ ಎಲ್ಲವನ್ನೂ ಇವತ್ತಿಗೂ ಕಾಣಬಹುದಾಗಿದೆ.

ಅಷ್ಟೇ ಅಲ್ಲ ರಾಮಾಯಣ ಬರಿ ಪುರಾಣವಲ್ಲ ಅದು ಇತಿಹಾಸ ಎಂದು ಸಾಬೀತಾಗಲು ಅಲ್ಲಿ ಹನುಮ ಜನಿಸಿದ ಅಂಜನಾದ್ರಿ, ಕಿಷ್ಕಿಂದ, ಮಲ್ಯವಂತ, ಮಾತಂಗ, ಋಷ್ಯಮೂಕ, ಹೇಮಕೂಟ, ರತ್ನಕೂಟಗಳನ್ನು ನಾವು ಕಾಣಬಹುದು. ಹೀಗೆ ವಿಜಯನಗರದ ಗಲ್ಲಿಗಲ್ಲಿಗಳನ್ನು ತಿರುಗುತ್ತ, ಮೂಲೆ ಮೂಲೆಯನ್ನೂ ಬಿಡದೆ ಸಂಚರಿಸುತ್ತ ಹೊರಟಾಗ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಿದ ಒಂದು ಬಲವಾದ ಅನುಮಾನ ಮತ್ತು ಪ್ರಶ್ನೆ : ಇಷ್ಟು ಸಾಂಸ್ಕೃತಿಕ, ಧಾರ್ಮಿಕ, ಕ್ಷಾತ್ರಬಲ , ಜನಸ್ನೇಹಿ ಪರಂಪರೆ , ಬಹುಮುಖಿ ವೈಭವಗಳನ್ನು ನೋಡುವಾಗ ಇಷ್ಟು ಬೇಗ ಈ ಸಂಸ್ಥಾನ ಪತನಗೊಳ್ಳಲು ಹೇಗೆ ತಾನೆ ಸಾಧ್ಯ ? ಎಂದು

ಯಾಕೆಂದರೆ ಸಂಗಮವಂಶದ ಸಹೋದರರುಗಳಾದ ಹರಿಹರ ಮತ್ತು ಅಕ್ಕಬುಕ್ಕರು ಗುರು ವಿದ್ಯಾರಣ್ಯರ ನಿರ್ದೇಶನದ ಮೇಲೆ ಹಂಪಿಯ ವಿಜಯನಗರ ರಾಜ್ಯ ಸ್ಥಾಪಿಸಿರುವುದು ಸಾಮಾನ್ಯ ಸಂಗತಿಯಂತೂ ‍ಅಲ್ಲವೇ ಅಲ್ಲ.

ಹಾಗಿದ್ದ ಮೇಲೆ ವಿಜಯನಗರದ ಜಾಡು ಹಿಡಿದು ಇತಿಹಾಸದ ಪುಟಗಳನ್ನು ತಿರುವಿಕೊಂಡು
ವಿಜಯನಗರ ಸಂಸ್ಥಾನದ ಮುಂದುವರಿದ ವಂಶಸ್ಥರು ಯಾರಾದರೂ ಇರಲೇಬೇಕಲ್ಲ!? ಅಂತ ಹುಡುಕುತ್ತಾ ಹೊರಟಾಗಸತತ ಒಂದು ವಾರದ ನಿರಂತರ ಹುಡುಕಾಟ “Ask ಮೈಸೂರು” ತಂಡದ ಅನುಮಾನಗಳಿಗೆ ಪರಿಹಾರ ಸಿಗಲೇಬೇಕು ಎಂದು ನಿಶ್ಚಯಿಸಿ ಆಗಿತ್ತು. ಮುಂದುವರಿದ ಭಾಗವನ್ನು ಹುಡುಕಲೇಬೇಕು ಎನ್ನುವ ತವಕದಲ್ಲಿ ಹೊರಟವರಿಗೆ ಅಳಿಯ ರಾಮರಾಯ ರಾಜಮನೆತನದವರಾದ ಆನೆಗೊಂದಿ ಸಂಸ್ಥಾನದ ಹತ್ತೊಂಬತ್ತನೇ ತಲೆಮಾರಿನ ಪ್ರಸ್ತುತ ವಿಜಯನಗರದ ಕರ್ನಾಟಕ ಸಂಸ್ಥಾನದ ರಾಜ ಶ್ರೀಗಳಾದ ಶ್ರೀಕೃಷ್ಣದೇವರಾಯರು ಸಿಕ್ಕಿಯೇ ಬಿಟ್ಟರು. ಅವರು ಅತ್ಯಂತ ಆದರದಿಂದ ಸ್ವಾಗತಿಸಿದ ರೀತಿ, ಸರಳತೆ, ಸಜ್ಜನಿಕೆ ವ್ಯಕ್ತಿತ್ವವು, ತಂಡವನ್ನು ಸೆಳೆದದ್ದಂತೂ ನಿಜ…

1565 ರಲ್ಲಿ ನಡೆದ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು ಎಂದು ಭಾವಿಸಿದವರಿಗೆಲ್ಲ ಒಮ್ಮೆ ಮುಂದುವರಿದ ಪರಂಪರೆಯನ್ನು ರಾಜಮನೆತನವನ್ನು ಅವರ ಮಾತುಗಳನ್ನು ನೀವು ಕೇಳಲೇಬೇಕು.

ಇತಿಹಾಸದ ರತ್ನಗರ್ಭ ಎಷ್ಟೊಂದು ಹುಡುಕುತ್ತ ಹೊರಟಷ್ಟು ಸತ್ಯಗಳು ಜೀವಂತವಾಗಿ ಕಣ್ಣಮುಂದೆ ಇದೆ. ಹತ್ತೊಂಬತ್ತನೇ ತಲೆಮಾರಿನ ರಾಜಶ್ರೀ ಶ್ರೀಕೃಷ್ಣದೇವರಾಯರು “Ask ಮೈಸೂರು” ತಂಡದ ಸಂದರ್ಶನವೊಂದರಲ್ಲಿ ತಮ್ಮ ಮುಂದುವರಿದ ಪರಂಪರೆಯ ಬಗ್ಗೆ ಮನ ಬಿಚ್ಚಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರೊಳಗೆ ಇರುವಂತಹ ಭಾವನೆಗಳನ್ನು, ಸಾಮಾಜಿಕ ಕಳಕಳಿಯನ್ನು, ವಿಜಯನಗರ ಸಂಸ್ಥಾನದ ಮುಂದಿನ ಯೋಜನೆಗಳನ್ನು, ಪ್ರಸ್ತುತ ಸಮಾಜಕ್ಕೆ ಬೇಕಾದ ಮೌಲ್ಯಗಳ ಬಗ್ಗೆ ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಅದನ್ನು ನಾವು ನೀವು ಕನ್ನಡಿಗರು ನೋಡಿ ಒಮ್ಮೆ ಆಲಿಸಲೇಬೇಕು. ಏಕೆಂದರೆ ವಿಜಯನಗರ ಸಂಸ್ಥಾನವೆಂದರೆ ಕರ್ನಾಟಕ ರಾಜ್ಯ ಸಂಸ್ಥಾನ ಕರುನಾಡಿನ ಅಸ್ಮಿತೆ. ನಾನಂತೂ ಕನ್ನಡದಲ್ಲೇ ಮೊದಲಿಗೆ ಮಾಡಿರುವ ಅವರ ಸಂದರ್ಶನವನ್ನು ನೋಡಿ ಇದನ್ನು ಜನತೆಯೊಂದಿಗೆ ಹಂಚಿಕೊಳ್ಳಬೇಕು ಎಂಬುದು ಅಭಿಲಾಷೆ. ನೀವು ಸಹ ಯೂಟ್ಯೂಬ್ ನಲ್ಲಿ Ask Mysuru ಚಾನೆಲ್ ಗೆ ಹೋಗಿ “ರಾಜಶ್ರೀ ಶ್ರೀ ಕೃಷ್ಣದೇವರಾಯರ” ಸಂದರ್ಶನವನ್ನು ನೋಡಬಹುದಾಗಿದೆ.

 

Contact us for classifieds and ads : +91 9742974234



 
error: Content is protected !!