ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭ ಮಾಡಿದರು
- ರಾಘವೇಂದ್ರ ಪ್ರಕಾಶ್
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸರಿ ಸುಮಾರು 108 ವರ್ಷಗಳ ಹಿಂದೆ ಮೈಸೂರು ದಿವಾನರಾಗಿದ್ದ ಭಾರತ್ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸಾರಥ್ಯದಲ್ಲಿ ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ, ಸಣ್ಣ ಉದ್ಯಮಿಗಳಿಗೆ, ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಾರಂಭ ಮಾಡಿದರು, ಇದು ಅವರ ಸಮಾಜದ ಏಳಿಗೆಯ ದೂರದೃಷ್ಟಿಗೆ ಮತ್ತು ಅಭಿವೃದ್ಧಿ ಪರ ಆಲೋಚನೆಯ ಫಲ. ಎಸ್. ಬಿ. ಎಂ ಗೆ ತನ್ನದೇ ಆದ ಒಂದು ಇತಿಹಾಸ ಮತ್ತು ಗೌರವ ಇತ್ತು. ಆದರೆ ಕೇಂದ್ರ ಸರ್ಕಾರದ ಬ್ಯಾಂಕಗಳ ಏಕೀಕರಣ ನೀತಿ ನಮ್ಮ ಹೆಮ್ಮೆಯ ಕನ್ನಡಮಯ ಬ್ಯಾಂಕ್ ಈಗ ಎಸ್. ಬಿ. ಐ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಈಗ ಎಸ್. ಬಿ. ಎಂ ಎಂಬ ದೊಡ್ಡ ಸಂಸ್ಥೆ ಮತ್ತು ಅದಕ್ಕೆ ಸಂಬಂಧ ಪಟ್ಟ ಸ್ಥಾಪಕರನ್ನು ಈಗ ಮರೆಮಾಚಿ ತನ್ನ ನೀತಿ ಸಂಹಿತೆ ಜಾರಿಗೆ ತಂದು, ಅದರದೆಯಾಗ ಸಮಾಧಾನ, ಸಮರ್ಥನೆ ನೀಡುತ್ತಾ ಬಂದಿದೆ. ಬೇಜಾರಾಗುವುದು ಯಾವಾಗ ಗೊತ್ತಾ ಪ್ರತಿ ಸಲ ಬ್ಯಾಂಕ್ಗೆ ಹೋದಾಗ ಕಾಣುತ್ತಾ ಇದ್ದ ನಮ್ಮ ಮಹಾರಾಜರ ಫೋಟೋವಾಗಲಿ, ಸರ್ ಎಂ ವಿ ಅವರ ಫೋಟೋವಾಗಲಿ ಈಗ ಕಾಣದೇ ಇರುವುದು. ನಮ್ಮ ಇಲ್ಲಿನ ನಾಯಕರಿಗೆ ದೊಡ್ಡವರು ಮಾಡಿದ ತ್ಯಾಗ, ಬಲಿದಾನ ಮತ್ತು ಅವರ ಮಹತ್ವ ಗೊತ್ತಿರದ ಕಾರಣ ಏಕ ಏಕೀ ಕೇಂದ್ರ ಸರ್ಕಾರವನ್ನು ದೂಷಿಸುವುದು ತಪ್ಪೆ. “ಬೇಲಿನೇ ಎದ್ದು ಹೊಲ ಮೇಯ್ದಂಗಾಯ್ತು” ಕನ್ನಡಿಗರ ಸ್ಥಿತಿ.