ಇಂದಿನ ಅಭಿಯಂತರರ ದಿನದ (EngineersDay) ಸಂದರ್ಭದಲ್ಲಿ ನಾವು ಕಾಡಿನ ಒಬ್ಬ ಅದ್ಭುತ ಇಂಜಿನಿಯರ್ ಬಗ್ಗೆ ತಿಳಿಯಬೇಕಾಗುತ್ತದೆ. “ಆನೆ ನಡೆದದ್ದೆ ದಾರಿ” ಎನ್ನುವ ಗಾದೆ ಮಾತಿನಂತೆ ಆನೆ ಕಾಡಿನ ಕಲ್ಲುಮುಲ್ಲಿನ ದಾರಿಯಲ್ಲಿ ತಾನು ಮೊದಲು ನಡೆದು ರಸ್ತೆಗಳನ್ನು ನಿರ್ಮಿಸುತ್ತವೆ.
ಕಾಡಲ್ಲಿ ಓಡಾಡಲು ಕಾಡಲ್ಲಿ ಆನೆಗಳು ನಿರ್ಮಿಸಿದ ‘ಆನೆಕಾಲ್ದಾರಿ’ಗಳೆ ಆಸರೆ. ಆನೆಗಳು ಪ್ರತಿದಿನ ಹತ್ತಾರು ಮೈಲು ಕ್ರಮಿಸುವುದರಿಂದ ಕಾಡಲ್ಲಿ ಹಲವು ಬೀಜಗಳು ಬೇರೆ ಕಡೆಗೆ ಪ್ರಸಾರವಾಗಲು ಸಾಧ್ಯವಾಗಿ ಜೀವವೈವಿಧ್ಯವನ್ನು ಹೆಚ್ಚಿಸುತ್ತದೆ! ಅದೇ ರೀತಿ ಕಾಡಲ್ಲಿ ಕೆಲವು ಮರಗಳನ್ನು ಮುರಿದು ಸ್ವಾಭಾವಿಕವಾಗಿ ಮರದ ಸಾಂಧ್ರತೆಯನ್ನು ನಿಯಂತ್ರಿಸುತ್ತವೆ.
ಇದರ ಜೊತೆಗೆ ಇವು ಹುಲ್ಲನ್ನು ಕಿತ್ತು ತಿನ್ನುವಾಗ ಕಾಲಿನಲ್ಲಿ ನೆಲವನ್ನು ಅಗೆದು ಕಾಡನ್ನು ಉಳುಮೆ ಮಾಡುತ್ತವೆ. ಇದರಿಂದ ಕಾಡಿನ ಭೂಮಿ ಹೆಚ್ಚು ನೀರು ಕುಡಿಯಲು ಅಲ್ಲಿ ಹೊಸ ಗಿಡ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಜೇಡಿಗಾಗಿ ಮಣ್ಣು ಕೊರೆದು ಗುಂಡಿಮಾಡಿ ಅಂತರ್ಜಲ ವೃದ್ದಿಗೆ ಕಾರಣವಾಗಯತ್ತವೆ.