Latest News

ನೂತನವಾಗಿ ಹಾಪ್ ಕಾಮ್ಸ್ ನಿರ್ದೇಶಕರಾಗಿ ಆಯ್ಕೆಯಾದ ಸಂಜಯ್ ಅವರನ್ನು ಒಕ್ಕಲಿಗ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರಿಂದ ಸನ್ಮಾನ.

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 10:- ಪ್ರತಿಯೊಂದು ಕ್ಷೇತ್ರಕ್ಕೂ ಆಯಾಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆ ಮಾಡಿದ್ದಾರೆ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಅಂತಹ ಕೆಲಸವನ್ನು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ತೋಟಗಾರಿಕೆಯ ಮತದಾರರು ಸಂಜಯ್ ಅವರನ್ನು ಆಯ್ಕೆ ಮಾಡುವ ಮೂಲಕ ಒಳ್ಳೆ ಆಯ್ಕೆ ಎಂಬುದನ್ನು ತೋರಿಸಿದ್ದಾರೆ ಎಂದು ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಹೇಳಿದರು.

ಪಟ್ಟಣದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ನೂತನವಾಗಿ ಹಾಪ್ ಕಾಮ್ಸ್ ನಿರ್ದೇಶಕರಾಗಿ ಆಯ್ಕೆಯಾದ ಸಂಜಯ್ ವರನ್ನು ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ಒಬ್ಬ ತೋಟಗಾರಿಕೆಯ ಪ್ರಗತಿ. ಪರ ರೈತ ವೆಂಕಟೇಶ್ ಅವರ ಪುತ್ರ ಸಂಜಯ್ ಅವರು ಸಹ ಒಬ್ಬ ಪ್ರಗತಿಪರ ತೋಟಗಾರಿಕೆ ರೈತ ಎಂದು ತಿಳಿಸಿದರು.

ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ತೋಟಗಾರಿಕೆಯ ವತಿಯಿಂದ ಸಿಗುವ ಸೌಲತ್ತುಗಳನ್ನು ಅರ್ಹತೋಟಗಾರಿಕಾ ರೈತರಿಗೆ ತಲುಪಿಸುವ ಜವಾಬ್ದಾರಿ ನಿಮ್ಮದಾಗಿದ್ದು ಚುನಾವಣೆಯಲ್ಲಿ ಗೆಲ್ಲುವ ತನಕ ಪರ ವಿರೋಧವಿರುತ್ತದೆ ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಕ್ಷೇತ್ರದಲ್ಲಿ ತೆಂಗು ಅಡಿಕೆ ಬಾಳೆ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದು ಈ ಬೆಳೆಗಳ ಜೊತೆಗೆ ಇನ್ನೂ ಹಲವಾರು ಬೆಳೆಗಳನ್ನು ಬೆಳೆಯುವ ರೈತರ ಹಿತ ಕಾಪಾಡುವ ಜೊತೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿಸಿ ನಂತರ ಮಾರುಕಟ್ಟೆಗೆ ಬೆಳೆಗಳನ್ನು ಬಿಟ್ಟ ನಂತರ ರೈತರನ್ನು ಕಚೇರಿಗೆ ಅಲಿಸದೆ 15 ದಿನಗಳ ಒಳಗಾಗಿ ಅವರ ಹಣವನ್ನು ಕೊಡಿಸುವ ಜವಾಬ್ದಾರಿಯು ನಿಮ್ಮದಾಗಿದೆ ಅದರ ಜೊತೆಗೆ ಕ್ಷೇತ್ರದಲ್ಲಿರುವ ಎಲ್ಲಾ ತೋಟಗಾರಿಕಾ ರೈತರನ್ನು ಸದಸ್ಯರನ್ನು ಮಾಡುವ ಮೂಲಕ ತಾವು ಒಬ್ಬ ತೋಟಗಾರಿಕಾ ರೈತ ಎಂಬುದನ್ನು ಸಾಬೀತು ಪಡಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದು ತಿಳಿಸಿದರು.

ಅನಿರೀಕ್ಷಿತವಾಗಿ ಚುನಾವಣೆಗೆ ನಿಂತು ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ಪಡೆದು ಆಯ್ಕೆಯಾಗಿರುವ ನೀವು ಜವಾಬ್ದಾರಿ ಹೆಚ್ಚಿದ್ದು ಆ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿಮ್ಮ ಜೊತೆ ಸದಾ ನಾವು ಮತ್ತು ನಮ್ಮ ಸಂಘ ಇರುತ್ತದೆ ಎಂದು ತಿಳಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಸಂಜಯ್ ಮಾತನಾಡಿ ಪ್ರಪ್ರಥಮ ಬಾರಿಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ನನಗೆ ಕ್ಷೇತ್ರದ ವ್ಯಾಪ್ತಿ ಅಲ್ಲದೆ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿಯೂ ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ನನ್ನನ್ನು ಆಯ್ಕೆ ಮಾಡುವ ಜೊತೆಗೆ ಅಭಿನಂದಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದ್ದರೂ ಈ ಗೆಲುವಿಗೆ ಕಾರಣರಾದ ಮತ್ತು ಸನ್ಮಾನಿಸುತ್ತಿರುವ ನಿಮ್ಮೆಲ್ಲರ ಅನಿಸಿಕೆಯಂತೆ ಕೆಲಸ ಮಾಡುವ ಜೊತೆಗೆ ನಿಮ್ಮ ಈ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ರಾಧಾಕೃಷ್ಣ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಮಿರ್ಲೆ ಧನಂಜಯ ಲಕ್ಕಿ ಕುಪ್ಪೆ ಶಂಕರೇಗೌಡ ಗುಳುವಿನ ಅತ್ಕುಪ್ಪೆ ಅನಿಫ್ ಕುಮಾರ್ ಹೊಂಬೆಗೌಡ ಜೀವನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 

Contact us for classifieds and ads : +91 9742974234