ಈ ವಿದ್ಯಾರ್ಥಿ ಎಲ್ಲರಿಗಿಂತಲೂ ಭಿನ್ನ. ತನ್ನಲ್ಲಿದ್ದ ಎಲ್ಲರೂ ಕೊರತೆ ಎಂದುಕೊoಡದನ್ನು ಕೊರತೆಯೇ ಇಲ್ಲವೆಂಬoತೆ ಸಾಧಿಸಿದ ಸಾಧಕ ವಿದ್ಯಾರ್ಥಿಯ ಹಾದಿ ಅಕ್ಷರಶಃ ರೋಚಕ.
ಇತ್ತಿಚೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ‘ರಾಜ್ಯಪುರಸ್ಕಾರ’ ಪಡೆದ ಒಬ್ಬ ಶಿಷ್ಯ ಸಾಗಿ ಬಂದ ಹಾದಿ.
ಹೆಸರು ರೇವಂತ್.ಹೆಚ್.ಪಿ ೫ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಬರಬಹುದಾದ ಒಂದು ಖಾಯಿಲೆಗೆ ತುತ್ತಾಗಿ ತಾನು ೩ತಿಂಗಳ ಮಗುವಾಗಿದ್ದಾಗಿನಿಂದಲೇ ಹಾಲು, ಹಾಲಿನ ಉತ್ಪನ್ನಗಳನ್ನು ತಿನ್ನಲಾಗದೆ, ತನ್ನ ಒಂದು ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡರೂ, ಸ್ಫಷ್ಟವಾಗಿ ಮಾತನಾಡುವುದಕ್ಕೆ ಕಷ್ಟವಾದರೂ ಆ ಎಲ್ಲಾ ದೋಷಗಳನ್ನು ಮೀರಿನಿಂತವನು.
ಸ್ಕೌಟಿoಗ್ ಚಟುವಟಿಕೆಯಲ್ಲಿ ಅವರ ತಂದೆಯು ಇದ್ದದ್ದರಿಂದಾಗಿ ತಾನು ಸಹ ಸೇರಿಕೊಂಡಿದ್ದ, ತನಗೆ ತಿಳಿದ ಸೇವೆಯನ್ನು ಸಲ್ಲಿಸುತ್ತ, ಎಲ್ಲಾ ರೀತಿಯ ಚಟುವಟಿಯಲ್ಲಿ, ಎಲ್ಲರೊಂದಿಗೆ ಸಕ್ರೀಯನಾಗಿ ಪಾಲ್ಗೊಳ್ಳುತ್ತಿದ್ದ.
ನಮ್ಮ ಶಾಲೆಗೆ ೮ನೇ ತರಗತಿಗೆ ಬಂದು ಸೇರಿದಾಗ ಆರಂಭದಲ್ಲಿ ಅಂತಹ ಸಮಸ್ಯೆ ಎನಿಸಲಿಲ್ಲ, ಆದರೆ ದಿನಕಳೆದಂತೆ ಗಣಿತ ಮತ್ತು ವಿಜ್ಞಾನದ ವಿಷಯವು ಕಷ್ಟವೆನಿಸತೊಡಗಿತು. ಇದರ ಬಗ್ಗೆ ಮುಖ್ಯೋಪಾಧ್ಯಾರಾದ ಶ್ರೀನಿವಾಸ ವರ್ಮಾ ಅವರ ಜೊತೆಗೆ ಪೋಷಕರು ಮಾತನಾಡಿದರು. ಮಗು ಗುರುತಿಸುವುದಕ್ಕೆ ಕಷ್ಟವಾಗುತ್ತಿದೆ. ಒಮ್ಮೆ ವೈದ್ಯರು ಅಥವಾ ಆಪ್ತಸಮಾಲೋಚರ ಬಳಿ ಚರ್ಚಿಸಿದರೆ ಒಳಿತು ಎಂದು ತಿಳಿಸಿದಾಗ, ಇಬ್ಬರೂ ಸೇರಿ ಪ್ರಯತ್ನಮಾಡಿದಾಗ ತಿಳಿದದ್ದು, ಇರುವ ಒಂದು ಕಣ್ಣಿನ ದೃಷ್ಟಿಯೂ ಪೂರ್ತಿ ಇಲ್ಲವೆಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಮಾದರಿಯ ವಿದ್ಯಾರ್ಥಿಗಳಿಗೆ ಬೇರೆಯ ವಿಷಯದ ಪರೀಕ್ಷೆಯನ್ನು ನೀಡುವ ಅವಕಾಶವಿದೆ ಎಂಬುದನ್ನು ತಿಳಿದುಕೊಳ್ಳಲಾಯಿತು.
ಆತ ಎಸ್.ಎಸ್.ಎಲ್.ಸಿ ಗೆ ಬರುವ ಸಮಯಕ್ಕೆ ವಿಜ್ಞಾನ ಮತ್ತು ಗಣಿತದ ಬದಲಿಗೆ ಅರ್ಥಶಾಸ್ತç ಮತ್ತು ರಾಜ್ಯಶಾಸ್ತçದ ವಿಷಯವನ್ನು ನೀಡಲಾಯಿತು. ಇದರ ಹೆಚ್ಚುವರಿ ಜವಾಬ್ದಾರಿಯನ್ನು ಸಮಾಜ ವಿಜ್ಞಾನದ ಶಿಕ್ಷಕರಾದ ಮಂಜುಳಾ ಮೇಡಂ ಮತ್ತು ಉಮೇಶ್ ಸರ್ ಹೆಗಲಿಗೆ ಬಂದಿತು. ಹೊಸದಾದ ಪಠ್ಯಕ್ರಮವನ್ನು ಅವರು ಸಿದ್ದಪಡಿಸಿಕೊಂಡರು ಪ್ರತಿನಿತ್ಯವೂ ಮಾರ್ಗದರ್ಶನ ಮಾಡುತ್ತಲೇ ಹೋದರು. ಅದಕ್ಕೆ ತಕ್ಕಂತೆ ತಾನೂ ಸಹ ತಯಾರಿಯನ್ನು ಉತ್ತಮವಾಗಿ ನಡೆಸತೊಡಗಿದ. ದಿನದಿಂದ ದಿನಕ್ಕೆ ಆತನ ಕಲಿಕಾಗುಣ ಹೆಚ್ಚಾಗುತ್ತಲೇ ಹೋಯಿತು. ಅಂತೂಇAತೂ ಪರೀಕ್ಷೆಯು ಸಹ ಬಂದಿತು. ಈತನನ್ನು ವಿಶೇಷ ವಿದ್ಯಾರ್ಥಿ ಎಂದು ಪರಿಗಣಿಸಿ ಬದಲಿ ವಿಷಯಕ್ಕೆ ಸಂಬAಧಿಸಿದ ಪ್ರಶ್ನೆ ಪತ್ರಿಕೆಯನ್ನು ನೀಡಿದರು. ಎಲ್ಲಾ ಪರೀಕ್ಷೆಗಳನ್ನು ಉತ್ತಮವಾಗಿ ಬರೆದಿದ್ದೇನೆ ಎಂದು ಹೇಳಿದ ಆತನ ಮಾತಿನಲ್ಲಿ ನಂಬಿಕೆ ಹೆಚ್ಚಾಗಿತ್ತು.
ಫಲಿತಾಂಶಕ್ಕಾಗಿ ಶಿಕ್ಷಕರು, ಪೋಷಕರು ಕಾತರದಿಂದ ಕಾಯತೊಡಗಿದೆವು. ೭೫% ಫಲಿತಾಂಶ ಈತನಿಗೆ ಬಂದಾಗ ಎಲ್ಲರಿಗೂ ಅದೇನೋ ಹೇಳಲಾಗದ ಅವ್ಯಕ್ತ ಸಂತೋಷ. ಎಲ್ಲರೂ ಅವನ ಫಲಿತಾಂಶದಿoದ ಸಂತೋಷಗೊoಡಿದ್ದAತೂ ಸುಳ್ಳಲ್ಲ. ಶಾಲೆಯ ಫಲಿತಾಂಶದ ವಿವರದ ಜೊತೆಗೆ ಈ ವಿದ್ಯಾರ್ಥಿಯ ಪೋಟೋವನ್ನು ಪೇಪರ್ನಲ್ಲಿ ಪ್ರಕಟಿಸಲಾಯಿತು. ‘ದೈಹಿಕ ನ್ಯೂನ್ಯತೆ ಇದ್ದರೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಯ ಸಾಧನೆ ಸ್ಫೂರ್ತಿಯಾಗಲಿ’ ಎಂಬ ಸಾಲುಗಳು.
ಮನಗ ಈ ಸಾಧನೆ ಪೋಷಕರಿಗೆ ಅದೆಷ್ಟು ಸಂತೋಷ ನೀಡಿತ್ತೆಂದರೆ, ತಮ್ಮ ಮಗನ ಈ ಸಾಧನೆಗೆ ಕಾರಣರಾದ ಎಲ್ಲಾ ಶಿಕ್ಷಕವೃಂದಕ್ಕೆ ಧನ್ಯವಾದಗಳನ್ನು ತಿಳಿಸಲು ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿದರು. ವಿಶೇಷ ಕಾಳಜಿ ವಹಿಸಿದ ಶಿಕ್ಷಕರಿಗೆ ಕಿರುಗೌರವವನ್ನು ಸಲ್ಲಿಸಿದ ವಿದ್ಯಾರ್ಥಿ, ತಮ್ಮ ಈ ಸೇವೆಗೆ ಈ ರೀತಿಯ ಗೌರವ ಪಡೆದ ಶಿಕ್ಷಕರು ಆ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ಮುಂದಿನ ಹಂತದ ವಿದ್ಯಾಭ್ಯಾಸ ಮಾಡುವಾಗ ಸ್ಕೌಟ್ ಶಿಕ್ಷಕರ ಮಾರ್ಗದರ್ಶನದಲ್ಲಿ ರೋವರ್ ವಿಭಾಗದಲ್ಲಿ ಪರೀಕ್ಷೆಗಳನ್ನು ಏಕೆ ತೆಗೆದುಕೊಳ್ಳಬಾರದು? ಎಂಬ ಪ್ರಶ್ನೆಯನ್ನು ಸ್ಕೌಟ್ಮಾಸ್ಟರ್ ರಾಜೇಶ್ ಅವರು ಮುಂದಿಟ್ಟಾಗ ಸಹಜವಾಗಿ ತನ್ನಿಂದ ಆಗಲಾರದು ಎಂಬAತೆ ಇದ್ದಾಗ ಎಲ್ಲರ ಪ್ರೋತ್ಸಾಹದ ನುಡಿಯಿಂದ ಒಪ್ಪಿದ ಮತ್ತು ಪ್ರತಿನಿತ್ಯವು ಕಲಿಯತೊಡಗಿದ. ಸ್ಕೌಟ್ ಭವನ್ಲಿ ‘ಗಣೇಶಹಬ್ಬ’ದ ಆಚರಣೆಯನ್ನು ಒಮ್ಮೆ ತಾನೇ ನಿರ್ವಹಿಸುತ್ತೇನೆ ಎಂಬ ಜವಾಬ್ದಾರಿಯನ್ನು ವಹಿಸಿಕೊಂಡ ನಮ್ಮಗಳ ಬಳಿಯಲ್ಲಿ, ‘ನಿಮ್ಮಗಳ ಸಹಕಾರ ಇರಲಿ’ ಎಂದನು, ‘ಕಂಡಿತವಾಗಿ ಇರತ್ತೆ, ಎಲ್ಲವೂ ಯಶಸ್ವಿಯಾದರೆ ಎಲ್ಲರಿಗೂ ಪಾರ್ಟಿ ಕೊಡಬೇಕು’ ಎಂಬ ನಮ್ಮೆಲ್ಲರ ತಮಾಷೆಯ ಬೇಡಿಕೆಗೆ ಒಪ್ಪಿದ. ೫ದಿನದ ಜವಾಬ್ದಾರಿಯನ್ನು ಎಲ್ಲರ ಸೇವೆಯನ್ನು ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ.
ಸ್ಕೌಟ್-ಗೈಡ್ನಲ್ಲಿ ಸಕ್ರೀಯನಾಗಿದ್ದು ಮೊದಲ ಬಾರಿಗೆ ‘ಜಿಲ್ಲಾ ಪುರಸ್ಕಾರ (ನಿಪುಣ್ ಪ್ರಶಸ್ತಿ) ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ಮುಂದಿನ ಹಂತ ರಾಜ್ಯಮಟ್ಟದಲ್ಲಿ. ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ಎಲ್ಲಾ ಸ್ಕೌಟ್ ಶಿಕ್ಷಕರು, ಹಿರಿಯರಿಂದ ಪಡೆದು, ಪ್ರತಿಯೊಂದನ್ನು ಸರಿಯಾಗಿ ಅಭ್ಯಾಸ ಮಾಡತೊಡಗಿದ. ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೂಡ. ಕೆಲವರು ಕೆಲವೊಂದು ಪ್ರಶ್ನೆಗೆ ಉತ್ತರ ನೀಡದಿದ್ದಾಗ ಈತ ಉತ್ತರ ನೀಡಿ ಎಲ್ಲರಿಂದಲೂ ಶಹಬ್ಬಾಷ್ ಎನಿಸಿಕೊಂಡ.
ಇತ್ತೀಚೆಗೆ ಫಲಿತಾಂಶ ಬಂದಾಗ ‘ರಾಜ್ಯಪುರಸ್ಕಾರ’ ಪ್ರಶಸ್ತಿಗೆ ಭಾಜನನಾಗಿದ್ದಾನೆ ಎಂಬುದು ಸ್ಕೌಟ್-ಗೈಡ್ನಲ್ಲಿ ಎಲ್ಲರಿಗೂ ಅಪಾರ ಸಂತೋಷ. ಕೊರೋನಾದಿಂದಾಗ ರಾಜ್ಯಪುರಸ್ಕಾರದ ಪ್ರಮಾಣಪತ್ರವನ್ನು ಕಳಿಸಿಕೊಟ್ಟರು ಅದರಲ್ಲಿ ರಾಜ್ಯಪಾಲರ ಸಹಿಯೊಂದಿಗೆ ಕಳಿಸಿಕೊಡಲಾಗಿತ್ತು. ಆತನ ಜೀವನದ ಪ್ರಮುಖ ಸಾಧನೆ ಎಂದರೂ ತಪ್ಪಾಗಲಿಕ್ಕಿಲ್ಲ. ಇತ್ತಿಚೆಗೆ ತಾನು ಓದುತ್ತಿರುವ ಕಾಲೇಜ್ನಿಂದ ಡಿ.ವಿ.ಎಸ್ ರಂಗಮoದಿರದಲ್ಲಿ ತಮ್ಮ ಕಾಲೇಜಿನ ಸ್ಕೌಟ್, ಎನ್.ಸಿ.ಸಿ, ಎನ್.ಎಸ್.ಎಸ್. ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು. ಅಲ್ಲಿ ರೇವಂತ್ ಕೂಡ ವಿಶ್ವವಿದ್ಯಾಲಯದ ಕುಲಪತಿಗಳಿಂದ ಗೌರವ ಸ್ವೀಕರಿಸುವಾಗ, ‘ವಿಶೇಷ ಚೇತನ ವಿದ್ಯಾರ್ಥಿ ಎಲ್ಲರಿಗೂ ಚೈತನ್ಯ ತುಂಬುವ ಸಾಧನೆ’ ಎನ್ನುವಾಗ ನಮ್ಮೆಲ್ಲರಿಗೂ ಪ್ರಶಸ್ತಿ ಸಿಕ್ಕಷ್ಟೇ ಸಂತೋಷ, ಖುಷಿ.
ಎಲ್ಲಾ ಅನುಕೂಲಗಳಿದ್ದು, ಎಲ್ಲಾ ಅಂಗಾಗಳು ಸರಿ ಇದ್ದೂ, ನಾವುಗಳು ಏನನ್ನೂ ಸಾಧಿಸದಿದ್ದಾಗ, ಅದು ಸರಿ ಇಲ್ಲ, ಇದು ಸರಿ ಇಲ್ಲ, ಅದನ್ನು ಕೊಡಿಸಿದ್ದರೆ ಸಾಧನೆ ಮಾಡುತ್ತಿದೆ, ಹಾಗೇ-ಹೀಗೆ ಎಂದು ಕೇವಲ ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಇಂದಿನ ವಿದ್ಯಾರ್ಥಿವೃಂದಕ್ಕೆ ರೇವಂತ್ ಮಾತನಾಡದೇ ಮಾಡಿದ ಸಾಧನೆ ಎಲ್ಲರೂ ಮಾತನಾಡಿಕೊಳ್ಳುವಂತಾಗಿದೆ. ಇತರರಿಗೆ ಪ್ರೇರಣೆಯಾಗಿದೆ. ನಾನು ಸಹ ‘ರಾಜ್ಯಪುರಸ್ಕಾರ’ ಪಡೆದಿದ್ದೆ. ಈಗ ನನ್ನ ವಿದ್ಯಾರ್ಥಿಯೂ ಅದೇ ಪ್ರಶಸ್ತಿ ಪಡೆದಿದ್ದಾನೆ. ಇದು ಒಬ್ಬ ಶಿಕ್ಷಕನಿಗೆ ಹೆಮ್ಮೆಯ ವಿಷಯವೇ ಅಲ್ಲವೆ? ‘ಈ ಕೆಲಸ ನನ್ನಿಂದಾಗದು ಎನ್ನುವಾಗ ರೇವಂತ್ನನ್ನು ಒಮ್ಮೆ ನೆನೆಯಿರಿ’.