ಸಿವಿಲ್ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕಾರ: ಸಹೋದರಿ ಸೌಂದರ್ಯರಿಗೆ ಭಾವಪೂರ್ಣ ಅಭಿನಂದನೆ
ಮೈಸೂರು:- ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಆರಂಭವಾಗಿದ್ದು, ಸಹೋದರಿ ಸೌಂದರ್ಯ ಅವರು ಸಿವಿಲ್ ನ್ಯಾಯಾಧೀಶೆಯಾಗಿ ನ್ಯಾಯಪೀಠ ಅಲಂಕರಿಸಿದ ಸಂದರ್ಭವು ಭಾವನಾತ್ಮಕ ಹಾಗೂ ಗಂಭೀರ ವಾತಾವರಣಕ್ಕೆ ಸಾಕ್ಷಿಯಾಯಿತು. ನ್ಯಾಯದ ತಕ್ಕಡಿಯನ್ನು ಸಮತೋಲನದಲ್ಲಿ ಹಿಡಿದುಕೊಂಡು, ನೊಂದವರ ಪಾಲಿಗೆ ನ್ಯಾಯದ ಬೆಳಕಾಗುವ ಸಂಕಲ್ಪದೊಂದಿಗೆ ಅವರು ತಮ್ಮ ವೃತ್ತಿ ಜೀವನದ ಹೊಸ ಪಯಣ ಆರಂಭಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಮಹದೇವ ಸ್ವಾಮಿ ಹಾಗೂ ಕಡಕೋಳ ಕುಮಾರಸ್ವಾಮಿ ಅವರು ಸಹೋದರಿ ಸೌಂದರ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು. ಮಾತನಾಡಿದ ಮಹದೇವ ಸ್ವಾಮಿ ಅವರು, “ಸೌಂದರ್ಯ ಅವರು ತಮ್ಮ ಶ್ರಮ, ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಈ ಹಂತವನ್ನು ತಲುಪಿದ್ದಾರೆ. ನ್ಯಾಯಪೀಠದಲ್ಲಿ ಕುಳಿತುಕೊಳ್ಳುವುದು ಒಂದು ಹುದ್ದೆಯಲ್ಲ, ಅದು ಸಮಾಜದ ಮೇಲೆ ಇರುವ ಅಪಾರ ಹೊಣೆಗಾರಿಕೆಯ ಪ್ರತೀಕ....






