ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ
ಮೈಸೂರು :- ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದ ಭಿತ್ತಿಪತ್ರವನ್ನ ಶ್ರೀದತ್ತವಿಜಯಾನಂದ ಸ್ವಾಮೀಜಿ ಮತ್ತು ಶಾಸಕ ಟಿಎಸ್ ಶ್ರೀವತ್ಸ ರವರು ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಆವರಣದಲ್ಲಿ ಬಿಡುಗಡೆ ಮಾಡಿದರು,
ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ಮಾತನಾಡಿ *ಹನುಮಾನ್ ಚಾಲೀಸ ಪಠಣದಿಂದ ಮನುಷ್ಯನ ಆಯಸ್ಸು ಆರೋಗ್ಯ ವೃದ್ಧಿಸುವ ಜೊತೆಯಲ್ಲೆ ಆಂಜನೇಯನ ಶಕ್ತಿಯಿಂದ ಇಡೀ ಭೂಮಂಡಲವೇ ರಕ್ಷಣೆಯಾಗುತ್ತಿದೆ, ರಾಮ ಸೀತೆಯನ್ನು ಒಂದು ಮಾಡಿದ ಹನುಮ ಶಕ್ತಿ ಅಪಾರವಾದುದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಫಬ್ರವರಿ 14ರಂದು ಲಕ್ಷಾಂತರ ಮಂದಿಯಿಂದ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಕರೆ ನೀಡಿದರು, ಪ್ರತಿಯೊಬ್ಬರಿಗೂ ಅನ್ನಪ್ರಸಾದ ಹನುಮರಕ್ಷೆಯನ್ನ ನೀಡಲಿದ್ದು ಮೈಸೂರಿನ ಆಸ್ಥಿಕ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿ ಎಂದರು,
ನಂತರ ಶ್ರೀದತ್ತವಿಜಯಾನಂದ ಬಾಲಾ ಸ್ವಾಮೀಜಿ ರವರು ಮಾತನಾಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರಿಗೆ ವಿಶ್ವೆದೆಲ್ಲಡೆ ಆಂಜನೇಯನ ಮೂರ್ತಿ ಆಶ್ರಮಗಳು ಭಕ್ತವೃಂದ ಸ್ಥಾಪಿಸಿದ್ದಾರೆ, ಆದರೂ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಭಕ್ತಿ ಅಭಿಮಾನವಿದೆ ಎಂದರೆ ಗುರುಗಳ ತಾಯಿಯವರು ಆಸೆಯಂತೆ ಮೈಸೂರಿನಲ್ಲಿಯೇ ಕಾರ್ಯಸಿದ್ಧಿ ಆಂಜನೇಯನ ಶಕ್ತಿ ಕೇಂದ್ರ ಸ್ಥಾಪಿಸಿ ಮತ್ತು ಮೈಸೂರಿನ ಆಸ್ಥಿಕ ಬಂಧುಗಳೊಂದಿಗೆ ಜಾತಿಭೇದವಿಲ್ಲದೆ ಧಾರ್ಮಿಕ ಚಟುವಟಿಕೆಗಳನ್ನ ನಿರಂತರವಾಗಿ ಆಯೋಜಿಸಬೇಕು ಎನ್ನುವುದು, ಹನುಮಾನ್ ಚಾಲೀಸ ಪಾರಾಯಣದಲ್ಲಿ ಗಿನ್ನೀಸ್ ದಾಖಲೆಯೂ ಆಗಿದೆ, ಪ್ರತಿಯೊಬ್ಬರು ಮನೆಮನೆಯಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಾಡಿ ನಂತರ 14ನೇ ತಾರೀಖು ಸಾಮೂಹಿಕವಾಗಿ ಪಠಸಿ ಭಗವಂತ ಕೃಪೆಗೆ ಪಾತ್ರರಾಗಬಹುದು ಎಂದರು
ನಂತರ ಶಾಸಕ ಟಿಎಸ್. ಶ್ರೀವತ್ಸ ರವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ಹನುಮಾನ್ ಚಾಲೀಸ ಪಾರಾಯಣ ಮತ್ತು ವಿದೇಶದಲ್ಲೂ ಸಹ ಕಾರ್ಯಸಿದ್ಧಿ ಆಂಜನೇಯ ಭವ್ಯ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮದ ಶಕ್ತಿಯನ್ನ ವ್ಯಾಪಕವಾಗಿ ಪ್ರಚುರಪಡಿಸಿದ್ದಾರೆ, ಮೈಸೂರಿನ ನಾಗರೀಕರಿಗೆ ಕೋವಿಡ್ ಸಂಕಷ್ಟ ಕಾಲದಲ್ಲೂ ಸಹ ಪ್ರತಿದಿನ 10ಸಾವಿರ ಆಹಾರ ಪೊಟ್ಟಣಗಳು ಮತ್ತು ಆರೋಗ್ಯ ರಕ್ಷಾ ಸಾಮಗ್ರಿಗಳನ್ನ ವಿತರಿಸಿ ನೆರವಾಗಿದ್ದಾರೆ, ಮೈಸೂರಿನ ಪೌರಕಾರ್ಮಿಕ ಕಾಲೋನಿಯಲ್ಲಿ 16ದೇವಸ್ಥಾನಗಳ ಜೀರ್ಣೋದ್ದಾರ ಮಾಡಿ ಪೌರಕಾರ್ಮಿಕರಿಗೂ ಧಾರ್ಮಿಕ ಚಟುವಟಿಕೆ ಪೂಜಾ ಕ್ರಮಗಳನ್ನ ತಿಳಿಸಿಕೊಟ್ಟು ಸಾಮಾಜಿಕ ಸಮಾನತೆಯ ಸಂದೇಶ ಸಾರಿದ್ದಾರೆ, ಮೈಸೂರಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್,
ಕೆ ಆರ್ ಸತ್ಯನಾರಾಯಣ, ನಜರ್ಬಾದ್ ನಟರಾಜ್, ಜೀವದಾರ ಗಿರೀಶ್, ವಿಕಾಸ್ ಶಾಸ್ತ್ರಿ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಡಾಕ್ಟರ್ ಲಕ್ಷ್ಮಿ, ಜಗದೀಶ್, ಪ್ರಕಾಶ್ ಪ್ರಿಯದರ್ಶಿ, ರಂಗನಾಥ್, ಜಯಸಿಂಹ, ಜತ್ತಿ ಪ್ರಸಾದ್, ಎಸ್ ಎನ್ ರಾಜೇಶ್, ಮಹೇಶ್ ಕಾಮತ್, ಹಾಗೂ ಇನ್ನಿತರರು ಹಾಜರಿದ್ದರು



