ಇಂದಿನ ಕೇಂದ್ರ ಸರ್ಕಾರದ 2026-27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ (Union Budget 2026-27) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿರುವ ಬಜೆಟ್ ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷಕ್ಕೆ ಸರ್ಕಾರದ ಆದಾಯ-ಖರ್ಚು ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಮೇಲ್ವಿಚಾರಣೆ, ಸರ್ಕಾರದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದಾಗಿದೆ.
ಕೈಗಾರಿಕೆ ಉತ್ಪಾದನೆಯ (manufacturing) ಮತ್ತು ಮೂಲಭೂತ ಅಧಾರಿತ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ.
ದೇಶದ GDP ಬೆಳವಣಿಗೆ ಸ್ಥಿರವಾಗಿರುವಂತೆ ಮುಂದುವರಿಸಲು ಯೋಜನೆ ಮಾಡಲಾಗಿದೆ ಹಾಗೂ ಮೂಲಭೂತ ಖರ್ಚು ಹೆಚ್ಚಸಲಾಗಿದೆ.
7 ಹೊಸ ವೇಗದ ರೈಲು ಮಾರ್ಗಗಳನ್ನು ಘೋಷಣೆ ಮಾಡಲಾಗಿದೆ. (ಮೈಸೂರು-ಬೆಂಗಳೂರು, ಹೈದರಾಬಾದ್-ಚೆನ್ನೈ ಸೇರಿದಂತೆ). ಲಾಜಿಸ್ಟಿಕ್ಸ್ ಮತ್ತು ನೀರಿನ ಮಾರ್ಗಗಳನ್ನು ವಿಸ್ತರಿಸುವ ಯೋಜನೆಗಳನ್ನೂ ರೂಪಿಸಲಾಗಿದೆ.
ಉತ್ಪಾದನೆ ಮತ್ತು ಹೊಸ ತಂತ್ರಜ್ಞಾನ, ಉತ್ಪಾದಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶೇಷ ಯೋಜನೆಗಳು – ಸೆಮಿಕಂಡಕ್ಟರ್, ಬಯೋಫಾರ್ಮಾ ಹಾಗು ರೇರ್ ಅರ್ಥ್ ಉಪಯೋಗಕ್ಕೇ ಪ್ರಾಮುಖ್ಯತೆ ನೀಡಲಾಗಿದೆ. ದೇಶದ ಹೊರತಾದ ಇಂಪೋರ್ಟ್ ಅವಲಂಬನೆ ಕಡಿಮೆ ಮಾಡಲು ನಿರ್ದಿಷ್ಟ ಕಾರ್ಯಕ್ರಮಗಳನ್ನೂ ಯೋಜಿಸಲಾಗಿದೆ.
MSME ಮತ್ತು ಉದ್ಯಮ ಬೆಂಬಲ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಣಕಾಸು ಬೆಂಬಲ, ಸ್ಮಾಲ್-ಮಾಹಿತಿ-ಟ್ರೆಡಿಂಗ್ ವ್ಯವಸ್ಥೆ (TReDS) ವಿಸ್ತರಣೆಯಾಗಿದೆ.
* ₹10,000 ಕೋಟಿ SME Growth Fund. ತೆರಿಗೆ ಮತ್ತು ನಿಬಂಧನೆಗಳ ಸುಧಾರಣೆಗೆ ಯೋಜಸಿಲಾಗಿದೆ.
ತೆರಿಗೆ ರಿಯಾಯಿತಿಗಳು (ಉದಾ: ವಿದೇಶಿ ಶಿಕ್ಷಣ/ತಪಾಸಣೆ, ವೈದ್ಯಕೀಯ ಖರ್ಚುಗಳಲ್ಲಿ ಕಡಿತ). STT (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್) ಹಿಗ್ಗಿಸುವ ನಿರ್ಧಾರವಾಗಿದೆ. 
ಬ್ಯಾಂಕಿಂಗ್ ವ್ಯವಸ್ಥೆಗೆ ಸಮೀಕ್ಷೆಗಳು ಮತ್ತು ಸುಧಾರಣೆ ಪ್ಯಾಕೇಜ್ ಆಧ್ಯತೆ ನೀಡಲಾಗಿದೆ.
ಸಾಲದ ಪ್ರಮಾಣ ನಿರ್ವಹಣೆ ಮತ್ತು ಮಧ್ಯಮ-ಅವಧಿ ಹಣಕಾಸು ಭದ್ರತೆ ಗುರಿಯನ್ನು ಇಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ.
ಇಂದಿನ ಬಜೆಟ್ ಮೂಲಭೂತ ಸರಂಜಾಮು ಅಭಿವೃದ್ಧಿ, ಉದ್ಯೋಗ ಸೃಷ್ಟಿ, MSME ಬೆಂಬಲ ಮತ್ತು ತಂತ್ರಜ್ಞಾನ-ಉತ್ಪಾದನೆ ಮೇಲೆ ಕೇಂದ್ರಿತವಾಗಿದೆ. ತೆರಿಗೆಯ ಹೆಚ್ಚಳ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತಕ್ಷಣದ ತೆರಿಗೆ ಲಾಭ ಕಡಿಮೆ, ಆದರೆ ದೀರ್ಘ-ಕಾಲಿಕ ಆರ್ಥಿಕ ಬೆಳವಣಿಗೆಗೆ ಗಮನ ನೀಡಲಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರವನ್ನೂ, ವಿಶೇಷವಾಗಿ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನೂ ಡಾ.ಈ.ಸಿ.ನಿಂಗರಾಜ್ ಗೌಡ ರವರು ಅಭಿನಂದಿಸಿದ್ದಾರೆ


