
ಕುಟುಂಬ ರಾಜಕಾರಣ ಆರೋಪ: ಶಾಸಕ ಡಿ.ರವಿಶಂಕರ್ ವಿರುದ್ಧ ಅಮಿತ್ ದೇವರಹಟ್ಟಿ ಟೀಕೆ
ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್. ನಗರ. ಫೆ. 23:- ಚುನಾವಣೆ ಕಳೆದು ಮೂರು ವರ್ಷವಾದರು ತನ್ನ ತಂದೆಯನ್ನು ಎಂ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅಧಿಕಾರವನ್ನು ತಮ್ಮ ಕುಟುಂಬದಲ್ಲಿಯೇ ಇಟ್ಟುಕೊಳ್ಳುವ ಮೂಲಕ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ದ್ರೋಹವೆಸಗಿದ್ದಾರೆ ಎಂದು ಶಾಸಕ ಡಿ ರವಿಶಂಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್ ವಿಶ್ವನಾಥ್ ರವರ ಪುತ್ರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಮಿತ್ ವಿ ದೇವರಹಟ್ಟಿ ವಾಗ್ದಳಿ ನಡೆಸಿದರು.

ಪಟ್ಟಣದ ರೇಡಿಯೋ ಮೈದಾನದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರ ಧುರೀಣ 15 ವರ್ಷ ಎಂ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾಗಿದ್ದ ನಮ್ಮ ಸಂಬಂಧಿ ಸಿದ್ದೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಶೂನ್ಯ ಮತವನ್ನು ಪಡೆಯುವ ಮೂಲಕ ಅವಮಾನ ವಾಗುವಂತೆ ನೋಡಿಕೊಂಡಿದ್ದೆ ಡಿ ರವಿಶಂಕರ್ ಅವರ ಸಾಧನೆ ಎಂದು ತಿಳಿಸಿದರು.
ಪಾಪದ ಕೊಡ ತುಂಬಾ ತುಂಬಿದಾಗ ಎಂಥ ವ್ಯಕ್ತಿಯು ಸೋಲಬೇಕಾಗಿದೆ ಆ ಕೆಲಸ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಗ್ರಾಮಗಳಿಂದಲೇ ಪ್ರಾರಂಭವಾಗಲಿದ್ದು ಇದು ಇಲ್ಲಿಂದ ಮಂಡ್ಯ ಮೈಸೂರು ವ್ಯಾಪ್ತಿಯಲ್ಲಿಯೂ ನಡೆಯುತ್ತದೆ ಈಗಾಗಲೇ ಕುರುಬ ಸಮುದಾಯದ ಗ್ರಾಮಗಳಲ್ಲಿ ಗುಂಪು ಗುಂಪಾಗಿ ಜೆಡಿಎಸ್ ಪಕ್ಷವನ್ನು ಸೇರಲು ನಾ ಮುಂದು ನೀ ಮುಂದು ಎಂದು ನಿಂತಿದ್ದಾರೆ ಎಂದು ತಿಳಿಸಿದರು.
ಕೆ.ಆರ್.ನಗರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ: ರವಿಶಂಕರ್ ವಿರುದ್ಧ ಅಮಿತ್ ಟೀಕೆ
ಇದನ್ನೂ ಓದಿ:- ಕಾಂಗ್ರೆಸ್ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸವಾಲ್: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಸೂರ್ಯ ಚಂದ್ರ ಉಗಮವೆಷ್ಟು ಸತ್ಯವೋ ಅಷ್ಟೇ ಸತ್ಯ ಹಾಗೂ ರಾಜ್ಯದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಣ್ಣ ಮುಖ್ಯಮಂತ್ರಿ ಆಗಲಿದ್ದು ಅವರ ಸಂಪುಟದಲ್ಲಿ ಸಾರಾ ಮಹೇಶ್ ಅಣ್ಣನವರು ಸಚಿವರಾಗಲಿದ್ದು ಆಗ ಈ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕೊನೆಯಾಗಲಿದೆ ಎಂದು ತಿಳಿಸಿದರು.
ಕೆ.ಆರ್.ನಗರದ ಮೂಳೆ ತಜ್ಞ ಡಾ. ಮೆಹಬೂಬ್ ಖಾನ್ ಮಾತನಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಸಾಮರಸ್ಯ ರಾಜಕಾರಣ ಮಾಡಿದ ಮಾಜಿ ಸಚಿವ ದಿವಂಗತ ಎಸ್ ನಂಜಪ್ಪ ಮತ್ತು ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ನಂತರ ಮಾಜಿ ಸಚಿವ ಸಾರಾ ಮಹೇಶ್ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ನಾಯಕರೇ ವಿನಹ ಈಗಿನ ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ದೊಡ್ಡ ಸ್ವಾಮಿ ಗೌಡರಿಂದ ಅಭಿವೃದ್ಧಿಯಲ್ಲ ಜನಸಾಮಾನ್ಯರ ಸಮಸ್ಯೆಯನ್ನು ಕೇಳುವ ಪ್ರವೃತ್ತಿಯನ್ನು ಹೊಂದಿಲ್ಲ ಎಂದು ಟೀಕಿಸಿದರು.

ಪಕ್ಷಕ್ಕೆ ಕರೆತಂದು ತಮ್ಮ ಸ್ಥಾನವನ್ನು ತ್ಯಾಗ ಮಾಡಿದ ಎಚ್ ವಿಶ್ವನಾಥ್ ಅವರಿಗೆ ದ್ರೋಹ ಮಾಡಿದ ಅಪ್ಪ ಮಗನಿಗೆ ತಕ್ಕ ಪಾಠ ಕಲಿಸಲು ಕಾಲ ಶನಿದ್ದವಾಗಿದೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ದ್ವೇಷ ಅಸೂಯೆ ರಾಜಕಾರಣ ಮಾಡುತ್ತಿರುವ ಇವರಿಗೆ ಕ್ಷೇತ್ರದ ಎಲ್ಲಾ ಸಮುದಾಯದ ಮತದಾರರು ಪಾಠ ಕಲಿಸಲು ಸಮಯ ಕಾಯುತ್ತಿದ್ದಾರೆ ಅಧಿಕಾರ ಇರಲಿ ಇಲ್ಲದಿರಲಿ ತಮ್ಮಲ್ಲಿಗೆ ಬರುವ ಯಾವುದೇ ಜನತೆಯನ್ನು ಬರಿ ಕೈಯಲ್ಲಿ ಕಳಿಸದೇ ತಮ್ಮಲ್ಲಿರುವ ಸ್ವಂತ ಹಣವನ್ನು ಸಹಾಯ ಮಾಡುವ ಈ ಕ್ಷೇತ್ರದ ಬಡವರ ಬಂಧು ಜನರ ಆಶಾಕಿರಣ ಸಾರಾ ಮಹೇಶ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡುತ್ತೇವೆ ಎಂದು ತಿಳಿಸಿದರು.
ಅದ್ದೂರಿ ಮೆರವಣಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ಆಗಮನ: ಕೆ.ಆರ್.ನಗರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ ಎನ್ ಬಸಂತ್ ಮಾತನಾಡಿ ಈ ಕ್ಷೇತ್ರದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ನೆನೆದು ಕಣ್ಣೀರು ಹಾಕುತ್ತಿದ್ದು ಅದನ್ನು ಮರೆಯಲು ಸಾರಾ ಮಹೇಶ್ ಅವರ ಋಣ ತೀರಿಸಲು ತುದಿಗಾಲಲ್ಲಿ ನಿಂತಿದ್ದು ಅದಕ್ಕೆ ಪೂರಕವಾಗಿ ತಂದೆ ಕೇಂದ್ರ ರಾಜಕಾರಣದಲ್ಲಿ ಇರುವುದರಿಂದ ಅವರ ಸಂಘಟನಾ ಹೊರೆಯನ್ನು ನಾನೇ ಹೊರುವೆನೆಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯ ಹೊಂದಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಸಾ ರಾ ಮಹೇಶ್ ಅವರ ನೇತೃತ್ವದಲ್ಲಿ ಪಕ್ಷವನ್ನು ಕಟ್ಟೋಣ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾಜಿ ಸಚಿವ ಸಾರಾ ಮಹೇಶ್ ಹುಣಸೂರಿನ ಶಾಸಕ ಜಿಡಿ ಹರೀಶ್ ಗೌಡ ಪಿರಿಯಾಪಟ್ಟಣ ಮಾಜಿ ಶಾಸಕ ಮಹದೇವ್ ಜಿಲ್ಲಾ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಕುಮಾರ್ ಜಿಲ್ಲಾ ನಗರ ಅಧ್ಯಕ್ಷ ಎಸ್ಬಿಎಂ ಮಂಜು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎ ಎಸ್ ಚನ್ನಬಸಪ್ಪ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅಚ್ಯುತಾನಂದ ಸಿ ಜೆ ದ್ವಾರಕಿ ಎಂ ಟಿ ಕುಮಾರ್ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ದಲಿತ ಮುಖಂಡ ಹನಸೋಗೆ ನಾಗರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಮೂರು ಚುನಾವಣೆಯಲ್ಲಿ ಸೋಲಲು ಕುರುಕ್ಷೇತ್ರ ಯುದ್ಧದಲ್ಲಿ ಕೌರವರೆಲ್ಲರೂ ಸೇರಿ ಕುತಂತ್ರದಿಂದ ಸೋಲಿಸಿದಂತೆ ರಾಜ್ಯದ ಮಹಾನ್ ನಾಯಕರೆಲ್ಲರೂ ಒಟ್ಟಾರೆ ಸೇರಿ ಕುತಂತ್ರದಿಂದ ಸೋಲಿಸಿದ್ದರೆ ವಿನಃ ನಿಖಿಲ್ ಕುಮಾರಸ್ವಾಮಿ ಅವರನ್ನು ಜನ ಸೋಲಿಸಿರಲಿಲ್ಲ ಆದರೆ ಈ ಬಾರಿ ಕಲಿಯುಗದ ಅಭಿಮನ್ಯುವಾಗಿ ಈ ಎಲ್ಲಾ ಕುತಂತ್ರಗಳನ್ನು ಭೇದಿಸಲು ತಂತ್ರಗಾರಿಕೆಯ ಮೂಲಕ ಜನರಿಂದ ನೇರವಾಗಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಅತಿ ಹೆಚ್ಚು ಮತಗಳ ಅಂತರದಿಂದ ಎದ್ದು ದಾಖಲೆ ನಿರ್ಮಿಸುವಂತೆ ನಿಖಿಲ್ ಕುಮಾರಸ್ವಾಮಿಯವರಿಗೆ. ಅಮಿತ್ ವಿ ದೇವರಟ್ಟಿ ಕರೆ ನೀಡಿದರು “.
ಇದನ್ನೂ ಓದಿ:- ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್


