Latest News

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಸುಪಾರಿ ಕೊಟ್ಟು ಫಿನಿಷ್  : ಪತ್ನಿ ಪ್ರಿಯತಮ ಇಬ್ಬರು ಅಂದರ್

ಯಾದಗಿರಿ, ಮಾ.28: ಸುಖವಾಗಿದ್ದ ಕುಟುಂಬ ಜೀವನಕ್ಕೆ ಅಕ್ರಮ ಸಂಬಂಧದ ನೆರಳು ಬೀಳುತ್ತಿದ್ದಂತೆಯೇ, ಕೊನೆಗೆ ಅದೇ ಸಂಬಂಧ ಜೀವವನ್ನೇ ಕಸಿದುಕೊಂಡಿದೆ. ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದ ಈ ಭೀಕರ ಪ್ರಕರಣದಲ್ಲಿ, ಪತ್ನಿಯೇ ತನ್ನ ಪತಿಯ ಕೊ* ಗಾಗಿ ಸುಪಾರಿ ನೀಡಿಸಿದ್ದ ಸಂಗತಿ ಬೆಳಕಿಗೆ ಬಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಮೃತನನ್ನು ಸಾಗರ್ ರಾಠೋಡ್ (35) ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕರಾಗಿ ಕುಟುಂಬವನ್ನು ಸಾಗಿಸುತ್ತಿದ್ದನು. ಅವನ ಪತ್ನಿ ಪೂಜಾ ಹಾಗೂ ಅದೇ ಗ್ರಾಮದ ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿದ್ದುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಅನೇಕ ಬಾರಿ ಗಲಾಟೆಗಳು ನಡೆದಿದ್ದವು. ಪೂಜಾ ಹಲವು ಬಾರಿ ಪ್ರಿಯತಮನೊಂದಿಗೆ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದ್ದು, ಗ್ರಾಮಸ್ಥರು ಪಂಚಾಯಿತಿ ನಡೆಸಿ ಸಮಾಧಾನಪಡಿಸಲು ಯತ್ನಿಸಿದ್ದರೂ ಯಾವುದೇ ಬದಲಾವಣೆ ಕಾಣಿಸಿರಲಿಲ್ಲ.

ಕೊನೆಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿ ಸಾಗರ್‌ನನ್ನೇ ದಾರಿ ಮಧ್ಯೆ ತೆಗೆಯುವ ಸಂಚು ರೂಪಿಸಲಾಗಿದೆ.

ಪ್ರಿಯತಮ ರೆಡ್ಡಿ ರಾಠೋಡ್, ಸಾಗರ್‌ನನ್ನು ಕೊಲ್ಲಲು ಮಹೇಶ್ ಎಂಬಾತನಿಗೆ ಸುಮಾರು ₹1 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ. ಯೋಜನೆಯಂತೆ ಮಾರ್ಚ್ 22ರ ರಾತ್ರಿ ಸಾಗರ್‌ಗೆ “ಬಾಡಿಗೆ ಇದೆ” ಎಂದು ಕರೆ ಮಾಡಿ ಹೊರಗೆ ಕರೆಸಿಕೊಳ್ಳಲಾಗಿದೆ. ತನ್ನದೇ ಆಟೋದಲ್ಲಿ ಸಾಗರ್ ಸ್ಥಳಕ್ಕೆ ಬಂದಿದ್ದಾನೆ.

ನಿರ್ಜನ ಪ್ರದೇಶದಲ್ಲಿ ಭೀಕರ ಹ*

ಲಿಂಗೇರಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಬಳಿಕ, ಆರೋಪಿಗಳು ಸುತ್ತಿಗೆಯಿಂದ ತೀವ್ರವಾಗಿ ಹಲ್ಲೆ ನಡೆಸಿ ಸಾಗರ್‌ನನ್ನು ಕೊ*  ಮಾಡಿದ್ದಾರೆ. ಹಲ್ಲೆಯ ತೀವ್ರತೆಯಿಂದ ಆತ ಸ್ಥಳದಲ್ಲೇ ಮೃ* ಪಟ್ಟಿದ್ದಾನೆ. ಬಳಿಕ, ಘಟನೆಗೆ ಅಪಘಾತದ ಬಣ್ಣ ಹಚ್ಚಲು ಇನ್ನೊಂದು ಕುತಂತ್ರ ರೂಪಿಸಲಾಗಿದೆ.

ಕೊ* ನಂತರ  ಅಪಘಾತದ ನಾಟಕ

ಕೊ*  ನಂತರ ಮೃ* ದೇಹವನ್ನು ಕಾರಿನಲ್ಲಿ ಸಾಗಿಸಿ ಹೊಸಹಳ್ಳಿ ಬಳಿ ತಂದು, ಆಟೋಗೆ ಕಾರಿನಿಂದ ಡಿಕ್ಕಿ ಹೊಡೆಸುವ ಮೂಲಕ “ರಸ್ತೆ ಅಪಘಾತ”ದಂತೆ ದೃಶ್ಯ ಸೃಷ್ಟಿಸಲಾಗಿದೆ. ಈ ಮೂಲಕ ಪೊಲೀಸರ ಗಮನ ತಪ್ಪಿಸಲು ಯತ್ನಿಸಿದರೂ, ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ಸಹಜ ಅಪಘಾತವಲ್ಲ ಎಂಬ ಅನುಮಾನ ಹುಟ್ಟಿದೆ.

ಪೊಲೀಸರು ತಕ್ಷಣವೇ ತಾಂತ್ರಿಕ ಸಾಕ್ಷ್ಯಗಳತ್ತ ಮುಖ ಮಾಡಿದರು. ಸಾಗರ್‌ನ ಮೊಬೈಲ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದಾಗ, ಮಹೇಶ್ ಎಂಬಾತನೊಂದಿಗೆ ನಡೆದ ಮಾತುಕತೆ ಪತ್ತೆಯಾಯಿತು. ಮಹೇಶ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇಡೀ ಸಂಚು ಬಯಲಾಯಿತು. ನಂತರ ಪತ್ನಿ ಪೂಜಾ ಮತ್ತು ಪ್ರಿಯತಮ ರೆಡ್ಡಿ ರಾಠೋಡ್‌ರನ್ನು ಬಂಧಿಸಲಾಯಿತು.

ಯಾದಗಿರಿ ಗ್ರಾಮಾಂತರ ಪೊಲೀಸರು  ಮೂವರು ಆರೋಪಿಗಳು ಅಂದರ್

ಯಾದಗಿರಿ ಗ್ರಾಮಾಂತರ ಪೊಲೀಸರು ಮಹೇಶ್, ರೆಡ್ಡಿ ರಾಠೋಡ್ ಹಾಗೂ ಪೂಜಾ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

 ಈ ಘಟನೆ ಸಮಾಜಕ್ಕೆ ಎಚ್ಚರಿಕೆಯ ಘಟನೆ

ಈ ಘಟನೆ ಕೇವಲ ಒಂದು ಕೊ* ಪ್ರಕರಣವಲ್ಲ; ಅದು ಸಂಬಂಧಗಳಲ್ಲಿ ವಿಶ್ವಾಸ ಕುಸಿದಾಗ ಯಾವ ಮಟ್ಟಿಗೆ ದುರಂತ ಸಂಭವಿಸಬಹುದು ಎಂಬುದಕ್ಕೆ ಕಹಿ ಉದಾಹರಣೆ. ಅಕ್ರಮ ಸಂಬಂಧ, ಕೋಪ ಮತ್ತು ಸ್ವಾರ್ಥ ಒಂದಾಗಿದರೆ, ಅದು ಎಷ್ಟು ಭೀಕರ ಪರಿಣಾಮ ತರುತ್ತದೆ ಎಂಬುದನ್ನು ಈ ಪ್ರಕರಣ ತೋರಿಸಿದೆ.

ಅಪಘಾತದ ಮುಖವಾಡ ಹಾಕಿದ ಈ ಕ್ರೂರ ಕೊ* , ಪೊಲೀಸರ ಚಾಕಚಕ್ಯ ತನಿಖೆಯಿಂದ ಬಯಲಾಗಿದ್ದು, “ಸತ್ಯ ಎಷ್ಟೇ ಮುಚ್ಚಿದರೂ ಹೊರಬರುತ್ತದೆ” ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Contact us for classifieds and ads : +91 9742974234