Articles

ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ದೊಡ್ಡ ಆಶೆಯವನ್ನೂ ಹೊಂದಿದ್ದೂ, ಯುವಕರಿಗಾಗಿ ವಿನ್ಯಾಸಗೊಳಿಸಲಾದ ಇ-ಸ್ಕೂಟರ್ ಜುಲು ಅನ್ನು ಬಿಡುಗಡೆ ಮಾಡಿದೆ

Ask Mysuru

ಗ್ರೀನ್ ಮೊಬಿಲಿಟಿಯನ್ನು ಮುನ್ನಡೆಸುವ ದೂರದೃಷ್ಟಿಯಿಂದ ರೀಬ್ರಾಂಡಿಂಗ್‌ ಅನಾವರಣಗೊಳಿಸುತ್ತದೆ

sri krishnadevaraya hampi

ಬ್ರಾಂಡ್ ನ ಹೊಸ ದಿಕ್ಕು, ‘ಪ್ಲಾನೆಟ್ ಅಟ್ ಅವರ್ ಹಾರ್ಟ್‘ ಸುಸ್ಥಿರ ಚಲನಶೀಲತೆಯು ಬದ್ಧತೆಯಿಂದ ಚಾಲನೆಗೊಳ್ಳುತ್ತದೆ.

ಹೊಸ ಜುಲು ಮೊಟ್ಟಮೊದಲ ಬಾರಿಗೆ “ಬ್ಯಾಟರಿ ಆಸ್ ಎ ಸಬ್‌ಸ್ಕ್ರಿಪ್ಶನ್‌” ಯೋಜನೆಗಳನ್ನು ಮತ್ತು ಆಯಿಲ್-ಕೂಲ್ಡ್ ಇಮ್ಮರ್ಶನ್ ತಂತ್ರಜ್ಞಾನದೊಂದಿಗೆ ವೇಗವಾದ ಚಾರ್ಜಿಂಗ್, ದೀರ್ಘಾವಧಿಯ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಿದೆ.

ಮೈಸೂರು 19.12.2023: ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಕೈನೆಟಿಕ್ ಗ್ರೀನ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಜುಲು ಅನ್ನು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ಕೈನೆಟಿಕ್ ಗ್ರೀನ್ ಇಂದು “ಪ್ಲಾನೆಟ್ ಅಟ್ ಅವರ್ ಹಾರ್ಟ್” ಎಂಬ ಬ್ರಾಂಡ್ ಫಿಲಾಸಫಿ ಹೇಳಿಕೆಯೊಂದಿಗೆ ಹೊಸ ಬ್ರಾಂಡ್ ಗುರುತನ್ನು ಅನಾವರಣಗೊಳಿಸಿತು.

ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಕೈನೆಟಿಕ್ ಗ್ರೀನ್‌ನ ಸ್ಥಾಪಕರು ಮತ್ತು ಸಿಇಒ ಆದ ಸುಲಜ್ಜಾ ಫಿರೋಡಿಯಾ ಮೋಟ್ವಾನಿ, “ಇದು ಕೈನೆಟಿಕ್ ಗ್ರೀನ್ ಕುಟುಂಬಕ್ಕೆ ಮತ್ತು ಇವಿ ಉದ್ಯಮಕ್ಕೆ ಮಹತ್ವದ ಕ್ಷಣವಾಗಿದೆ. ಕೈನೆಟಿಕ್ ಗ್ರೂಪ್ ತನ್ನ ಕ್ರಾಂತಿಕಾರಿ ದ್ವಿಚಕ್ರ ವಾಹನಗಳಾದ ಕೈನೆಟಿಕ್ ಹೋಂಡಾ ಸ್ಕೂಟರ್ ಮತ್ತು ಕೈನೆಟಿಕ್ ಲೂನಾಕ್ಕಾಗಿ ಲಕ್ಷಾಂತರ ಜನರಿಂದ ಚಿರಪರಿಚಿತವಾಗಿದೆ ಮತ್ತು ಪ್ರೀತಿಸಲ್ಪಟ್ಟಿದೆ. ನಮ್ಮ ಇ-ಸ್ಕೂಟರ್ ಜುಲು ಬಿಡುಗಡೆಯೊಂದಿಗೆ, ಕೈನೆಟಿಕ್ ಗ್ರೀನ್ ಮುಂಬರುವ ವರ್ಷಗಳಲ್ಲಿ ನಮ್ಮ ಗ್ರಾಹಕರಿಗಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು “ಹಸಿರು” ಅವತಾರದಲ್ಲಿ ತರುತ್ತೇವೆ ಎಂದು ಘೋಷಿಸಲು ಉತ್ಸುಕವಾಗಿದೆ. ನಾವಿನ್ಯತೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಮಹಾನ್ ಕೈನೆಟಿಕ್ ಪರಂಪರೆಯನ್ನು ಮುಂದುವರಿಸಲು ಮತ್ತು ಈಗ ಅದಕ್ಕೆ “ಸುಸ್ಥಿರ ಚಲನಶೀಲತೆಯ” ಹೊಸ ಅಧ್ಯಾಯವನ್ನು ಸೇರಿಸಲು ಸಾಧ್ಯವಾಗಿರುವುದಕ್ಕೆ ನಾನು ಆಶೀರ್ವದಿಸಲ್ಪಟ್ಟಿದ್ದೇನೆ ಮತ್ತು ಹೆಮ್ಮೆಪಡುತ್ತೇನೆ. ಕೈನೆಟಿಕ್ ಗ್ರೀನ್ ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಶೂನ್ಯ-ಹೊರಸೂಸುವಿಕೆಯ ವಾಹನಗಳಾಗಿದ್ದೂ, ಈ ಮೂಲಕ ನಮ್ಮ ಗ್ರಹವನ್ನು ಹಸಿರುವಂತವಾಗಿ ಮಾಡಿ ಮತ್ತು ಗಾಳಿಯನ್ನು ಸ್ವಚ್ಛವಾಗಿಸುತ್ತದೆ. ಇದು ಗ್ರಾಹಕರಿಗೆ ಉತ್ತಮ ಮೌಲ್ಯ ಮತ್ತು ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಉಳಿತಾಯವನ್ನು ಸಹ ತರುತ್ತದೆ. ಈ ಹೊಸ ಅವತಾರದಲ್ಲಿ ದ್ವಿಚಕ್ರ ವಾಹನ ಪ್ರಯಾಣವನ್ನು ಮತ್ತೆ ಪ್ರಾರಂಭಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ! ಇದಲ್ಲದೆ, ನಮ್ಮ ರೀಬ್ರಾಂಡಿಂಗ್ ಜನಸಾಮಾನ್ಯರಿಗೆ ನವೀನ ಮತ್ತು ಸುಸ್ಥಿರ ಚಲನಶೀಲತೆ ಪರಿಹಾರಗಳ ಅನ್ವೇಷಣೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ನಾವು ಹಸಿರು ತಂತ್ರಜ್ಞಾನದ ಈ ಯುಗವನ್ನು ಪ್ರವೇಶಿಸುತ್ತಿದ್ದಂತೆ, ಹೊಸ ಬ್ರಾಂಡ್ ನ ಬ್ರ್ಯಾಂಡಿಂಗ್ನ ಮೂಲಕ ಈ ಉದ್ದೇಶ ಮತ್ತು ನಾಯಕತ್ವವನ್ನು ಬೆಳೆಸುತ್ತದೆ.

ಕೈನೆಟಿಕ್ ಗ್ರೀನ್ ನ ಹೊಸ ಜುಲು ಸಾಟಿಯಿಲ್ಲದ ವೈಶಿಷ್ಟ್ಯಗಳು ಮತ್ತು ಆವಿಷ್ಕಾರಗಳು, ಗಮನಾರ್ಹ ವೇಗ, ವ್ಯಾಪಕ ಶ್ರೇಣಿ ಮತ್ತು ಅತ್ತ್ಯೂನ್ನತ ಆರಾಮವನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಬಯಸುವ ಜನರಿಗೆ ಮತ್ತು ಯುವಕರಿಗೆ ಜೆನ್ ಝಡ್ ವಾಹನನವು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ, ಇವರಿಗೆ ಜುಲು ಬಹುಶಃ ಸ್ವಾತಂತ್ರ್ಯ ಮತ್ತು ಚಲನಶೀಲತೆಗೆ ಕಡೆಗೆ ಪ್ರಥಮ ಹೆಜ್ಜೆಯಾಗಿದೆ. ಭಾರತೀಯ ಗ್ರಾಹಕರಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಜುಲು ಭಾರತೀಯರು ಪ್ರಯಾಣಿಸುವ ವಿಧಾನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ಕೈಗೆಟುಕುವ ಆದರೆ ಹೆಚ್ಚಿನ ಕಾರ್ಯಕ್ಷಮತೆಯ ಉತ್ತಮವಾದ ಸವಾರಿ ಅನುಭವವನ್ನು ನೀಡುತ್ತದೆ.

ಕೈನೆಟಿಕ್ ಗ್ರೀನ್ ಜುಲುವಿನಲ್ಲಿ ಅತ್ಯಾಧುನಿಕ “ಕೆಜಿ ಎನರ್-ಜಿ” ಬ್ಯಾಟರಿ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಿದೆ. ಇದರ ಹೃದಯಭಾಗದಲ್ಲಿ ಪೇಟೆಂಟ್ ಪಡೆದ ಆಯಿಲ್-ಕೂಲ್ಡ್ ಆಕ್ಟಿವ್ ಇಮ್ಮರ್ಶನ್ ಕೂಲಿಂಗ್ ಟೆಕ್ನಾಲಜಿಯಿದೆ. ಇದು ಅತ್ಯುತ್ತಮ ಥರ್ಮಲ್ ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ, 15-ಆಂಪ್ ಸಾಕೆಟ್ನೊಂದಿಗೆ ಕೇವಲ 30 ನಿಮಿಷಗಳಲ್ಲಿ 80% ವರೆಗೆ ಅಲ್ಟ್ರಾ-ಫಾಸ್ಟ್ ಚಾರ್ಜ್, ಮತ್ತು 120,000 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ! ಇವೆಲ್ಲವನ್ನೂ ಸ್ಮಾರ್ಟ್ ಬಿಎಂಎಸ್ ಮತ್ತು ಎಐ ಆಧಾರಿತ ಬ್ಯಾಟರಿ ಹೆಲ್ತ್ ಪ್ರಿಡಿಕ್ಷನ್ ಸಿಸ್ಟಮ್ ಮೂಲಕ ಸಂಯೋಜಿಸಲಾಗಿದೆ. ಈ ಬ್ಯಾಟರಿ ಪ್ಲಾಟ್ ಫಾರ್ಮ್ ಬ್ಯಾಟರಿ ಕಾರ್ಯಕ್ಷಮತೆ, ಸಹಿಷ್ಣುತೆ ಮತ್ತು ಸುರಕ್ಷತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ, ಇದು ಮಾರುಕಟ್ಟೆ ಮಾನದಂಡಕ್ಕಿಂತ ಅನೇಕ ಪಟ್ಟು ಉತ್ತಮವಾಗಿದ್ದೂ, ಇವಿ ನಾವೀನ್ಯತೆಯ ಗಡಿಗಳನ್ನು ಮೇಲೆತ್ತುವ ಕೈನೆಟಿಕ್ ಗ್ರೀನ್ ನ ಬದ್ಧತೆಯನ್ನು ಬಲಪಡಿಸುತ್ತದೆ.

ಜುಲುವಿನೊಂದಿಗೆ, ಕೈನೆಟಿಕ್ ಗ್ರೀನ್ ತನ್ನ ಪ್ರಪ್ರಥಮ “ಬ್ಯಾಟರಿ ಆಸ್ ಎ ಸಬ್‌ಸ್ಕ್ರಿಪ್ಶನ್‌” ಯೋಜನೆಯೊಂದಿಗೆ ಕ್ರಾಂತಿಕಾರಿ ಮಾಲೀಕತ್ವದ ಅನುಭವದೊಂದಿಗೆ ಗಡಿಗಳನ್ನು ಮತ್ತಷ್ಟು ಮುಂದಕ್ಕೆ ತಳ್ಳುತ್ತದೆ. ಈ ನವೀನ ಬ್ಯಾಟರಿಯ ಚಂದಾದಾರಿಕೆ ಮಾದರಿಯು ಎಲೆಕ್ಟ್ರಿಕ್ ವಾಹನದ ಮಾಲೀಕತ್ವವನ್ನು ಮರುವ್ಯಾಖ್ಯಾನಿಸುತ್ತದೆ, ಗ್ರಾಹಕರಿಗೆ ಸಾಟಿಯಿಲ್ಲದ ಸುಲಭ ಮತ್ತು ಸರಳತೆಯನ್ನು ನೀಡುತ್ತದೆ. ಗ್ರಾಹಕರು ಬ್ಯಾಟರಿಗಾಗಿ ಮುಂಚಿತವಾಗಿ ಪಾವತಿಸುವುದಿಲ್ಲ ಎಂದು ಸಿಸ್ಟಮ್ ಖಚಿತಪಡಿಸುತ್ತದೆ, ಏಕೆಂದರೆ ಗ್ರಾಹಕರು “ನೀವು ಬಳಸುವಂತೆ ಪಾವತಿಸಿ” ಮಾದರಿಯಲ್ಲಿ ಬ್ಯಾಟರಿಗೆ ಚಂದಾದಾರರಾಗಬಹುದು, ಸ್ಕೂಟರ್ ನ ಆರಂಭಿಕ ಖರೀದಿ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಅಂತಿಮವಾಗಿ, ಚಂದಾದಾರಿಕೆ ಅವಧಿಯ ಕೊನೆಯಲ್ಲಿ ಬ್ಯಾಟರಿಯನ್ನು ಸಹ ಹೊಂದಬಹುದು. ಈ ರಚನೆಯು ಸ್ವಾಧೀನ ವೆಚ್ಚದಲ್ಲಿ 35% ಕ್ಕಿಂತ ಹೆಚ್ಚು ಕಡಿತಕ್ಕೆ ಕಾರಣವಾಗುತ್ತದೆ ಮತ್ತು ನಿರ್ವಹಣಾ ವೆಚ್ಚಗಳಲ್ಲಿ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುತ್ತದೆ. ತಡೆರಹಿತ ಬಳಕೆದಾರರ ಅನುಭವಕ್ಕಾಗಿ ವ್ಯವಸ್ಥೆಯನ್ನು ಮೊಬೈಲ್ ಅಪ್ಲಿಕೇಶನ್ನೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ.

ಸ್ಟೈಲಿಶ್ ಜುಲು 104 ಕಿ.ಮೀ ವ್ಯಾಪ್ತಿಯೊಂದಿಗೆ ಕಾರ್ಯಕ್ಷಮತೆಯನ್ನು ಮರುವ್ಯಾಖ್ಯಾನಿಸುತ್ತದೆ, ನೀವು ದೀರ್ಘ ಸವಾರಿಗಳನ್ನು ಆನಂದಿಸಬಹುದು ಎಂದು ಖಚಿತಪಡಿಸುತ್ತದೆ. ಗಂಟೆಗೆ 60 ಕಿ.ಮೀ ವೇಗದೊಂದಿಗೆ, ಇದು ವೇಗದ ಮತ್ತು ಮೋಜಿನ ಪ್ರಯಾಣದ ಅನುಭವವನ್ನು ನೀಡುತ್ತದೆ. 160 ಎಂಎಂನ ಗಣನೀಯ ಗ್ರೌಂಡ್ ಕ್ಲಿಯರೆನ್ಸ್ ನೀಡಿದ್ದೂ, ಇದು ವೈವಿಧ್ಯಮಯ ರಸ್ತೆಯ ಮೇಲ್ಮೈಗಳಿಗೆ ಸೂಕ್ತವಾಗಿದೆ. ಜುಲು 2.27 ಕಿಲೋವ್ಯಾಟ್ ಲಿಯಾನ್ ಬ್ಯಾಟರಿ ಸಾಮರ್ಥ್ಯದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಪೋರ್ಟಬಲ್ ಚಾರ್ಜರ್ ಅನ್ನು ಹೊಂದಿದ್ದೂ, ಮನೆಯಲ್ಲಿ ಅನುಕೂಲಕರ ಚಾರ್ಜಿಂಗ್ ಅನ್ನು ನೀಡುತ್ತದೆ.

ತನ್ನ ಪ್ರಭಾವಶಾಲಿ ಕಾರ್ಯಕ್ಷಮತೆಯ ಜೊತೆಗೆ, ಒಟ್ಟಾರೆ ರೈಡಿಂಗ್ ಅನುಭವವನ್ನು ಹೆಚ್ಚಿಸಲು ಜುಲು ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ಗಳು, ಅಂಡರ್-ಸೀಟ್ ಸ್ಟೋರೇಜ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್‌ಎಲ್‌), ಡಿಜಿಟಲ್ ಸ್ಪೀಡೋಮೀಟರ್, ಫ್ರಂಟ್ ಸ್ಟೋರೇಜ್ ಸ್ಪೇಸ್, ಫ್ರಂಟ್ ಬ್ಯಾಗ್ ಹುಕ್, ಸ್ಟೈಲಿಶ್ ಗ್ರಾಬ್ ರೈಲ್, ಆಟೋ ಪವರ್-ಕಟ್ ಚಾರ್ಜರ್, ಯುಎಸ್‌ಬಿ ಪೋರ್ಟ್ ಮತ್ತು ಬೂಟ್ ಲೈಟ್ ಅನ್ನು ಹೊಂದಿದೆ. ಬ್ಯಾಟರಿ, ಮೋಟರ್ ಮತ್ತು ಕಂಟ್ರೋಲರ್‌ನಂತಹ ಅದರ ಪ್ರಮುಖ ಘಟಕಗಳು ಐಪಿ 67 ರೇಟಿಂಗ್ ನೊಂದಿಗೆ ನೀರು ಮತ್ತು ಧೂಳು-ನಿರೋಧಕವಾಗಿವೆ. ಜುಲು ಕೆಜಿ-ಟ್ರಸ್ಟ್ ನೊಂದಿಗೆ ಬರುತ್ತದೆ, ಇದು 5 ವರ್ಷಗಳ ವಿಸ್ತರಿತ ವಾರಂಟಿಯನ್ನು ಒದಗಿಸುತ್ತದೆ, ಮತ್ತು ಕೆಜಿ ಅಶ್ಯೂರ್ ರಸ್ತೆಬದಿಯ ಸಹಾಯ ಮತ್ತು ಸೇವಾ ಬೆಂಬಲದೊಂದಿಗೆ ಗ್ರಾಹಕರ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.

ಪಿಕ್ಸೆಲ್ ವೈಟ್, ಇನ್ಸ್ಟಾ ಆರೆಂಜ್, ಯುಟ್ಯೂಬ್ ರೆಡ್, ಬ್ಲ್ಯಾಕ್ ಎಕ್ಸ್, ಎಫ್ಬಿ ಬ್ಲೂ ಮತ್ತು ಕ್ಲೌಡ್ ಗ್ರೇ ಎಂಬ ಆರು ಬಣ್ಣಗಳಲ್ಲಿ ಲಭ್ಯವಿರುವ ಮೇಡ್-ಇನ್-ಇಂಡಿಯಾ ಫೇಮ್ -2 ಕಾಂಪ್ಲೈಂಟ್ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ಪರಿಚಯಾತ್ಮಕ 94,900 (ಎಕ್ಸ್‌-ಶೋರೂಮ್‌) ಬೆಲೆಯಲ್ಲಿ ಲಭ್ಯವಿದ್ದೂ, ಇದು ದೇಶದಲ್ಲೇ ಅತ್ಯಂತ ಸ್ಪರ್ಧಾತ್ಮಕ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಇದಲ್ಲದೆ, ಕೈನೆಟಿಕ್ ಗ್ರೀನ್ ಇಂದು ತನ್ನ ಹೊಸ ಬ್ರಾಂಡ್, ಜೊತೆಗೆ ಬ್ರಾಂಡ್ ತತ್ವಶಾಸ್ತ್ರದ ಹೇಳಿಕೆ – “ಪ್ಲಾನೆಟ್ ಅಟ್ ಅವರ್ ಹಾರ್ಟ್” ಗುರುತನ್ನು ಅನಾವರಣಗೊಳಿಸಿತು. ನವೀಕರಿಸಿದ ಬ್ರಾಂಡ್ ಲೋಗೋ ಮತ್ತು ಮೆಸೇಜಿಂಗ್ ಪರಿಸರ ಸುಧಾರಣೆಗೆ ಕೈನೆಟಿಕ್ ಗ್ರೀನ್‌ನ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಚಲನಶೀಲತೆ ಪರಿಹಾರಗಳನ್ನು ರೂಪಿಸುವ ಉತ್ಸಾಹ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ಈ ಮೈಲಿಗಲ್ಲು ಪರಿಸರ ಪ್ರಜ್ಞೆ, ನವೀನ ಮತ್ತು ಸುಸ್ಥಿರ ಭವಿಷ್ಯವನ್ನು ರಚಿಸಲು ಸಹಾಯ ಮಾಡುವ ಕೈನೆಟಿಕ್ ಗ್ರೀನ್ ನ ಉದ್ದೇಶ ಮತ್ತು ದೃಷ್ಟಿಯನ್ನು ಪ್ರದರ್ಶಿಸುತ್ತದೆ. ಈ ಉಪಕ್ರಮವು ಹಸಿರು ಚಲನಶೀಲತೆಯನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ಕಂಪನಿಯ ಧ್ಯೇಯವನ್ನು ಬಲಪಡಿಸುತ್ತದೆ, ಸ್ವಚ್ಛ, ಆರೋಗ್ಯಕರ ಗ್ರಹಕ್ಕಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮುನ್ನಡೆಸುತ್ತದೆ.

Contact us for classifieds and ads : +91 9742974234



 
error: Content is protected !!