ಸ್ವಾಮಿ ವಿವೇಕಾನಂದರ ಪ್ರೇರೇಪಿತ “ವೀ ಕೇರ್ ಫಾರ್ ಯೂ” ಮೈಸೂರು ತಂಡವು ಸುಮಾರು 200 ಕ್ಕೂ ಹೆಚ್ಚು ಮಂಜುನಾಥಪುರದ ಸೇವಾ ವಸತಿಗೆ ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಗಳನ್ನು ಒದಗಿಸಿದೆ.
ಮೈಸೂರಿನ ಕೆ.ಆರ್. ಎಸ್ ರಸ್ತೆಯ ಬದಿಯಲ್ಲಿ ಇರುವ ಮಂಜುನಾಥಪುರ ಎಂಬ ಕೊಳಗೇರಿ ಪ್ರದೇಶದಲ್ಲಿನ ಅಗತ್ಯವಿರುವ ಕುಟುಂಬಗಳಿಗೆ ತುಂತುರು ಮಳೆಯ ನಡುವೆಯೂ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ದಿನಸಿ ಕಿಟ್ ಗಳನ್ನು ಪಡೆದ ಅದೆಷ್ಟೋ ಕುಟುಂಬಗಳ ಕಣ್ಣಂಚಿನಲ್ಲಿ ಆನಂದದ ಹೊನಲು ಕಾಣಬಹುದಾಗಿತ್ತು. ಅಶಕ್ತ ಕೈಗಳಲ್ಲಿ ಶಕ್ತಿಯ ಬೆಂಬಲವಿದೆ ಎನ್ನುವ ಭರವಸೆಯೂ ನೋಡಬಹುದಾಗಿತ್ತು ಆ ಮೂಲಕ ಶುಭ ಹಾರೈಕೆಗಳ ಮಹಾಪೂರ ವೀ ಕೇರ್ ಫಾರ್ ಯೂ ಮೈಸೂರು ತಂಡಕ್ಕೆ ಹರಿದಿತ್ತು.
ಅದಕ್ಕೂ ಮುನ್ನ ದಿನವೆಂಬಂತೆ ಮೈಸೂರು ನಗರದ ಸವಿತಾ ಸಮಾಜದ ಕ್ಷೌರಿಕರಿಗೆ ಹಾಗೂ ಮದುವೆ ಸಮಾರಂಭಗಳಲ್ಲಿ ಮಂಗಳ ವಾದ್ಯ ವಾದಕರಿಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವೀ ಕೇರ್ ಫಾರ್ ಯು ಮೈಸೂರು ತಂಡವು ನೀಡಿತು.
ದಾನಿಗಳ ನೆರವಿನಿಂದ ಹಾಗೂ ಹಿತೈಷಿಗಳ ಸಹಕಾರದಿಂದ ವೀ ಕೇರ್ ಫಾರ್ ಯು ಮೈಸೂರು ತಂಡದ ಸರ್ವ ಸ್ವಯಂಸೇವಕರು ಸೇರಿಕೊಂಡು ನೆರವೇರಿಸಿದ ಈ ಮಹಾ ಸೇವಾ ಯಜ್ಞವು ನಿಜಕ್ಕೂ ಪ್ರೇರಣಾದಾಯಕವಾಗಿದೆ.
ಅಲ್ಲದೆ ಪ್ರತಿನಿತ್ಯ ಎಂದಿನಂತೆ ಮಧ್ಯಾಹ್ನದ ಊಟವೂ ನೂರಾರು ಹಸಿದ ಹೊಟ್ಟೆಗೆ ತಲುಪುತ್ತಿರುವುದು ಸಮಾಜದ ಹಿತಾಸಕ್ತಿಯುಳ್ಳವರ ಸಹಕಾರದೊಂದಿಗೆ ಸಾಧ್ಯವಾಗುತ್ತಿದೆ.
ಅಲ್ಲದೆ ನಮ್ಮ ವೀ ಕೇರ್ ಫಾರ್ ಯು ಮೈಸೂರು ತಂಡದ ಶಕ್ತಿ ಕೇಂದ್ರವಾದ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹರಾಜ್ ಹಾಗೂ ವೀ ಕೇರ್ ಫಾರ್ ಯೂ ಮೈಸೂರು ತಂಡದ ಮಾರ್ಗದರ್ಶಕರಾಗಿ ನಿಂತಿರುವ ಸ್ವಾಮಿ ಶಾಂತಿವ್ರತಾನಂದ ಜೀ ಮಹಾರಾಜ್ ಮತ್ತು ಯತಿವರ್ಯರೆಲ್ಲರ ಆಶೀರ್ವಾದದೊಂದಿಗೆ ಮತ್ತಷ್ಟು ಸೇವಾ ಯಜ್ಞವನ್ನು ಮುಂದುವರೆಸಿಕೊಂಡು ಈ ಕೊರೊನ ಮಹಾಮಾರಿಯ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಾಧ್ಯವಾಗುವಷ್ಟು ನೆರವಿನ ಹಸ್ತ ಚಾಚುವ ಸಂಕಲ್ಪವನ್ನು ಹೀಗೆ ಹೊಂದಿದೆ ಎಂದು ವೀ ಕೇರ್ ಫಾರ್ ಯು ಮೈಸೂರು ತಂಡದ ಸದಸ್ಯರೆಲ್ಲರ ನುಡಿಗಳಾಗಿದೆ.
ಈ ರೀತಿಯಾಗಿ ಮಂಗಳಮುಖಿಯರಿಗೆ ವಿಶೇಷಚೇತನರಿಗೆ ಹಾಗೂ ನಿರಾಶ್ರಿತರಿಗೆ ನಿರ್ಲಕ್ಷ್ಯಕ್ಕೆ ಒಳಗಾದ ಕುಟುಂಬಗಳಿಗೆ ಹೀಗೆ ಸುಮಾರು ಸಾವಿರದ ಹತ್ತಿರ ದಿನಸಿ ಕಿಟ್ಗಳನ್ನು ವಿತರಣೆ ಮಾಡುವುದರ ಜೊತೆಗೆ ಇಲ್ಲಿಯವರೆಗೆ 3500 ಕ್ಕೂ ಹೆಚ್ಚು ಹಸಿದ ನಿರಾಶ್ರಿತರಿಗೆ ಮಧ್ಯಾಹ್ನದ ಊಟದ ಪೊಟ್ಟಣಗಳ ವ್ಯವಸ್ಥೆ ಕಲ್ಪಿಸುತ್ತ ಬಂದಿದೆ ವೀ ಕೇರ್ ಫಾರ್ ಯು ಮೈಸೂರು ತಂಡ.
ಮತ್ತಷ್ಟು ಸಹಾಯ ಸಹಕಾರ ಮಾಡಲಿಚ್ಛಿಸುವ ಮನಸ್ಸುಗಳಿಗೆ ವೀ ಕೇರ್ ಫಾರ್ ಯೂ ಮೈಸೂರು ತಂಡವು ಮುಕ್ತ ಮನಸ್ಸಿನೊಂದಿಗೆ ಸ್ವಾಗತ ಬಯಸುತ್ತದೆ ಎಂದು ವೀ ಕೇರ್ ಫಾರ್ ಯೂ ಮೈಸೂರು ತಂಡದ ಶಿಬು ಆಂಡಿಯ ಮತ್ತು ವೈಶಾಖ್ ಅವರು ಹಂಚಿಕೊಂಡಿದ್ದಾರೆ.
ತಮ್ಮ ಯಾವುದೇ ರೀತಿಯ ಸಹಕಾರ ಮಾಡಲು ಇಚ್ಛಿಸುವವರು ಇದಕ್ಕೆ ಸಂಪರ್ಕಿಸಿ +919945897401 ವೀ ಕೇರ್ ಫಾರ್ ಯು ಮೈಸೂರು ತಂಡವನ್ನು ಪ್ರೋತ್ಸಾಹಿಸಿ ಎಂದು ಸುದ್ದಿಗೋಷ್ಠಿಯಲ್ಲಿ ತಂಡದ ಸದಸ್ಯರಾದ ಪುರುಷೋತ್ತಮ್ ಅಗ್ನಿ ತಿಳಿಸಿದರು.
Follow us on: