ಚನ್ನಕೇಶವನ ಮೂಲ ವಿಗ್ರಹ ಸಕಲೇಶಪುರ ದಲ್ಲಿ ಪತ್ತೆ
ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಚನ್ನಕೇಶವ ಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗಿದೆ. ಪ್ರಾಚೀನ ಕಾಲದಿಂದಲೂ ಚನ್ನಕೇಶವ ಸ್ವಾಮಿಯ ಮೂಲ ನೆಲೆ ಹಾಲೇಬೇಲೂರು ಎಂಬ ಪ್ರತಿಪಾದನೆ ಇದ್ದು ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಹೊಯ್ಸಳರ ಕಾಲದ ದೇವಾಲಯವಿದೆ. ಇದೇ ಗ್ರಾಮದಲ್ಲಿ ಹೊಯ್ಸಳರು ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಪಾಳೆಗಾರರ ದಾಳಿಯ ಭಯದಿಂದ ಚನ್ನಕೇಶವನ ದೇವಸ್ಥಾನ ನಿರ್ಮಾಣ ಯೋಜನೆ ಬೇಲೂರಿಗೆ ಸ್ಥಳಾಂತರವಾಯಿತು. ಈ ಕಾರಣದಿಂದಲೇ ಗ್ರಾಮಕ್ಕೆ ಹಳೇಬೇಲೂರು ಎಂಬ ಹೆಸರು...