ಒಕ್ಕಲಿಗ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಮಿರ್ಲೆ ಶ್ರೀನಿವಾಸ್ ಗೌಡ ಉಪಾಧ್ಯಕ್ಷರಾಗಿ ವಡ್ಡರಕೊಪ್ಪಲು ಶಿವರಾಮು ಅವಿರೋಧ ಆಯ್ಕೆಅವಿರೋಧ ಆಯ್ಕೆ

ಕೆಆರ್ ನಗರದಲ್ಲಿ ಒಕ್ಕಲಿಗ ಕ್ರೆಡಿಟ್ ಸೊಸೈಟಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಮಾ.14:- ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಎರಡನೇ ಬಾರಿ ಅಧ್ಯಕ್ಷರಾಗಿ ಮಿರ್ಲೆ ಶ್ರೀನಿವಾಸ್ ಗೌಡ ಉಪಾಧ್ಯಕ್ಷರಾಗಿ ವಡ್ಡರಕೊಪ್ಪಲು ಶಿವರಾಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಹಕಾರ ಇಲಾಖೆಯ ಸವಿತಾ ಕೆ ಎಲ್ ತಿಳಿಸಿದ್ದಾರೆ.
ಪಟ್ಟಣದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿಯಲ್ಲಿ 2026 ರಿಂದ 2031ರವರೆಗೆ ಐದು ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಿರ್ಲೆ ಶ್ರೀನಿವಾಸ ಗೌಡ ಉಪಾಧ್ಯಕ್ಷ ಸ್ಥಾನಕ್ಕೆ ವಡ್ಡರ ಕೊಪ್ಪಲು ಶಿವರಾಮು ನಾಮಪತ್ರ ಸಲ್ಲಿಸಿದರೆ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಮಿರ್ಲೆ ಶ್ರೀನಿವಾಸಗೌಡ ಉಪಾಧ್ಯಕ್ಷರಾಗಿ ವಡ್ಡರಕೊಪ್ಪಲು ಶಿವರಾಮು ನಿರ್ದೇಶಕರಾಗಿ ಸಿ ಎನ್ ಉದಯಕುಮಾರ್ ಮಿರ್ಲೆ ಧನಂಜಯ ಚಂದಗಾಲ್ ಸುದೀಶಿ ಕುಮಾರ್ ಹೆಬ್ಬಾಳ್ ರಾಜು ಅಂಕನಹಳ್ಳಿ ತಿಮ್ಮಪ್ಪ ಅನಿಫ್ ಕುಮಾರ್ ಹೊಸಹಳ್ಳಿ ಪ್ರಕಾಶ್ ಶಿಲ್ಪ ಅರುಣ್ ಕುಮಾರ್ ಚಂದ್ರಕಲಾ ಶಂಕರೇಗೌಡ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಮಿರ್ಲೆ ಶ್ರೀನಿವಾಸ್ ಗೌಡ ಮಾತನಾಡಿ ನನ್ನ ಮತ್ತು ಉಪಾಧ್ಯಕ್ಷರನ್ನು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಚುನಾವಣೆಗೆ ಸಹಾಯ ಮಾಡಿದ ಎಲ್ಲಾ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತಾ ಹಿಂದೆ ನೀಡಿದ ಸಲಹೆ ಸಹಕಾರವನ್ನು ಮುಂದೆಯೂ ನೀಡುವಂತೆ ಮನವಿ ಮಾಡಿದ್ದಾರೆ.

ಐದು ವರ್ಷಗಳ ಹಿಂದೆ ನಮ್ಮ ಆಡಳಿತ ಮಂಡಳಿಯ ನಿರ್ದೇಶಕರನ್ನು ನಂಬಿ ಸೇರು ನೀಡಿದ ಎಲ್ಲಾ ಸೇರುದಾರರಿಗೂ ಅಭಿನಂದನೆ ಸಲ್ಲಿಸುತ್ತಾ ಅಂದು ಹನ್ನೆರಡು ಲಕ್ಷ ಸೇರು ಬಂಡವಾಳದಲ್ಲಿ ಪ್ರಾರಂಭವಾದ ಈ ಸಹಕಾರ ಸಂಘ ಇಂದು 70 ಲಕ್ಷಕ್ಕೂ ಹೆಚ್ಚು ಬಂಡವಾಳವನ್ನು ಹೊಂದಿರುವುದು ಹಾಗೂ ಐದು ವರ್ಷದ ಅವಧಿಯಲ್ಲಿ ಮೂರು ಕೋಟಿಗೂ ಹೆಚ್ಚು ವ್ಯವಹಾರ ಮಾಡಿರುವುದು ನಮ್ಮ ಆಡಳಿತ ಮಂಡಳಿಯ ಸಾಧನೆಯಾಗಿದ್ದು ನಮ್ಮ ಆಡಳಿತ ಮಂಡಳಿಯು ಯಾವುದೇ ಕಾರ್ಯಕ್ರಮ ಮತ್ತು ವಾರ್ಷಿಕ ಮಹಾಸಭೆ ಸೇರಿದಂತೆ ಇನ್ಯಾವುದೇ ಕಾರ್ಯಕ್ರಮಕ್ಕೂ ಸಂಘದಿಂದ ಒಂದೇ ಒಂದು ರೂಪಾಯಿ ಹಣವನ್ನು ವೆಚ್ಚ ಮಾಡಿಲ್ಲ ಎಂದು ತಿಳಿಸಿದರು.

ಮುಂದಿನ ಐದು ವರ್ಷದ ಅವಧಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಮೂಲ ಬಂಡವಾಳವನ್ನು ಮಾಡಿ ಸುಮಾರು 6 ರಿಂದ 7 ಕೋಟಿ ವ್ಯವಹಾರವನ್ನು ಮಾಡುವ ಗುರಿ ಹೊಂದಲಾಗಿದೆ ಅದಕ್ಕೆ ನನ್ನೆಲ್ಲಾ ಆಡಳಿತ ಮಂಡಳಿಯ ಸದಸ್ಯರು ಸಂಘದ ಸಿಬ್ಬಂದಿ ವರ್ಗದವರು ಸಹಕಾರ ನೀಡುವಂತೆ ಮನವಿ ಮಾಡಿದರು.
ಚುನಾವಣಾ ಸಮಯದಲ್ಲಿ ಚುನಾವಣಾಧಿಕಾರಿ ಸವಿತಾ ಕಾರ್ಯನಿರ್ವಹಣಾಧಿಕಾರಿ ಜೀವನ್ ಕಚೇರಿ ಸಿಬ್ಬಂದಿಗಳಾದ ಸಹನ ಹೇಮಂತ್ ಇದ್ದರು.


