ಮೈಸೂರು ಯುವಕರ “ಟೀಂ ಕಾಳಿದಾಸ” ಚಿತ್ರದ ಬಿಡುಗಡೆಯ ಮುನ್ನವೇ ಮಂಡ್ಯ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಿಂದ ಪ್ರಶಸ್ತಿಯ ಗರಿ.
Mandya International Short Film Festival
ಮೈಸೂರು ಯುವಕರ “ಟೀಂ ಕಾಳಿದಾಸ” ಚಿತ್ರದ ಬಿಡುಗಡೆಯ ಮುನ್ನವೇ ಮಂಡ್ಯ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಿಂದ ಪ್ರಶಸ್ತಿಯ ಗರಿ.
ಮೈಸೂರಿನ ಮೂಲದ “ಕಿನೊಕ್ಲೌಡ್ಸ್” ತಂಡ ನಿರ್ಮಿಸಿ, ನಿರ್ದೇಶಿಸಿದ ‘ಟೀಂ ಕಾಳಿದಾಸ’ ಎಂಬ ಕಿರುಚಿತ್ರ ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿದ್ದು, ಏ.೨೪ರಂದು ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಪ್ರಶಸ್ತಿ ಲಭಿಸಿದ್ದರಿಂದ ಈ ಪ್ರಶಸ್ತಿಯನ್ನು ಕಿನೊಕ್ಲೌಡ್ಸ್ ತಂಡ ಡಾ.ರಾಜ್‌ಕುಮಾರ್ ಹಾಗೂ ಡಾ.ಪುನಿತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ.
‘ಟೀಂ ಕಾಳಿದಾಸ’ ಕಿರುಚಿತ್ರ ಕಥೆಯು ಐಟಿ ಸಂಸ್ಥೆಯಲ್ಲಿ ನಡೆದ ಒಂದು ಕೊಲೆಯ ಸುತ್ತ ಹೆಣೆಯಲಾಗಿದ್ದು, ಘಟನೆಯನ್ನು ಸಸ್ಪೆನ್ಸ್ ಮತ್ತು ಕಾಮಿಡಿ ರೂಪದಲ್ಲಿ ನಿರೂಪಣೆ ಮಾಡಲಾಗಿದೆ. ೨೦ ನಿಮಿಷಗಳ ಈ ಕಿರುಚಿತ್ರ ಆರಂಭದಿಂದ ಕಡೆತನಕ ಪ್ರೇಕ್ಷಕ ಉತ್ಸಾಹ ಹಾಗೂ ಕುತೂಹಲದಿಂದ ನೋಡುವಂತೆ ಮಾಡುತ್ತದೆ.
ಕಿನೊಕ್ಲೌಡ್ಸ್ ತಂಡದ ಮುಖ್ಯಸ್ಥ ಹಾಗೂ ಚಿತ್ರದ ನಿರ್ದೇಶಕ ಅರ್ಜುನ್ ಕಶ್ಯಪ್ ಮಾತನಾಡಿ, ಈ ಕಿರುಚಿತ್ರವನ್ನು ವೆಬ್ ಸೀರಿಸ್ ಆಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇತ್ತು. ಪ್ರಶಸ್ತಿ ಸ್ಪರ್ಧೆಗೆ ಆಹ್ವಾನ ಬಂದಿತ್ತು ಭಾಗವಹಿಸಿದ್ದೆವು ಅತ್ಯುತ್ತಮ ನಿರೂಪಣೆ ಪ್ರಶಸ್ತಿ ಬಂದಿದ್ದು, ನಮಗೆ ಹೆಚ್ಚು ಪ್ರೋತ್ಸಾಹ ಸಿಕ್ಕಂತಾಗಿದೆ. ಸ್ಪರ್ಧೆಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳ ನೂರಕ್ಕೂ ಹೆಚ್ಚು ಕಿರುಚಿತ್ರಗಳು ಭಾಗವಹಿಸಿ 16 ಚಿತ್ರಗಳು ನಾಮಿನೇಟ್ ಆಗಿದ್ದು ಅತ್ಯುತ್ತಮ ನಿರೂಪಣೆ ಪುರಸ್ಕಾರ ನಮ್ಮ ‘ಟೀಂ ಕಾಳಿದಾಸ’ ಚಿತ್ರಕ್ಕೆ ಲಭಿಸಿದೆ ಎಂದರು.
ಈ ಕಿರು ಚಿತ್ರದ ತಾರಾಗಣದಲ್ಲಿ ಪವನ್ ವೇಣುಗೋಪಾಲ್, ಜಗ್ಗಪ್ಪ, ವಿನೀತ್ ಕುಮಾರ್, ಹರ್ಷ, ಶಾಲ್ಮಲಿ ನಟಿಸಿದ್ದಾರೆ. ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಅರ್ಜುನ್ ಕಶ್ಯಪ್, ಸಂಕಲನ- ಹರ್ಷಾನಂದ, ಛಾಯಾಗ್ರಹಣ-ಎನೋಶ್ ಒಲಿವೆರ ಮತ್ತು ಕೌಶಿಕ್ ಕುಮಾರ್, ಸಂಗೀತ-ಅತಿಶಯ್ ಜೈನ್ ಮಾಡಿದ್ದಾರೆ.