ಅನುವಾದ – ಡಾ. ಹೆಚ್ ಎಸ್ ಎಂ ಪ್ರಕಾಶ್
ಯಾರಾದರೂ ನನಗೆ “ನಿನ್ನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಪುಸ್ತಕ ಯಾವುದು?” ಎಂದು ಕೇಳಿದರೆ, ಯಾವುದೇ ಯೋಚನೆಯಿಲ್ಲದೆ ನಾನು ಹೇಳುವ ಮೊದಲ ಪುಸ್ತಕ “ಖಾಲಿ ಕಪ್”.

ಈ ಪುಸ್ತಕದಲ್ಲಿ ಹೇಳಿರುವ ಸರಳವಾದ ಆದರೆ ಆಳವಾದ ಸಂದೇಶವೇನೆಂದರೆ —
ತುಂಬಿದ ಪಾತ್ರೆಯನ್ನು ಮತ್ತೆ ತುಂಬಲು ಸಾಧ್ಯವಿಲ್ಲ.
ಅದನ್ನು ಮತ್ತೆ ತುಂಬಲು ಅದು ಮೊದಲು ಖಾಲಿಯಾಗಬೇಕು. ಇಲ್ಲವಾದರೆ ತುಂಬಿಸಿದದ್ದೆಲ್ಲ ಹೊರಗೆ ಚೆಲ್ಲುತ್ತದೆ.
ಆದ್ದರಿಂದ ಜೀವನದಲ್ಲೂ ನಾವು ಸದಾ ಖಾಲಿಯಾಗುತ್ತಾ – ಹೊಸದನ್ನು ಸ್ವೀಕರಿಸುತ್ತಾ ಇರಬೇಕು.
ಝೆನ್ ತತ್ತ್ವದ ಮೂಲವೇ ಭಾರತದ ಸನಾತನ ಧರ್ಮದ ಧ್ಯಾನ ಪರಂಪರೆ.
ಭಾರತದ “ಧ್ಯಾನ” ಎಂಬ ಪದ ಚೀನಾಕ್ಕೆ ಹೋಗಿ “ಚನ್”, ಅಲ್ಲಿಂದ ಜಪಾನಿಗೆ ಹೋಗಿ “ಝೆನ್”, ನಂತರ ಅರೇಬಿಯಾದ ಕಡೆಗೆ ಹೋಗಿ “ದೀನ್” ಎಂಬ ರೂಪವನ್ನು ಪಡೆದಿದೆ ಎಂದು ಹೇಳಲಾಗುತ್ತದೆ.
ಪುಸ್ತಕದ ಹೆಸರೇ ಸೂಚಿಸುವಂತೆ, ಖಾಲಿ ಕಪ್ ಮಾತ್ರ ತುಂಬಲು ಸಾಧ್ಯ; ತುಂಬಿದ ಕಪ್ ಅಲ್ಲ.
ಅದೇ ರೀತಿ ಖಾಲಿ ಮನಸ್ಸಿಗೆ ಮಾತ್ರ ಜ್ಞಾನ, ಪ್ರೀತಿ ಮತ್ತು ಹೊಸ ಅನುಭವಗಳು ಪ್ರವೇಶಿಸಬಹುದು.
ಝೆನ್ ತತ್ತ್ವದ ಪ್ರಮುಖ ಸಂದೇಶವೆಂದರೆ –
ಈ ಕ್ಷಣವನ್ನು ಬದುಕುವುದು, ಅನುಭವಿಸುವುದು ಮತ್ತು ಆನಂದಿಸುವುದು.
ಝೆನ್ ಒಂದು ಆಂತರಿಕ ಶಕ್ತಿ.
ಈ ಪುಸ್ತಕದಲ್ಲಿರುವ ಪ್ರತಿಯೊಂದು ಕಥೆಯೂ ಜೀವನಕ್ಕೆ ಮಾರ್ಗದರ್ಶನ ನೀಡುವಂತದ್ದು.
~ ಶ್ರೀಮತಿ ಅಶ್ವಿನಿ ಕಿರಣ್



