Latest News

ಅಂಬೇಡ್ಕರ್, ಜಗಜೀವನ್ ರಾಮ್ ಜಯಂತಿ ಒಟ್ಟಿಗೆ ಆಚರಣೆ: ಮಾ.30ಕ್ಕೆ ಭಾರಿ ಸಮಾರಂಭಕ್ಕೆ ಶಾಸಕ ಡಿ.ರವಿಶಂಕರ್ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್. ನಗರ. ಮಾ. 27:- ಡಾ. ಬಿ ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆಯನ್ನು ಬೇರೆ ಬೇರೆ ದಿನ ಮಾಡದೆ ಒಂದೇ ದಿನ ಅದ್ದೂರಿಯಾಗಿ ಆಡಂಬರದಿಂದ ಬೃಹತ್ ಕಾರ್ಯಕ್ರಮವನ್ನು ಮಾಡುವ ಮೂಲಕ ಆಚರಣೆ ಮಾಡಬೇಕೆಂದು ಮಾಡಿದ ಒತ್ತಾಯದ ಮೇರೆಗೆ ಶಾಸಕ ಡಿ ರವಿಶಂಕರ್ ಇದೇ ತಿಂಗಳು 30 ರಂದು ಇಬ್ಬರು ಮಹಾನ್ ನಾಯಕರ ಜಯಂತಿ ಕಾರ್ಯಕ್ರಮದ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಮಿನಿ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರುಗಳಾದ ಮಧುನಹಳ್ಳಿ ಲೋಕೇಶ್ ಸಿದ್ದಾಪುರದ ಕಾಳಯ್ಯ ಮಾಜಿ ತಾಲೂಕ್ ಪಂಚಾಯತಿ ಸದಸ್ಯ ಸೋಮಣ್ಣ ಕುಮಾರ್ ಮತ್ತು ಮಲ್ಲೇಶ್ ಒಟ್ಟಾರೆಯಾಗಿ ರಾಷ್ಟ್ರ ಕಂಡ ಮಹಾನ್ ನಾಯಕರ ಜಯಂತಿಯನ್ನು 15 ವರ್ಷಗಳಿಂದ ಒಂದೇ ದಿನ ಆಚರಿಸಿಕೊಂಡು ಬರುತ್ತಿದ್ದೇವೆ ಆದ್ದರಿಂದ ಅವರ ಜಯಂತಿ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಿ ಇಬ್ಬರ ಜಯಂತಿಯನ್ನು ಒಂದೇ ದಿನ ಅದ್ದೂರಿಯಾಗಿ ಆಚರಿಸಬೇಕೆಂದು ಒತ್ತಾಯಿಸಿದರು.

ಆದರೆ ಇಂದು ಪೂರ್ವಭಾವಿ ಸಭೆಗೆ ಕೇವಲ ಎಡಗೈ ಸಮಾಜದ ಮುಖಂಡರು ಮಾತ್ರ ಆಗಮಿಸಿದ್ದು ಬಲಗೈ ಸಮಾಜದ ಮುಖಂಡರು ಸೇರಿದಂತೆ ಇನ್ನಿತರ ಸೂಕ್ಷ್ಮಾತಿ ಸೂಕ್ಷ್ಮ ಸಮಾಜ ಸೇರಿದಂತೆ ಬೇರೆ ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಆಗಮಿಸದೆ ಇರುವುದು ಬೇಸರ ತಂದಿದೆ ತಾಲೂಕ್ ಆಡಳಿತ ಎಚ್ಚೆತ್ತುಕೊಂಡು ಎಲ್ಲಾ ಸಮಾಜದ ಮುಖಂಡರುಗಳು ಮತ್ತು ಪದಾಧಿಕಾರಿಗಳಿಗೆ ಮುಂದೆ ನಡೆಯುವ ಪೂರ್ವಭಾವಿ ಸಭೆಯ ಬಗ್ಗೆ ಮಾಹಿತಿ ನೀಡಿ ಸಭೆಯನ್ನು ಯಶಸ್ವಿ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಎಲ್ಲಾ ದಲಿತ ಮುಖಂಡರುಗಳ ಸಲಹೆಯನ್ನು ಸ್ವೀಕರಿಸಿದ ಶಾಸಕ ಡಿ ರವಿಶಂಕರ್ ದೇಶದ ಮಹಾನ್ ನಾಯಕರ ಜಯಂತಿಯನ್ನು ಅದ್ದೂರಿಯಾಗಿ ಆಡಂಬರದಿಂದ ಆಚರಿಸಲು ನಾನು ಸಿದ್ದನಿದ್ದು ಅದಕ್ಕೆ ನೀವುಗಳು ಸಲಹೆ ಸಹಕಾರ ನೀಡಬೇಕು ಮತ್ತು ನಿಮ್ಮ ಸಲಹೆಯಂತೆ ಎರಡು ಮಹನೀಯರ ಜಯಂತಿಯ ಪೂರ್ವಭಾವಿ ಸಭೆಯನ್ನು ಒಂದೇ ದಿನ ನಡೆಸಲು ತೀರ್ಮಾನಿಸಲಾಗಿದ್ದು ಅದರಂತೆ ದಿನಾಂಕ 30 /03/2026ರ ಸೋಮವಾರ ತಾಲೂಕ್ ಪಂಚಾಯತಿಯ ಸಭಾಂಗಣದಲ್ಲಿ 3 ಗಂಟೆಗೆ ಕರೆಯಲಾಗಿದೆ ಅಂದು ಎಲ್ಲರೂ ಸಮಯಕ್ಕೆ ಹಾಜುರಾಗಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕೆಂದು ತಿಳಿಸಿದರು.

ಅಂದು ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಮತ್ತು ಮುಖಂಡರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಕೆ ಆರ್ ನಗರ ಸಾಲಿಗ್ರಾಮ ತಾಲೂಕಿನ ತಹಸೀಲ್ದಾರರುಗಳಾದ ಸುರೇಂದ್ರ ಮೂರ್ತಿ ರುಕಿಯ ಬೇಗಂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಕುಲದೀಪ್. ರವಿಕುಮಾರ್ ಬಿಇಓ ಕೃಷ್ಣಪ್ಪ ಪಿ ಎಸ ಐ ಸ್ವಾಮಿಗೌಡ ಅರಣ್ಯ ಇಲಾಖೆಯ ವಲಯ ಅಧಿಕಾರಿ ಹರಿಪ್ರಸಾದ್ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಬಿಸಿಎಂ ಇಲಾಖೆಯ ಅಧಿಕಾರಿ ಮೇಘನ ಎ ಇ ಇ ಅರ್ಕೇಶ್ವರ ಪುರಸಭೆ ಮುಖ್ಯ ಅಧಿಕಾರಿ ರಮೇಶ್ ಸಿಡಿಪಿಒ ಅಣ್ಣಯ್ಯ ದಲಿತ ಮುಖಂಡರುಗಳಾದ ಲೋಕೇಶ್ ಸೋಮಣ್ಣ ಕಾಳಯ್ಯ ಎಂ ಎಸ್ ರವಿಕುಮಾರ್ ಎಂಎಸ್ ಮಹದೇವ್ ಕುಮಾರ್. ಸತೀಶ. ಮಲ್ಲೇಶ. ರಾಮಯ್ಯ. ಮಹದೇವ್ ಅನಂತು ಸೇರಿದಂತೆ ಇನ್ನಿತರ ರೂ ಭಾಗವಹಿಸಿದ್ದರು.

Contact us for classifieds and ads : +91 9742974234