
ಈ ಪುಸ್ತಕ ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ. ಸದಾ ನನ್ನ ಕಾಡೋ ಮತಾಂತರ, ಒಂದು ಧರ್ಮದಿಂದ ಇನ್ನೊಂದು ಧರ್ಮದ ಅಪ್ಪುಗೆ ಕೆಲವೊಮ್ಮೆ ಆಸೆ ಇಂದ, ಸ್ವಯಂ ಪರೇರಣೆಯಿಂದ, ಆಮಿಷಕ್ಕೆ ಒಳಗಾಗಿ, ಸಂದರ್ಭಕ್ಕೆ ಸೂಕ್ತವಾಗಿ ಮತಾಂತರ ಹೊಂದುತ್ತಾರೆ.
ಹಿಂದೂ ಧರ್ಮದ ಬದಲಾವಣೆ ಅಗತ್ಯವಿಲ್ಲ ಹಿಂದೂ ಸಮಾಜದ ಸುಧಾರಣೆ ಅಗತ್ಯವಿದೆ. ಹಿಂದೂ ಧರ್ಮದಲ್ಲಿ ಇರುವ ಸಹಿಯುಷ್ಣತೆ, ಸಮಾನ ಅವಕಾಶ, ಅಭಿಪ್ರಾಯ ಬೇಧಗಳ ಸಮಾನ ಸ್ವೀಕರಣ ಭಾವ ಬೇರೆ ಧರ್ಮದಲ್ಲಿ ಕಡಿಮೆಯೇ. ರಾಷ್ಟ್ರ ಪ್ರೇಮ ಕೇವಲ ಯಾವುದೇ ಧರ್ಮದ ಹಕ್ಕಲ , ಅದು ಪ್ರತಿಯೊಬ್ಬ ರಾಷ್ಟ್ರ ವಾಸಿಯಾದ್ದು . ಒಂದು ಧರ್ಮ ರಾಷ್ಟ್ರ ಪ್ರೇಮದ ಗುರುತು ಅಲ್ಲವೇ ಅಲ್ಲ. ಮುಸಲ್ಮಾನರ ರಾಷ್ಟ್ರ ಪ್ರೇಮ ಭಾರತವಾಗಿದ್ದರೇ ಅವ್ರ ಧರ್ಮದ ಪವಿತ್ರ ಸ್ಥಾನ ಮೆಕ್ಕಾ. ಇನ್ನು ಕ್ರೈಸ್ತರು ಬೇತಲ್ಹೆಮ್. ಆದರೆ ಹಿಂದೂಗಳು ಹಾಗೆ ಅಲ್ಲ, ನಮ್ಮ ರಾಷ್ಟ್ರಪ್ರೇಮ ಭಾರತ ಮತ್ತು ನಮ್ಮ ಪವಿತ್ರ ಸ್ಥಾನ ಕಾಶಿ ಎರಡು ಒಂದೇ ರಾಷ್ಟ್ರದಲ್ಲಿ. ಇಲ್ಲಿ ಅನ್ಯ ಧರ್ಮದವರಿಗೆ ಮತ್ತು ಹಿಂದೂಗಳಿಗೆ ಸ್ಥಾನ ಬೇದ ಉಂಟಾಗುತ್ತದೆ.
ಈ ಧರ್ಮಶ್ರೀ ಯಲ್ಲಿ , ಸದಾ ಸ್ನೇಹಿತನ ಹೇಳಿಗೆ, ಒಳಿತನ್ನು ಬಯಸುವ ರಾಚಮ್ಮ, ಧರ್ಮದ ಅಂದಕರದಲಿ ಮಾನವ ಜನ್ಮದ ಅನುಕರಣೆ ಜೀವನ ಸಂಪೂರ್ಣವಾದ ಭಾಗವಲ್ಲ ಎಂದು ಮಾರ್ಕ್ಸ್ ನ ಅನುಯಾಯಿ ದೇವಿಪ್ರಸಾದ್, ರಾಷ್ಟ್ರ ಪ್ರೇಮ ಹಿಂದೂ ಧರ್ಮದ ಹಾಗೂ ಸಮಾಜದ ಸುಧಾರಣೆಗೆ ಸ್ವಯಂ ಜೀವನದ ಅರ್ಪಣೆ ಮಾಡಿಕೊಂಡ ಶಂಕರ. ಒಬ್ಬ ಉತ್ತಮ ಸ್ನೇಹಿತ ಹಾಗೂ ಬಂಧು ನಂಜು. ಒಡಲು ಅಂಚಿಕೊಂಡ ಶಾಕುಂತಲೆ , ಮನಸಾರೆ ಮೆಚ್ಚಿದ ಲಿಲ್ಲಿ ಪ್ರಮುಖ ಪಾತ್ರ ವಹಿಸುತ್ತರೆ.
ತಾವು ಜನಿಸಿದ ಧರ್ಮ( ಈಗಿನ ಬಹುತೇಕ ಕ್ರೈಸ್ತ ಮತ್ತು ಮುಸ್ಲಿಮರು)ಕೇವಲ ಮತಾಂತರವೇ ಹಾಗಿರುತ್ತದೆ ಮತ್ತು ಅವರ ಪೂರ್ವಜರು ಸಹ ಹಿಂದೂಗಳೇ ಹಾಗಿರುತ್ತರೆ ಎಂದು ತನ್ನ ಧರ್ಮದಿಂದ ಮರಳಿ ಹಿಂದೂ ಧರ್ಮದ ಸ್ವೀಕರಣ ಭಾವ ತಾಳಲು ಕೇವಲ ಹಿಂದೂ ಧರ್ಮದ ಪುಸ್ತಕ ಹಾಗೂ ಗ್ರಂಥಗಳ ಅಧ್ಯಯನದ ಮೂಲಕ ಮಾತ್ರವೇ ಸಾದ್ಯ.
ಯಾವುದೇ ಮತಕ್ಕೆ ಮತಾಂತರ ವಾಗುವ ಮುನ್ನ ಮನಸನ್ನ ಧೃಢ ಪಡಿಸಿಕೊಂಡು ನಂತರ ಮತಾಂತರ ವಾಗುವ ನಿರ್ಧಾರ ಮಾಡಬೇಕು ಎನ್ನುವ ಶಂಕರನ ಸಲಹೆ ಪ್ರತಿಯೊಬ್ಬ ಮತಾಂತರ ಬಯಸುವವನು ಒಪ್ಪುವಾಂತದು. ಮನಸು ಧೃಡವಾಗಿಸಲು, ಮತಾಂತರ ಹೊಂದಲು ಬಯಸುವ ಧರ್ಮದ ಪುಸ್ತಕ ಹಾಗೂ ಗ್ರಂಥಗಳ ಅಧ್ಯಯನ ಅತ್ಯವಶ್ಯಕ. ಇರುವ ಧರ್ಮ ತ್ಯಜಿಸುವ ಮುನ್ನ ಸ್ವಧರ್ಮದ ಅರಿವು ಕೂಡ ಅಷ್ಟೇ ಮುಖ್ಯ.
ಇಲ್ಲಿ ಸತ್ಯನಾರಾಯಣನಿಗೆ ಆದ ಮನೋ ವ್ಯಾಕುಲತೆ , ತಳಮಳ, ಆಲೋಚನೆಗಳ ಗರ್ಷಣೆ ಪ್ರಾಯಶಃ ಮತಾಂತರ ಹೊಂದಿದ ಪ್ರತಿಯೊಬ್ಬನ ನೋವು ಆಗಿರ್ಬಹುದು.
ಈ ಪುಸ್ತಕ ಓದಿದ ನಂತರ ನನ್ನ ಧರ್ಮದ ಹೆಮ್ಮೆ ಹಾಗೂ ಮತ್ತಷ್ಟು ಧರ್ಮ ಜ್ಞಾನ ತಿಳಿಯುವ ಹಂಬಲ ಹೆಚ್ಚಿಸಿದೆ.
ಈ ಕೃತಿಯನ್ನು ನೀಡಿದ್ದಕ್ಕೆ ಎಸ್ ಎಲ್ ಬೈರಪ್ಪ ಅವರಿಗೆ ನನ್ನ ಮನದಾಳದ ಕೃತಜ್ಞತೆ ಈ ಪದ ಕಮಲಗಳ ಮೂಲಕ ಅರ್ಪಣೆ.