
ಮೈಸೂರು: ನಗರದ ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜು ಒಂದು ವಾರದ ಎನ್ಎಸ್ಎಸ್ ಘಟಕದ ಶಿಬಿರ ತೆರೆ ಕಂಡಿದೆ. ದಿನಾಂಕ 28.4. 2024 ರಿಂದ 04.5.2024 ಗ್ರಾಮ ವಾಸ್ತವ್ಯದೊಂದಿಗೆ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಳೆಗಟ್ಟುತ್ತಿದೆ.
ನೆನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಗರದ ಹಿರಿಯ ನ್ಯಾಯಾಧೀಶರಾದ ಶ್ರೀಯುತ ದಿನೇಶ್ ಬಿ ಜಿ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಆಗಮಿಸಿದ್ದರು.
ಅಲ್ಲದೇ ಶ್ರೀ ಎಸ್ ಲೋಕೇಶ್ , ಅಧ್ಯಕ್ಷರು, ಮೈಸೂರು ವಕೀಲ ಸಂಘ , ಶ್ರೀ ಜಗದೀಶ್ ಎ ಟಿ ಸಹಾಯಕ ಪ್ರಾಧ್ಯಾಪಕರು, ಜೆಎಸ್ಎಸ್ ಕಾನೂನು ಕಾಲೇಜು,
ಶ್ರೀ ಸುರೇಶ್ ಕುಮಾರ್ ನಿರ್ದೇಶಕರು, ಕ್ರೀಡಾ ವಿಭಾಗ, ಜೆಎಸ್ಎಸ್ ಕಾನೂನು ಕಾಲೇಜು ಮೈಸೂರು ಮತ್ತಿತರರು ಭಾಗವಹಿಸಿದ್ದರು.