ಹೈನುಗಾರನ ಮಾತುಗಳು….
ನಿಜ ಹೇಳ ಬೇಕೆಂದರೆ ನಾವು ಬದುಕು ಕಟ್ಟಿಕೊಂಡಿದ್ದೇ ಹೈನುಗಾರಿಕೆಯಿಂದ.. ಹಸುಗಳಿಗೂ ನನಗೂ ಬಾಲ್ಯಕಾಲದ ನಂಟೇ ಆದರೂ ಕೃಷಿಯೇ ಬದುಕು ಎಂಬ ಹೋರಾಟ ಪ್ರಾರಂಭಿಸಿದಾಗ ನಮ್ಮ ಮೊದಲ ಆಯ್ಕೆ ಹೈನುಗಾರಿಕೆಯೇ ಆಗಿತ್ತು. ಹೈನುಗಾರಿಕೆ ಪ್ರಾರಂಭಿಸುವುದಕ್ಕೆ ಎರಡು ಮುಖ್ಯ ಕಾರಣ ಇದ್ದವು.. ಮೊದಲನೆಯದಾಗಿ ಹಸು ಕಟ್ಟಿದ ಮಾರನೇ ದಿನದಿಂದಲೇ ಇನ್ವೆಸ್ಟಮೆಂಟಿಗೆ ರಿಟರ್ನ್ಸ ಬರುತ್ತದೆ.. ಎರಡನೆಯದಾಗಿ ಮತ್ತು ಮುಖ್ಯವಾಗಿ ನನ್ನ ಎರೆಹುಳ ಗೊಬ್ಬರ ತಯಾರಿಕಾ ಘಟಕಕ್ಕೆ ಸಗಣಿಯ ಗೊಬ್ಬರ ಅವಶ್ಯಕತೆ ಇತ್ತು.. ಹೈನುಗಾರಿಕೆ ಆರಂಭಿಸುವುದರಿಂದ...