Latest News

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

Ask ಮೈಸೂರು

samaveda askmysuru

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ?

ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್

vidwan_manjunath_shrouthi_sukanya

sri krishnadevaraya hampi

ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ?

ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ.

ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ?

ನಾವು ಆಡುವ ಪದಗಳಿಗಿಂತ, ಹೇಳುವ ಧಾಟಿ ಮನುಷ್ಯನ ಮನಸ್ಸಿಗೆ ಹೇಗೆ ಪ್ರಭಾವ ಬೀರುತ್ತದೆಯೆಂದು ನಮ್ಮ ಋಷಿಗಳು ಮೊದಲೇ ಮನಗೊಂಡಿದ್ದರು. ಹಾಗೆಯೇ, ಮಂತ್ರಗಳ ಪದಗಳಿಗಿಂತ ಮಂತ್ರಗಳ ಉಚ್ಚರಣೆ  ಬಹಳ ಮುಖ್ಯವಾಗಿರುತ್ತದೆ.

vidwan_manjunath_shrouthi

ಜಗತ್ತಿನ ಪ್ರತಿಯೊಂದು ಅಣುವಿನ ಕಣವು, ಒಂದು ಧ್ವನಿಗೆ ಕಂಪಿಸುತ್ತದೆ. ಆ ಧ್ವನಿಗಳನ್ನು ನಾವು ಕಂಡುಕೊಂಡಾಗ ನಾವು ಈ ಅಣುಗಳ ಮೇಲೇ ಪ್ರಭಾವ ಬೀರಿ, ನಮಗೆ ಬೇಕಾದನ್ನು ಪಡೆಯಬಹುದು. ಈ ರಹಸ್ಯವನ್ನು ನಮ್ಮ ಋಷಿಗಳು ಸಾಮವೇದದಲ್ಲಿ, ಗೀತತ್ವ ಜೊತೆ ಸೇರಿಸಿ ನಮಗೆ ಕೊಟ್ಟಿದ್ದಾರೆ.

ಉದಾಹರಣೆಗೆ: 2013 ರಲ್ಲಿ ಅಂಥೋನಿ ಹಾಲೆಂಡ್ (ಮ್ಯೂಸಿಕ್ ಪ್ರೊಫೆಸರ್) ರವರು, ಸಂಗೀತದಿಂದ ಕ್ಯಾನ್ಸರ್ ಕೋಶಗಳನ್ನು ಶಮನಗೊಳಿಸಿ ತೋರಿಸಿದ್ದಾರೆ. Reference:

ಪರಂಪರೆಯಲ್ಲಿ ಒಬ್ಬರಿಂದ ಒಬ್ಬರು ಕೇಳಿಯೇ ವೇದಗಳು ಬಂದಿದೆಯೇ ಹೊರತು ಗ್ರಂಥಲಿಪಿ ಆಗ ಇರಲಿಲ್ಲ. ಈ ಒಂದು ೮೦೦-೧೦೦೦ ವರ್ಷಗಳ ಇತಿಹಾಸದಲ್ಲಿ ಗ್ರಂಥಲಿಪಿಗಳೆಲ್ಲ ಒಂದೊಂದಾಗಿ ಬರವಣಿಗೆಯಾಗಿ ಹೊರಹೊಮ್ಮಿದೆ. ಇಷ್ಟೆಲ್ಲಾ ಬರವಣಿಗೆಗಳಿದ್ದರೂ ಕೂಡ, ಇಂದು ಅನೇಕ ಧ್ವನಿಗಳಿಗೆ ಅಕ್ಷರವನ್ನು ಬರೆಯಲು ನಾವು ಅಸಮರ್ಥರಾಗಿದ್ದೇವೆ. ಅನೇಕ ವರ್ಣಗಳನ್ನು ಬರೆಯುವುದಕ್ಕೆ ಆಗುವುದಿಲ್ಲ.

vidwan_sukanya

ಸಾಮವೇದದಲ್ಲಿ ಸ್ವರಗಳನ್ನು, ರಾಗಗಳನ್ನು ಹೇಗೆ ಗುರುತಿಸುತ್ತಾರೆ?

ಸಾಮವೇದದಲ್ಲಿ ಪಲ್ಲವಿ, ಅನುಪಲ್ಲವಿ, ಚರಣಗೆಳೆಲ್ಲಾ ಹೇಗೆ ವಿಂಗಡಿಸಲಾಗಿದೆ?

ಸಾಮವೇದದಲ್ಲಿ ಎಷ್ಟು ಸ್ಥಾಯಿಗಳಿವೆ?

ಇವುಗಳನ್ನು ಸಂಗೀತ ಜಗತ್ತು ಹೇಗೆ ಅಳವಡಿಸಿಕೊಂಡಿದೆ?

ಹೀಗೆ ಅನೇಕ ಸಂಗತಿಗಳನ್ನು ಮೈಸೂರಿನ “ಕಲ್ಪ ಫೌಂಡೇಶನ್” ನ ಶ್ರೀ ಅನಿಲ್ ಕುಮಾರ್  ವೆಪ್ಪತಂಗುಡಿ ರವರ ಪರಿಶ್ರಮದಿಂದ ಹಾಗೂ ಆಯೋಜನೆಯೊಂದಿಗೆ ಮುಂದಿನ ವೀಡಿಯೋದಲ್ಲಿ ನಿಮಗಾಗಿ ಪ್ರಕಟಿಸಿದ್ದಾರೆ. ಇತರರಿಗೂ ಶೇರ್ ಮಾಡುವುದರ ಮೂಲಕ ಪ್ರಾಚೀನ ಪರಂಪರೆಯ ಸಾಮವೇದವನ್ನು ಹೆಚ್ಚು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡೋಣ.

 

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು lets(at)askmysuru.com ಗೆ ಇಮೇಲ್ ಮಾಡಿ, ನಮ್ಮನ್ನು ಪ್ರೋತ್ಸಹಿಸಿ. ಮುಂದಿನ ಭಾಗದಲ್ಲಿ ಅದಕ್ಕೆ ಉತ್ತರಿಸಲಾಗುವುದು.

100% made in Karnataka

Contact us for classifieds and ads : +91 9742974234



 
error: Content is protected !!