Latest News

Latest News

ದಟ್ಟಗಳ್ಳಿ ತಿಮ್ಮಕ್ಕ ಉದ್ಯಾನವನದಲ್ಲಿ ಮಿಯಾವಾಕಿ ಕಿರು ಅರಣ್ಯಕ್ಕೆ ಚಾಲನೆ: 15,000ಕ್ಕೂ ಹೆಚ್ಚು ಗಿಡ ನೆಡುವ ಮಹತ್ವಾಕಾಂಕ್ಷಿ ಯೋಜನೆ

ಮೈಸೂರು, ಮಾರ್ಚ್ 27: ನಗರದಲ್ಲಿ ಹಸಿರು ವಲಯವನ್ನು ವಿಸ್ತರಿಸುವ ದಿಟ್ಟ ಹೆಜ್ಜೆಯಾಗಿ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ದಟ್ಟಗಳ್ಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮಿಯಾವಾಕಿ ಮಾದರಿಯ ಕಿರು...
Latest News

ರಂಗಾಯಣದ ವನರಂಗದಲ್ಲಿ ‘ಪಾರ್ಟಿ’ ನಾಟಕ ಕನ್ನಡಾನುವಾದ ಬಿಡುಗಡೆ: ಸಾಹಿತ್ಯ ರಂಗಭೂಮಿ ಗಣ್ಯರ ಸಮ್ಮೇಳನಕ್ಕೆ ವೇದಿಕೆ

ಮೈಸೂರು : ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಮತ್ತೊಂದು ಮೆರಗು ಸೇರ್ಪಡೆಯಾಗಲಿದ್ದು, ನಿರಂತರ ಫೌಂಡೇಶನ್ (ರಿ), ಮೈಸೂರು ಹಾಗೂ ಅಭಿರುಚಿ ಪ್ರಕಾಶನ ಸಂಯುಕ್ತವಾಗಿ ಆಯೋಜಿಸಿರುವ ಮರಾಠಿ ಖ್ಯಾತ ನಾಟಕಕಾರ ಮಹೇಶ್ ಎಲಕುಂಚವಾರ್ ಅವರ ‘ಪಾರ್ಟಿ’ ನಾಟಕದ ಕನ್ನಡಾನುವಾದ ಪುಸ್ತಕ ಬಿಡುಗಡೆ ಸಮಾರಂಭವು ಇದೇ ಶನಿವಾರ ಸಂಜೆ ನಡೆಯಲಿದೆ. ಈ ಕಾರ್ಯಕ್ರಮವು ರಂಗಾಯಣದ ವನರಂಗ ಸಭಾಂಗಣದಲ್ಲಿ ಮಾರ್ಚ್ 28ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಮರಾಠಿ ಮೂಲದ ‘ಪಾರ್ಟಿ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುವವರು ಪ್ರಸಾದ್ ಕುಂದೂರು. ಈ ಕೃತಿ ಮೂಲಕ ಕನ್ನಡ ಓದುಗರಿಗೆ ಸಮಕಾಲೀನ ನಾಟಕದ ಸವಿಯನ್ನು ಪರಿಚಯಿಸುವ ಪ್ರಯತ್ನವಾಗಿದೆ. ಅಭಿರುಚಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕಾರ್ಯಕ್ರಮವನ್ನು ಡಾ. ಓ. ಎಲ್. ನಾಗಭೂಷಣಸ್ವಾಮಿ ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಿದ್ದು, ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ, ಖ್ಯಾತ ಕವಿ ಹಾಗೂ ಲೇಖಕ ಜಯಂತ...
Latest News

ಶಿಸ್ತು, ನಿಷ್ಠೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ

– ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು – ಕಿರಿಯ ಪವರ್ ಮ್ಯಾನ್ ಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಮೈಸೂರು, ಮಾ.27, 2026: “ಸರ್ಕಾರಿ...
Latest News

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ : ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ ಉದ್ಘಾಟನೆ        

ಮೈಸೂರು :- ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ದಿನಾಂಕ: 27-03-2026 ರಂದು ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೇಯನ್ನು ಆಯೋಚಿಸಿದ್ದು, ಈ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು   ಡಾ. ಎಂ.ಕೆ. ರಮೇಶ್,...
Latest News

ಅಂಬೇಡ್ಕರ್, ಜಗಜೀವನ್ ರಾಮ್ ಜಯಂತಿ ಒಟ್ಟಿಗೆ ಆಚರಣೆ: ಮಾ.30ಕ್ಕೆ ಭಾರಿ ಸಮಾರಂಭಕ್ಕೆ ಶಾಸಕ ಡಿ.ರವಿಶಂಕರ್ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್. ನಗರ. ಮಾ. 27:- ಡಾ. ಬಿ ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆಯನ್ನು...
Latest News

ಮೈಸೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಗೊಂದಲ : ಸರ್ವೇ ಇಲ್ಲದೆ ಅಳವಡಿಕೆ ಆರೋಪ : ಹಿರಿಯ ವಕೀಲ ಎ.ಎಂ.ಭಾಸ್ಕರ್ ಬೇಸರ

ಮೈಸೂರು: ನಗರದ ವಿವಿಧೆಡೆ ಕಳೆದ ಡಿಸೆಂಬರ್‌ನಿಂದೀಚೆಗೆ ಎಲ್ಲೆಂದರಲ್ಲಿ ಏಕಾಏಕಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇದರಿಂದ ಅನುಕೂಲದ ಬದಲು ಸಮಸ್ಯೆಯೇ ಹೆಚ್ಚಾಗಿದೆ. ಹೀಗಾಗಿ ಇವುಗಳನ್ನು ಅಳವಡಿಸುವ ಮುನ್ನ ಯಾವುದಾದರೂ ಸರ್ವೆ ನಡೆದಿದೆಯೇ, ಪಾಲಿಕೆ, ಮುಡಾ, ಭಾರತೀಯ ರಸ್ತೆ ಕಾಂಗ್ರೆಸ್‌ನ ಅನುಮತಿ ಪಡೆಯಲಾಗಿದೆಯೇ ಎಂದು ತಾವು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಪೊಲೀಸ್ ಆಯುಕ್ತರು ನಕಾರಾತ್ಮಕ ಉತ್ತರ ನೀಡಿದ್ದಾರೆ ಎಂದು ಹಿರಿಯ ವಕೀಲ ಎ.ಎಂ.ಭಾಸ್ಕರ್ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲೆಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಿದ ಬಳಿಕ ಜನದಟ್ಟಣೆ, ಸಂಚಾರ ದಟ್ಟಣೆ ಗೊಂದಲಕಾರಿಯಾಗಿ ಕಂಡು ಬರುತ್ತಿರುವುದು ತಮ್ಮ ಗಮನಕ್ಕೆ ಬಂತು. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಹಾಕಿ ಯಾವ ಯಾವ ವೃತ್ತದಲ್ಲಿ ಸರ್ವೆ ನಡೆದಿದೆ, ಎಷ್ಟು ವೆಚ್ಚವಾಗಿದೆ, ಸಂಬಂಧಿಸಿದವರ ಅನುಮತಿ ಪಡೆಯಲಾಗಿದೆಯೇ ಎಂಬಿವೇ ಮೊದಲಾದ ೧೪ ಪ್ರಶ್ನೆ...
Latest News

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವುದು ಯುದ್ಧ ಅಂತ್ಯವಾಗಿ ವಿಶ್ವದಲ್ಲಿ ಶಾಂತಿ ನೆಲೆಸಲಿ : ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಮೈಸೂರು: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವುದು ಯುದ್ಧ ಅಂತ್ಯವಾಗಿ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಎಂದು ಒತ್ತಾಯಿಸಿ ಜನಸ್ಪಂದನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶಾಂತಿ ಸಂದೇಶ...
Latest News

ಹೆಚ್.ಡಿ.ಕೋಟೆ ಸಮೀಪ ಗುಜರಿ ಗೋದಾಮಿಗೆ ಬೆಂಕಿ : ಲಕ್ಷಾಂತರ ರೂ. ನಷ್ಟ, ನಾಲ್ಕು ಗಂಟೆಗಳ ಹೋರಾಟದ ಬಳಿಕ ಅಗ್ನಿ ನಿಯಂತ್ರಣ

ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕು: ತಾಲೂಕಿನ ಹ್ಯಾಂಡ್ ಪೋಸ್ಟ್ ಜಕ್ಕಳ್ಳಿ ಸಮೀಪದಲ್ಲಿರುವ ಗುಜರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾನುಗಳು ಸುಟ್ಟು ಕರಕಲಾದ...
Latest News

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

ಮೈಸೂರು: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ...
Latest News

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ಡಾ. ನಿಂಗರಾಜ್ ಗೌಡರ ಮಾತುಕತೆ

ಮೈಸೂರು: ಭಾರತೀಯ ಜನತಾ ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಮುಂದಿನ ರಾಜಕೀಯ ಕಾರ್ಯಯೋಜನೆಗಳ ಕುರಿತು ಮಹತ್ವದ ಚರ್ಚೆಗಳು ಮೈಸೂರಿನಲ್ಲಿ ನಡೆದವು. ಭಾರತ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರನ್ನು ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿರುವ ಡಾ. ಈ.ಸಿ. ನಿಂಗರಾಜ್ ಗೌಡರು ಭೇಟಿ ಮಾಡಿ ಪಕ್ಷದ ವಿವಿಧ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತುಕತೆ ನಡೆಸಿದರು. ಈ ವೇಳೆ ಮೈಸೂರು ವಿಭಾಗದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕ್ರಮಗಳು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಕ್ರಿಯತೆ ಹೆಚ್ಚಿಸುವ ಯೋಜನೆಗಳು ಹಾಗೂ ಯುವಕರನ್ನು ಹೆಚ್ಚು ಸಂಖ್ಯೆಯಲ್ಲಿ ಪಕ್ಷದತ್ತ ಆಕರ್ಷಿಸುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಮುಂದಿನ ಚುನಾವಣಾ ಸನ್ನಾಹದ ಅಂಗವಾಗಿ ಕೈಗೊಳ್ಳಬೇಕಾದ ತಂತ್ರಗಳು, ಸಾರ್ವಜನಿಕ ಸಂಪರ್ಕ ಅಭಿಯಾನಗಳು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಸಹ ವಿಶೇಷ ಗಮನ ಹರಿಸಲಾಯಿತು. ಡಾ. ನಿಂಗರಾಜ್ ಗೌಡರು ಮೈಸೂರು ಭಾಗದಲ್ಲಿ ನಡೆಯುತ್ತಿರುವ...
1 2 3 4 45
Page 2 of 45