Latest News

ಫೋನ್ ಸ್ವೀಕರಿಸದಿದ್ದರೆ ಕ್ರಮ ಖಚಿತ: ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಖಡಕ್ ಸಂದೇಶ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ.ಏ.08:- ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ನಾಗರೀಕರನ್ನು ಅಲೆದಾಡಿಸಿದ ಬಗ್ಗೆ ನಮಗೆ ದೂರು ಬಂದಲ್ಲಿ ಹಾಗೂ ನಮ್ಮ ದೂರವಾಣಿ ಕರೆಯನ್ನು ಸ್ವೀಕರಿಸದೆ ಇದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಪಾರಸ್ಸು ಮಾಡಲಾಗುವುದು ಎಂದು ಮೈಸೂರು ಲೋಕಾಯುಕ್ತ ಡಿ ವೈ ಎಸ್ ಪಿ ಶೈಲೇಂದ್ರ ತಿಳಿಸಿದರು.
ಪಟ್ಟಣದ ತಾಲ್ಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಮತ್ತು ದೂರು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿ ವೈ ಎಸ್ ಪಿ ಶೈಲೇಂದ್ರ ಸಾರ್ವಜನಿಕ ಕೆಲಸಕ್ಕೆ ಸೇರಿದ ಮೇಲೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು 24 ಗಂಟೆಯಲ್ಲಿಯೂ ತಮ್ಮ ಮೊಬೈಲ್ ಆನಲ್ಲಿದ್ದು ಸಾರ್ವಜನಿಕರು ಸೇರಿದಂತೆ ಇನ್ನಿತರ ಕರೆಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ಉತ್ತರವನ್ನು ನೀಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಅಧಿಕಾರಿಯು ತಮ್ಮ ದೈನಂದಿನ ಕೆಲಸದ ಬಗ್ಗೆ ದಿನವಾಯಿ ಪುಸ್ತಕದಲ್ಲಿ ದಾಖಲೆಯನ್ನು ಬರೆದಿಡಬೇಕು ಮತ್ತು ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಆ ಕೆಲಸ ತಮ್ಮಲ್ಲಿ ಆದರೆ ಮಾಡಬೇಕು ಇಲ್ಲದಿದ್ದಲ್ಲಿ ಹಿಂಬಾರ ಮತ್ತು ಅವರ ಕೆಲಸಗಳು ಎಲ್ಲಿ ಆಗಬೇಕು ಅಲ್ಲಿಗೆ ಹೋಗಿ ಎಂದು ಹೇಳಿ ಕಳಿಸಿಕೊಡಬೇಕು ಆಗ ನಾಗರೀಕರ ದೂರುಗಳು ಮತ್ತು ಅಧಿಕಾರಿಗಳ ವಿರುದ್ಧ ಯಾವುದೇ ಸಾರ್ವಜನಿಕರು ದೂರು ನೀಡುವುದಿಲ್ಲ ಎಂದು ತಿಳಿಸಿದರು.
ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧವೇ ದೂರುಗಳು ಹೆಚ್ಚಿದ್ದು ಅದಕ್ಕೆ ಆಸ್ಪದ ಕೊಡದೆ ಗ್ರಾಮೀಣ ಪ್ರದೇಶದಲ್ಲಿರುವ ಹಳ್ಳಿಗಾಡಿನ ಕೆಲಸಗಳನ್ನು ತುರ್ತಾಗಿ ಮಾಡುವಂತೆ ತಿಳಿ ಹೇಳಿದ ಲೋಕಾಯುಕ್ತ ಡಿ ವೈ ಎಸ್ ಪಿ ಬೇಸಿಗೆ ಹೆಚ್ಚಿರುವುದರಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.


ಒಟ್ಟಾರೆಯಾಗಿ ಹಿಂದಿನ ಸಭೆಯಲ್ಲಿ 24 ಅರ್ಜುಗಳು ಬಂದಿದ್ದು ಅವುಗಳಲ್ಲಿ 21ವಿಲೇವಾರಿ ಮಾಡಲಾಗಿದೆ ಇನ್ನು ಮೂರು ಅರ್ಜಿಗಳು ತನಿಕಾಹಂತದಲ್ಲಿದ್ದು ದೂರು ನೀಡಿದ ಅರ್ಜಿಗಳು ಯಾವುದಾದರೂ ಬಾಕಿ ಉಳಿದಿದ್ದರೆ ತಿಳಿಸಿ ಎಂದು ಸಾರ್ವಜನಿಕರನ್ನು ಕೇಳಿದರು ಮತ್ತು ಈ ದಿನ ಬಂದ ಅರ್ಜಿಗಳು 20 ಆಗಿದ್ದು ಅದರಲ್ಲಿ ಒನ್ ಪ್ಲಸ್ ಒನ್ ಟು ಆಕ್ಟ್ನಲ್ಲಿ ನೇರವಾಗಿ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ ಇನ್ನುಳಿದ 19 ಅರ್ಜಿಗಳನ್ನು ನಮ್ಮ ಹಂತದಲ್ಲಿಯೇ ಇತ್ಯರ್ಥ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ದೂರು ನೀಡಿದ ಪಟ್ಟಣದ ಪುರಸಭೆ ವ್ಯಾಪ್ತಿಯ ಎರಡನೇ ವಾರ್ಡಿನಲ್ಲಿರುವ ಮಂಜುನಾಥ್ ಎಂಬುವರು ಸರ್ಕಾರಿ ಕರಾಬ್ ಭೂಮಿಯಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ಮತ್ತು ಲಾಡ್ಜನ್ನು ನಿರ್ಮಿಸಿಕೊಂಡು ಅಕ್ರಮವಾಗಿ ಅನೈತಿಕ ಚಟುವಟಿಕೆಯ ಕೇಂದ್ರವಾಗಿದ್ದು ಈ ಬಗ್ಗೆ ಈಗಾಗಲೇ ಮೈಸೂರ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ಮಾಡಿ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ ಅಲ್ಲಿ ದಿನನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ವಾರ್ಡಿನ ನಾಗರಿಕರಿಗೆ
ಬಹಳ ತೊಂದರೆಯಾಗುತ್ತಿದೆ ಎಂದು ದೂರು ನೀಡಿದರು.
ಹೆಬ್ಬಾಳಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಲೇಂದ್ರ ದೂರು ನೀಡಿ ಹೆಬ್ಬಾಳ್ ಚಂದ್ರ ಚಂದಗಾಲ್ ಸೇರಿದಂತೆ ನಾಲ್ಕೈದು ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿ ಯಾವುದೇ ಯೋಜನಾಧಿಕಾರಿಂದ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ ಅದಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮತ್ತು ಇನ್ನಿತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರು.
ಚಂದಗಾಲ್ ಸತೀಶ್ ದೂರು ನೀಡಿ ಚಂದಗಾಲ್ ಗ್ರಾಮ ಪಂಚಾಯಿತಿಯಲ್ಲಿ ಜಲಜೀವನ್ ಸೇರಿದಂತೆ ನರೇಗಾ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳಲ್ಲಿ ಅಕ್ರಮವಾಗಿ ಬಿಲ್ ಮಾಡಲಾಗಿದೆ ಎಂದು ದೂರು ನೀಡಿದರು.


ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪುರಸಭೆಯಲ್ಲಿ ರಸ್ತೆ
ನಿವೇಶನ ಕಂದಾಯ ಇಲಾಖೆಯಲ್ಲಿ ತತ್ಕಾಲ್ ಪೋಡು ಸೇರಿದಂತೆ ಇನ್ನಿತರ ದೂರುಗಳ ನೀಡುವ ಜೊತೆಗೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲ ಅಧಿಕಾರಿಗಳ ಇಲಾಖಾ ವಾಹನ ಬಸ್ ನಿಲ್ದಾಣದಲ್ಲಿ ಕಾಯುತ್ತಿರುತ್ತವೆ ಎಂದು ದೂರುಗಳ ಸುರಿಮಳೆಯನ್ನೇ ನೀಡಿದರು.
ಎಲ್ಲಾ ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತರು ಅಧಿಕಾರಿಗಳಿಗೆ ಕಿವಿಮಾತು ಹೇಳುವ ಮೂಲಕ ಮುಂದೆ ಸಭೆ ನಡೆಯುವ ವೇಳೆಗೆ ಎಲ್ಲವನ್ನು ಸರಿಪಡಿಸಿಕೊಳ್ಳಿ ಎಂದು ತಿಳಿ ಹೇಳಿದರು. ಈ ಸಭೆಯಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ವೆಂಕಟೇಶ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ತಹಸಿಲ್ದಾರ್ ಸುರೇಂದ್ರ ಮೂರ್ತಿ ಲೋಕಾಯುಕ್ತ ಸಿಬ್ಬಂದಿಗಳಾದ ಲೋಕೇಶ್ ರಾಜೆ ಅರಸ್. ಮೋಹನ್ ಕುಮಾರ್. ಪ್ರದೀಪ್. ಕೆಂಪರಾಜ್. ದಿನೇಶ್ ಹಾಗೂ ಬಿಇಓ ಆರ್ ಕೃಷ್ಣಪ್ಪ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆರೋಗ್ಯ ಇಲಾಖೆ ಆಡಳಿತ ಅಧಿಕಾರಿ ನಟರಾಜ್ ಅರಣ್ಯ ಇಲಾಖೆಯ ವಲಯ ಅಧಿಕಾರಿ ಹರಿಪ್ರಸಾದ್ ಪಿಎಸ್ಐ ಸ್ವಾಮಿಗೌಡ ಎ ಇ ಇ ಗಳಾದ ಸುಮಿತ. ಅಯಾಜ್ ಪಾಷಾ ಅರ್ಕೇಶ್ವರ ಸೇರದಂತೆ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Contact us for classifieds and ads : +91 9742974234