ಜನಸೇವೆಯಲ್ಲಿ ಭುವನ್-ಹರ್ಷಿಕಾ ಜೋಡಿ
ಕೊರೊನಾ ಎರಡನೇ ಅಲೆಯಿಂದ ಹಲವಾರು ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ಸಾವಿರಾರು ಜನ ತಮ್ಮ ಕುಟುಂಬಸ್ಥರು ತನ್ನವರನ್ನು ಕಳೆದುಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಸೆಲೆಬ್ರಿಟಿಗಳು ಜನರ ಸೇವೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ನಾಡಿನ ಜನತೆಗೆ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ವಾರಿಯರ್ ಗಳಾಗಿ 'ಭುವನಂ ಕೋವಿಡ್ ಹೆಲ್ಪ್ 24/7' ಎಂಬ ಗ್ರೂಪ್ಸ್ ನ ಮುಖಾಂತರ ಸೋಂಕಿತರಿಗೆ...