Latest News

ರಕ್ತ ದಾನ ಮಾಡಿ ಅಪ್ಪು ಸ್ಮರಿಸಿದ ಅಭಿಮಾನಿಗಳು

ಮೈಸೂರು:- ನಗರದ ಸಯಾಜಿ ರಾವ್ ರಸ್ತೆಯಲ್ಲಿರುವ ರಕ್ತ ನಿಧಿ ಕೇಂದ್ರದಲ್ಲಿ ಅಪ್ಪು ಅಭಿಮಾನಿಗಳು ರಕ್ತ ದಾನ ಮಾಡುವ ಮೂಲಕ ರಕ್ತದಾನ ಮಹಾದಾನ ಎಂಬ ಸಂದೇಶ ಸಾರುವ ಮೂಲಕ ಪುನೀತ್ ರಾಜಕುಮಾರ್ ಜನ್ಮದಿನ ಸ್ಮರಣೆ ಮಾಡಿದ ಅಪ್ಪು ಅಭಿಮಾನಿಗಳ.

ರಕ್ತದಾನ ಮಾಡಿ ನಂತರ ಮಾತನಾಡಿದ ಸೋನಾಲಿ ಜೈನ್ ಪುನೀತ್ ರಾಜಕುಮಾರ್ ನನ್ನ ನೆಚ್ಚಿನ ನಟ ಪ್ರತಿ 4 ತಿಂಗಳಿಗೊಮ್ಮೆ ನಾನು ರಕ್ತದಾನ ಮಾಡುತ್ತಿದ್ದು ಇದಕ್ಕೆ ಕಾರಣ ನನ್ನ ನೆಚ್ಚಿನ ನಟ ಅಪ್ಪು ಪ್ರತಿ ಹೆಣ್ಣು ಮಕ್ಕಳು ಕೂಡ ರಕ್ತದಾನವನ್ನು ಮಾಡಬಹುದು ಇದರಿಂದ ನಮಗೆ ಹೆಚ್ಚಿನ ಆರೋಗ್ಯ ಲಭಿಸಲಿದ್ದು ಇದರಿಂದ ಒಂದು ಜೀವವನ್ನು ಉಳಿಸಿದ ಪುಣ್ಯವೂ ಕೂಡ ಲಭಿಸಲಿದೆ ಎಂದು ತಿಳಿಸಿದರು.

ರಕ್ತ ದಾನಿ ಎಸ್ ಪಿ ಅಕ್ಷಯ್ ಪ್ರಿಯಾದರ್ಶನ ಮಾತನಾಡಿ ನಾನು ಪ್ರತಿ ವರ್ಷ ಅಪ್ಪು ಜನ್ಮದಿನದಂದು ರಕ್ತದಾನ ಮಾಡುತ್ತಾ ಬಂದಿದ್ದೇನೆ.ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ,ಬದುಕಿನ ಪ್ರೀತಿ ಎಲ್ಲರದಲ್ಲೂ ಜೀವಂತವಾಗಿಸಿದೆ. ಎಂದಿಗೂ ಮಾಸದ ನಗು ಮುಖದ ಅಪ್ಪುವಿಗೆ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅವರು ಹಾಕಿ ಕೊಟ್ಟ ಸೇವಾ ದಾರಿಯಲ್ಲಿ ಸಾಗುವುದು ಅವರ ಅಭಿಮಾನಿಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜು ( ಬಸಪ್ಪ ) ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಲೋಹಿತ್ , ಸಮಾಜ ಸೇವಕಿ ವಿದ್ಯಾ, ರಕ್ತದಾನಿಗಳಾದ ಸೋನಾಲಿ ಜೈನ್,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ದೇವೇಂದ್ರ ಪ್ರತಿಯರ್, ದರ್ಶನ್ ಇನ್ನಿತರರು ಇದ್ದರು.

Contact us for classifieds and ads : +91 9742974234