ತಾಯಿ ಎಂದರೆ ಜನನಿ ಅವಳೇ ಜನ್ಮದಾತೆ
ಪುಟ್ಟ ಕೂಸಿಗೆ ಜನ್ಮ ನೀಡುವಳು ಮಾತೇ
ಆ ಕೂಸಿಗೆ ನೀಡುವಳು ಮಾತೃ ಮಮತೆ
ಆ ಮಮತೆಯಲ್ಲಿ ಇರಲಾರದು ವಿಷಮತೆ
ಅಕ್ಕರೆಯು ಆ ಕೂಸಿಗೂ ಹೊಸ ವಿಸ್ಮಯತೆ
ಪ್ರೀತಿಯಿಂದ ನೋಡುವಳು ಏನು ಕಡಿಮೆಯಾಗದಂತೆ
ಮಗುವಿಗೆ ವರುಷ ವರುಷಗಳು ಕಳೆದಂತೆ
ತಾಯಿಯ ಮನದ ತುಂಬ ತುಂಬುವುದು ಸಂತೋಷತೆ
ಕೂಸಿನ ನಡಿಗೆಯಲ್ಲಿ ಕಾಣುವಳು ತನ್ಮಯತೆ
ಮಗುವಲ್ಲಿ ಮೂಡಿಸುವಳು ಅಕ್ಷರಗಳ ಬಗೆಗೆ ಏಕಾಗ್ರತೆ
ವಿದ್ಯೆಯನ್ನು ಅಕ್ಕರೆಯಿಂದ ಕಲಿಸುವ ಅಕ್ಷರ ಮಾತೆ
ವಿದ್ಯೆ ಕಲಿತ ಮಗುವಿಗೆ ವಯಸ್ಸಾಗುತ್ತಿದ್ದಂತೆ
ಮರೆತು ಬಿಡುವುದು ತಾಯಿಯ ಮಮತೆ
ಸ್ವಾರ್ಥದ ಹೊರ ಪ್ರಪಂಚಕ್ಕೆ ಹೋಗುತ್ತಿದ್ದಂತೆ
ಅಮ್ಮನಿoದ ದೂರಾಗುವನು. ಏನೋ ಸಾಧನೆ ಮಾಡುವವನಂತೆ
ಸಮಯ ಸಿಕ್ಕಾಗ ಮಾತ್ರ ತಾಯಿಯ ಕಾಣಲು ಬರುವರಂತೆ
ಅಲ್ಲೀ ತನಕವೂ ತಾಯಿ ಇರುವಳು ಒಬ್ಬಂಟಿಯoತೆ
ಮಕ್ಕಳಿಲ್ಲದ ಪ್ರಪಂಚದ ಬಗ್ಗೆ ಆಕೆಗಿಲ್ಲ ಚಿಂತೆ
ಇರುವಳು ಮಕ್ಕಳೇ ಸಂತೋಷಕ್ಕೆ ಕಾರಣ ಎನ್ನುವಂತೆ
ಎಷ್ಟು ಬರೆದರೂ ಮುಗಿಯದು ತಾಯಿಯು ಸಾಕಿ ಸಲಹಿದ ಕಥೆ
ಇದೇ ನನ್ನ ಪುಟ್ಟದಾದ ಜನ್ಮದಾತೆಯ ಬಗೆಗಿನ ಕವಿತೆ…
ಸಂಜನ ಹೆಗ್ಡೆ
10ನೇ ತರಗತಿ
ಸಾಂದೀಪನಿ ಆಂಗ್ಲ ಪ್ರೌಢಶಾಲೆ, ಶಿವಮೊಗ್ಗ