Latest News

ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*

ಬೆಂಗಳೂರಿನ ನೆಲಮಂಗಲ ಬಳಿ ಡಿವೈಡರ್ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಜಂಪ್ ಮಾಡಿ ಗುದ್ದಿದ ಕಾರು : ವಿದ್ಯಾರ್ಥಿ ಸೇರಿ ಐವರು ಮೃ*ಪಟ್ಟರು

ಬೆಂಗಳೂರು, ಫೆಬ್ರವರಿ 15:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹತ್ತಿರದ ಮಾದನಾಯಕನ ಹಳ್ಳಿಯ ಸಮಿಪ ಬೆಳಗಿನ ಜಾವ  ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ  ಯುವಕರು ದು * ರ್ಮರಣ ಹೊಂದಿರುವ ಘಟನೆ ಅಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಹಾರಿ ಎದುರು ದಿಕ್ಕಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃ*ಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾ* ನ್ನಪ್ಪಿದ್ದಾರೆ

ಅಪಘಾತ ಆದಾ ಜಿಂದಾಲ್ ಪಕ್ಕದಲ್ಲಿರುವ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ನೆಲಮಂಗಲ ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ಅದ್ದರಿಂದ ವಾಹನಗಳ ಸಂಚಾರ ಕಡಿಮೆ ಇದ್ದರೂ, ಕಾರು ಅತಿಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿದ್ದಿರಬಹುದು ಎಂಬ ಪ್ರಾಥಮಿಕ ಅನುಮಾನ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ:- ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ಕುಟುಂಬ ನೀಡಿದ ಮಾಂಗಲ್ಯವನ್ನೇ ನನ್ನ ಮಗನ ಹೆಂಡತಿಯ ಕೊರಳಿನಲ್ಲಿದೆ: ಎಚ್ ವಿಶ್ವನಾಥ್

ಅಫಘಾತದಲ್ಲಿ ಮೃ* ಪಟ್ಟವರಲ್ಲಿ ದೊಡ್ಡಬಳ್ಳಾಪುರ ಮೂಲದ ಹರ್ಷಿತ್ ಮತ್ತು ನಿಖಿತ್ ಸೇರಿದ್ದಾರೆ ಎಂಬ ವಿವರ ಲಭ್ಯವಾಗಿದ್ದು, ಇನ್ನಿತರ  ಮೂರು ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃ* ಹರ್ಷಿತ್ ರಾಜನಕುಂಟೆಯ ಸಾಯಿ ವಿದ್ಯಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅವನು ಅಪಘಾತದ ದಿನ ಸಂಜೆವರೆಗೂ ಮನೆಯಲ್ಲೇ ಇದ್ದು, ಸ್ನೇಹಿತನನ್ನು ಭೇಟಿ ಮಾಡಿ ಬರುತ್ತೇನೆ ಎಂದು ಹೇಳಿ ಹೊರಟಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ.

ಮಾದನಾಯ್ಕನ ಹಳ್ಳಿ ಪೊಲೀಸರ ಪ್ರಕಾರ, ಇಂಡಿಕಾ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ತುಮಕೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ಹೆದ್ದಾರಿಯ ಮಧ್ಯದ ಡಿವೈಡರ್ ಹಾರಿ ಎದುರುಗಡೆಯ ಲೇನ್ಗೆ ನುಗ್ಗಿ, ಬೆಂಗಳೂರಿನಿಂದ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಅಷ್ಟರ ಮಟ್ಟಿಗೆ ಇದ್ದುದರಿಂದ ಇಂಡಿಕಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕೆ.ಎಸ್ . ಆರ್ .ಟಿ.ಸಿ. ಬಸ್ನ ಮುಂಭಾಗಕ್ಕೂ ತುಂಬಾ  ಹಾನಿಯಾಗಿದೆ.

ಅಫಘಾತ ನಡೆದ ಈ ಘಟನೆಯ ಬಳಿಕ ಅಲ್ಲಿನ ಸ್ಥಳೀಯ ಸಾರ್ವಜನಿಕರು ಮತ್ತು ಇತರ ವಾಹನ ಸವಾರರು ಅಫಘಾತ ಸಂಭವಿಸಿದ ತಕ್ಷಣ ಸಹಾಯಕ್ಕೆ ಬಂದರು. ಅಫಘಾತವಾದ ಸ್ಥಳದಲ್ಲಿ  ಗಾಯಾಳುಗಳನ್ನು ಹೊರಗಡೆ ತೆಗೆದು ಆಂಬುಲೆನ್ಸ್ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ನಾಲ್ಕು ಜನ ಅಫಘಾತವಾದ  ಸ್ಥಳದಲ್ಲೇ ಮೃ*ಪಟ್ಟಿದ್ದರೆ, ಇಂಡಿಕಾ ಕಾರು ಹಾಗೂ ಕಾರು ಚಾಲಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತಕ್ಷಣ ಚಿಕಿತ್ಸೆ ನೀಡಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನೆಲಮಂಗಲ ಬಳಿ ಅಪಘಾತದ ಸುದ್ದಿ ತಿಳಿದ ತಕ್ಷಣ ಗಾಯಾಳುಗಳನ್ನು ಸೇರಿಸಿದ  ಆಸ್ಪತ್ರೆ ಮುಂದೆ ಜಮಾಯಿಸಿದ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದ ವಾತಾವರಣ ನೋಡಿ ಕರಳು ಕಿವಚುವ ಹಾಗಿತ್ತು . ಸಾ* ಗಿಡಾದ ಹರ್ಷಿತ್ ತಾಯಿ ತನ್ನಮಗನ ಮೃತದೇಹ ತಬ್ಬಿಕೊಂಡು ಗೋಳಾಡಿದ ದೃಶ್ಯಗಳು ಅಲ್ಲಿದ್ದ ಸಾರ್ವಜನಿಕರ ಕಣ್ಣೀರನ್ನು ತರಿಸಿದವು. ಕುಟುಂಬಸ್ಥರು “ಒಂದು ಕ್ಷಣದಲ್ಲಿ ನಮ್ಮ ಬದುಕೇ ಮುಗಿದೆ ಹೋಯಿತು ” ಎಂದು ದುಃಖ ವ್ಯಕ್ತಪಡಿಸಿದರು. ಹರ್ಷಿತನ ಸ್ನೇಹಿತರು ಮತ್ತು ಕಾಲೇಜಿನ ಸಹಪಾಠಿಗಳು ಕೂಡ ಆಸ್ಪತ್ರೆಗೆ ಬಂದು ದುಖಃ ವ್ಯಕ್ತಪಡಿಸಿದರು.

ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಕೈಗೊಂಡಿದ್ದು, ವಾಹನದ ವೇಗ, ರಸ್ತೆ ಪರಿಸ್ಥಿತಿ ಹಾಗೂ ಚಾಲಕರ ನಿರ್ಲಕ್ಷ್ಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ ಸರಣಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದು ತುಂಬಾ ಆಘಾತಕಾರಿ ವಿಷಯವಾಗಿದೆ. ಕಳೆದ ಶುಕ್ರವಾರ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಕ್ಯಾಂಟರ್ ವಾಹನ, ಬೈಕ್ ಮತ್ತು ಎಸ್ಯುವಿ ಕಾರಿನ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃ* ಪಟ್ಟಿದ್ದರು. ಆ ದುರ್ಘಟನೆಯ ನೋವು ಇನ್ನೂ ಮಾಸದಿರುವಾಗಲೇ ಮತ್ತೊಂದು ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ:- ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜಿಕರು ವಾಹನ ಚಲಾಯಿಸುವಾಗ ಜಾಗೃತಿ ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅತಿ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವುದು, ರಾತ್ರಿ ಸಮಯದ ಚಾಲಕರ ದಣಿವು, ವಾಹನ ಸುರಕ್ಷತಾ ನಿಯಮ ಪಾಲನೆಗೆ ನಿರ್ಲಕ್ಷ್ಯ ಇವು ವಾಹನ  ಅಪಘಾತಗಳಿಗೆ ಕಾರಣವಾಗುತ್ತಿರುವ ಅತಿ ಪ್ರಮುಖ ಅಂಶಗಳಾಗಿವೆ. ರಾಷ್ಟ್ರೀಯ ಹಾಗೂ ರಾಜ್ಯ  ಹೆದ್ದಾರಿಗಳಲ್ಲಿ ನಿಯಮಿತವಾಗಿ ಪೆಟ್ರೋಲಿಂಗ್ ಹೆಚ್ಚಿಸುವುದು, ಅತಿವೇಗ ವಾಹನ ಚಾಲನೆ  ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಅಫಘಾತ ನಡೆದ ಘಟನೆ ಮತ್ತೆ ಒಂದು ಬಾರಿ ರಸ್ತೆ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ವಾಹನ ಚಾಲನೆ ಮಾಡುವಾಗ ಒಂದು  ನಿಮಿಷದ ಅಜಾಗರೂಕತೆ  ತಮ್ಮ ಕುಟುಂಬಗಳ ಬದುಕನ್ನೇ ಸರ್ವಾನಾಶಗೊಳಿಸುವುದನ್ನು ನೆಲಮಂಗಲದ ಈ ಅಫಘಾತದ ದುರ್ಘಟನೆ ತಿಳಿಸಿಕೋಡುತ್ತದೆ . ಮೃ* ರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸ್ಥಳೀಯರು ಹಾಗೂ ಅಧಿಕಾರಿಗಳು, ಇಂತಹ ಅವಘಡಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

15-02-2026 ರ ದಿನ ಭವಿಷ್ಯ

Contact us for classifieds and ads : +91 9742974234