Articles

ತಂದೆಯು ನೀ

ಕಮಲ್ ಆನಂದ್

fathersday_askmysuru

ತಂದೆಯು ನೀ

sri krishnadevaraya hampi

ನವಮಾಸ ಗರ್ಭವ ಧರಿಸಿ ಹೆತ್ತವಳು ತಾಯಿ
ಜೀವನದಿ ಕೊನೆವರೆಗು ಸಲಹಿದವ ನೀ |
ಹಸಿವಾಗ ಕೈತುತ್ತ ನೀಡಿದಳು ತಾಯಿ
ಹಸಿವಿನ ಬೆಲೆಯನ್ನು ಕಲಿಸಿದವ ನೀ ||

ಮೊದಲ ಅಕ್ಷರವ ಕಲಿಸಿದಳು ತಾಯಿ
ಮಾತಿನ ಬೆಲೆಯನ್ನು ಕಲಿಸಿದವ ನೀ |
ಸೊಂಟದಿ ಕುಳ್ಳಿರಿಸಿ ಜಗವ ಕಾಣಿಸಿದಳು ತಾಯಿ
ಹೆಗಲಮೇಲೆ ಕುಳ್ಳಿರಿಸಿ ಕಾಣದ ಜಗವನೂ ತೋರಿದವ ನೀ ||

ನೆಲಕೆ ನಾ ಬಿದ್ದಾಗ ಆರೈಸಿದಳು ತಾಯಿ
ಧೈರ್ಯದಿ ಮರಳಿ ಏಳುವುದ ಕಲಿಸಿದೆ ನೀ |
ಸೋತಾಗ ಸಾಂತ್ವನ ಮಾಡಿದಳು ತಾಯಿ
ಸೋಲಿಂದ ಗೆಲುವಿನ ದಾರಿಯ ತೋರಿದೆ ನೀ ||

ಹಣದ ಅರಿವ ಮೂಡಿಸಿದಳು ತಾಯಿ
ಅದರ ಬೆಲೆಯ ಪಾಠವ ಕಲಿಸಿದವ ನೀ |
ಜೀವವ ನೀಡಿಹಳು ನನ್ನ್ಹೆತ್ತ ತಾಯಿ
ಜೀವನದ ಬೆಲೆಯನ್ನು ಕಲಿಸಿದವ ನೀ ||

ತಾಯಿ ಪ್ರತ್ಯಕ್ಷ ದೈವವೆಂದಿಹದು ಸ್ಮೃತಿಯು
ಪ್ರತ್ಯಕ್ಷವಿದ್ದರೂ ಅರಿಯಲಾಗದ ದೈವ ತಂದೆಯು |
ಹೇಗೆಂದು ಪ್ರಕಟಿಸಲಿ ನಿನ್ನ ಮೇಲಿನ ಪ್ರೀತಿಯ
ಅದಕಾಗಿ ಬರಿದಿಹೆನು ಈ ಚಿಕ್ಕ ಓಲೆಯ ||

ತಾಯಲ್ಲಿ ನಿಮ್ಮನ್ನು ನಿಮ್ಮಲ್ಲಿ ತಾಯಿಯ ಪ್ರತಿದಿನವು ಕಾಣುತಿಹೆನು
ನನ್ನ ಜೀವನಕೆ ಶೋಭೆಯ ರಾಣಿ ಬಾಳಿಗೆ ಆನಂದದ ರಾಜ ನೀವಿಬ್ಬರುರೆಂದು ತಿಳಿದಿಹೆನು
ಮಗನಾಗಿ ಇದುವರೆಗೆ ನನ್ನಾಲೌಕ್ಯ ಪ್ರೀತಿಯ ನಾ ಹೇಳಲಿಲ್ಲ |
ಈ ಭಾವನೆಯು ಪದಗಳನು ಮೀರಿ ನಿಂತಿಹುದೆಂದು ನಾ ಮರೆತಿಲ್ಲ
ಆದರೂ ಪದಗಳ ಜತೇ ಜೋಡಿಸಿ ಹೇಳುತಿಹೆ ಇಗೋ ತಂದೆ
ಹೃದಯ ತುಂಬಿ ಪ್ರಿತಿಸುತಿಹೆ ನಿಮ್ಮ ಮತ್ತಷ್ಟು ಮಹದಷ್ಟು ಆಗಸದಂತೆ ||

ಕಮಲ್ ಆನಂದ್


Follow us on:

https://facebook.com/askmysuru

https://instagram.com/askmysuru

Join us on:

https://facebook.com/groups/askmysuru

Email:

lets(at)askmysuru.com

Website:

http://askmysuru.com

Subscribe us on:

https://youtube.com/c/askmysuru

Contact us for classifieds and ads : +91 9742974234



 
error: Content is protected !!