ಬಜೆಟ್ ದೇಶದ ಅಭಿವೃದ್ಧಿಯ ದಿಕ್ಸೂಚಿ: ಡಾ. ರವಿ ಭಂಡಾರಿ ಮೈಸೂರು:- ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ...
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಮತ್ತೊಂದು ಹೊಸ ಅವಕಾಶ ತೆರೆದಿದೆ. ಸಾಮಾನ್ಯವಾಗಿ ಪೊಲೀಸ್, ಶಿಕ್ಷಣ ಅಥವಾ ಕಂದಾಯ ಇಲಾಖೆಗಳ ನೇಮಕಾತಿಗಳು ಹೆಚ್ಚು ಗಮನ ಸೆಳೆಯುತ್ತವೆ. ಆದರೆ ಈ ಬಾರಿ ಸಹಕಾರಿ ಕ್ಷೇತ್ರದಲ್ಲಿಯೇ ಉದ್ಯೋಗ ಅವಕಾಶಗಳು ಪ್ರಕಟವಾಗಿದ್ದು, ಹಲವು ಅಭ್ಯರ್ಥಿಗಳ ಗಮನ ಸೆಳೆಯುತ್ತಿದೆ. ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳ ನಿಯಮಿತ (KSCCF) ಸಂಸ್ಥೆ ರಾಜ್ಯದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 34 ಹುದ್ದೆಗಳು ಭರ್ತಿಯಾಗಲಿದ್ದು, ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಇದು ಸ್ಥಿರ ಭವಿಷ್ಯದತ್ತ ಹೆಜ್ಜೆಯಿಡಲು ಸಹಾಯಕವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ ಈ ನೇಮಕಾತಿಯಡಿಯಲ್ಲಿ ವಿವಿಧ ಹುದ್ದೆಗಳು ಪ್ರಕಟಗೊಂಡಿದ್ದು, ಆಯ್ಕೆಯಾದವರಿಗೆ 7ನೇ ವೇತನ ಆಯೋಗದ...
ಮೈಸೂರು: ಮೈಸೂರು ನಗರ ಸಿಸಿಬಿ ಪೊಲೀಸರು ಪಡೆದ ಖಚಿತ ಮಾಹಿತಿಯ ಮೇರೆಗೆ ದಿನಾಂಕ 03/02/2026 ರಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಸಮೀಪ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ರೂ.1,20,000/- ಮೌಲ್ಯದ 11 ಗ್ರಾಂ 90 ಮಿಲಿಗ್ರಾಂ ತೂಕದ ಎಂಡಿಎಂಎ (MDMA) ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಮೀರ್ ಖಾನ್, ಸೈಯದ್ ಇಮ್ರಾನ್ ಹಾಗೂ ಮಹಮ್ಮದ್ ನಬೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿದ್ದು, ಯಶಸ್ವಿಯಾಗಿ ಆರೋಪಿಗಳನ್ನು ಬಂಧಿಸಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ತನಿಖೆಯ ವೇಳೆ ಆರೋಪಿಗಳ ಮಾದಕ ವಸ್ತು ಜಾಲ, ಸರಬರಾಜು ಮೂಲ ಹಾಗೂ ಇತರ ಸಂಪರ್ಕಗಳ...
ಮೈಸೂರು:- ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ನಿರಂತರವಾಗಿ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ, ಕ್ರೆಡಿಟ್–ಐ ಸಂಸ್ಥೆ, ಮೈಸೂರು ಇದರ ಸಂಸ್ಥಾಪಕರೂ ಹಾಗೂ ರೋಟರಿ...
ಮೈಸೂರು: ಮೈಸೂರಿನ ಅವಧೂತ ದತ್ತಪೀಠದಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಫೆಬ್ರವರಿ 14 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀ ಹನುಮಾನ್ ಚಾಲೀಸಾ ಮಾಹಾಪಾರಾಯಣ...
ಗೌರವ ಡಾಕ್ಟರೇಟ್ ಪಡೆದ ಕೆ.ಬಿ. ಲಿಂಗರಾಜುಗೆ ಮಾಜಿ ಶಾಸಕ ಎಲ್. ನಾಗೇಂದ್ರರಿಂದ ಅಭಿನಂದನೆ ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾದ ಕೆ.ಬಿ....
ಮೈಸೂರು, ಫೆ.04:- ಇಂದಿನ ಬದಲಾಗುತ್ತಿರುವ ಜ್ಞಾನಾಧಾರಿತ ಹಾಗೂ ತಂತ್ರಜ್ಞಾನ ಚಾಲಿತ ಯುಗದಲ್ಲಿ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಲ್ಲೇ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಮೌಲ್ಯ ಮತ್ತು practically ಉಪಯೋಗವಾಗುವ ಜ್ಞಾನವನ್ನು...
ಜ್ಞಾನ ಎಂಬುದು ಯಾರ ಸ್ವತ್ತಲ್ಲ ಅದನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡರೇ ಮಾತ್ರ ಉನ್ನತ ಸ್ಥಾನ ಕಟ್ಟಿಟ್ಟ ಬುತ್ತಿ- ಡಿ.ಸಿ.ಪಿ ಕೆ ಎಸ್ ಸುಂದರ್ ರಾಜು. ಮೈಸೂರು, ಫೆ.03:-“ಜ್ಞಾನ ಎಂಬುದು ಯಾರ ಸ್ವತ್ತಲ್ಲ. ಅದನ್ನು ಯಾವ ಸಮಯದಲ್ಲಿ, ಹೇಗೆ ಅಳವಡಿಸಿಕೊಳ್ಳುತ್ತೇವೆ ಎಂಬುದೇ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಸರಿಯಾದ ಸಮಯದಲ್ಲಿ ಜ್ಞಾನವನ್ನು ಬಳಸಿಕೊಂಡರೆ ಉನ್ನತ ಸ್ಥಾನ ಸಾಧಿಸುವುದು ಕಟ್ಟಿಟ್ಟ ಬುತ್ತಿ” ಎಂದು ಮೈಸೂರು ನಗರದ ಡಿಸಿಪಿ ಕೆ.ಎಸ್. ಸುಂದರ್ ರಾಜು ಅವರು ಅಭಿಪ್ರಾಯಪಟ್ಟರು. ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಮಂಗಳವಾರ (03-02-2026) ಆಯೋಜಿಸಿದ್ದ ಪಿಸಿ/ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 50 ದಿನಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅನೇಕ ತರಬೇತಿ ಸಂಸ್ಥೆಗಳು ಲಭ್ಯವಿದ್ದರೂ, ಸಾಕಷ್ಟು ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದೇ ಪ್ರಯತ್ನದಿಂದ...