ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ
ರೈತರ ಆತ್ಮಹತ್ಯೆ ದುಡುಕಬೇಡಿ ರೈತರೇ ನಾಡಿನನ್ನದಾತರೇ ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ || ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ || ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ || ಹಬ್ಬಗಳಲಿ ಬೇವು ಬೆಲ್ಲ...