ಮಹಾ ಸೇವಾಯಜ್ಞದಲ್ಲಿ ವೀ ಕೇರ್ ಫಾರ್ ಯು ಮೈಸೂರು ದಾಪುಗಾಲು
ಸ್ವಾಮಿ ವಿವೇಕಾನಂದರ ಪ್ರೇರೇಪಿತ "ವೀ ಕೇರ್ ಫಾರ್ ಯೂ" ಮೈಸೂರು ತಂಡವು ಸುಮಾರು 200 ಕ್ಕೂ ಹೆಚ್ಚು ಮಂಜುನಾಥಪುರದ ಸೇವಾ ವಸತಿಗೆ ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಗಳನ್ನು ಒದಗಿಸಿದೆ. ಮೈಸೂರಿನ ಕೆ.ಆರ್. ಎಸ್ ರಸ್ತೆಯ ಬದಿಯಲ್ಲಿ ಇರುವ ಮಂಜುನಾಥಪುರ ಎಂಬ ಕೊಳಗೇರಿ ಪ್ರದೇಶದಲ್ಲಿನ ಅಗತ್ಯವಿರುವ ಕುಟುಂಬಗಳಿಗೆ ತುಂತುರು ಮಳೆಯ ನಡುವೆಯೂ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು. ದಿನಸಿ ಕಿಟ್ ಗಳನ್ನು ಪಡೆದ ಅದೆಷ್ಟೋ ಕುಟುಂಬಗಳ ಕಣ್ಣಂಚಿನಲ್ಲಿ...