ಮೈಸೂರು: ವಿಶ್ವವಿಖ್ಯಾತ ದಸರಾ ಆಚರಣೆ ಹಿಂದೆಯೂ ಮೈಸೂರು ಅರಸರ ಶೌರ್ಯ ಪರಾಕ್ರಮಗಳ ಚರಿತ್ರೆಯ ಹಿನ್ನೆಲೆ ಇದೆ. ದ್ವಾರಕೆಯಿಂದ 1399-1423ರ ಅವಯಲ್ಲಿ ಹಂತಹಂತವಾಗಿ ದಕ್ಷಿಣ ರಾಜ್ಯಕ್ಕೆ ಬಂದವರು ಯುದುವಂಶದ ರಾಜರು. ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು (ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಆಪತ್ಯವನ್ನು ಅವರು ಸಾಸಿಕೊಂಡ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.
1553-72ರಲ್ಲಿ ಎರಡನೇ ತಿಮ್ಮರಾಜರು ಪಾಳೆಯಗಾರನನ್ನು ಗೆದ್ದರು. ನಂತರ ಅವರ ಸಹೋ ದರ ಬೋಳಚಾಮರಾಜರು ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿದರು. 1578ರಲ್ಲಿ ಕೇವಲ 33 ಗ್ರಾಮಗಳ ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯ ವನ್ನಾಗಿಸಲು ಪ್ರಯತ್ನಿಸಿ ಜಯಿಸಿ ದವರು ರಾಜ ಒಡೆಯರ್.
ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಕೃತ ಪ್ರತಿನಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಯವಿತ್ತು. ರಾಜ ಒಡೆಯರ್ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡರು. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನೂ ವಶಪಡಿಸಿಕೊಂಡರು. ವಿಜಯನಗರ ಅರಸರ ಒಪ್ಪಿಗೆ ಪಡೆದು ಆ ಭಾಗದ ವಿಜಯನಗರ ಸಾಮ್ರಾಜ್ಯದ ಪ್ರತಿನಿಯಾದರು.
ಆ ಸಮಯದ ಶ್ರೀರಂಗಪಟ್ಟಣದಲ್ಲಿ ದೊರೆ ರಾಜ ಒಡೆಯರ್ ಮಹಾನವಮಿ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದರು. 1610ರಲ್ಲಿ ವಿಜಯದಶಮಿಯ ಮೆರವಣಿಗೆಯನ್ನು ಪುನಾರಂಭಿಸಿದರು. 1610ರಿಂದ ಒಂಬತ್ತನೇ ಅರಸರಾದ ಚಾಮರಾಜ ಒಡೆಯರ್ ತನಕ ವಿಜಯನಗರದ ಶೈಲಿಯಲ್ಲಿ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಕಾರಣಾಂತರ ಗಳಿಂದ ಕೆಲ ವರ್ಷಗಳ ಕಾಲ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಶ್ರೀರಂಗಪಟ್ಟಣದಲ್ಲಿ ವಿಜಯದಶಮಿ ಆಚರಣೆ ಸಾರ್ವಜನಿಕವಾಗಿ ನಡೆಯದೇ ನಿಂತುಹೋಗಿತ್ತು. ನಂತರದಲ್ಲಿ ಬ್ರಿಟಿಷರ ಅನಕ್ಕೆ ಒಳಪಟ್ಟ ಸಂಸ್ಥಾನವು, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಂದರೆ 1799ರಲ್ಲಿ ತನ್ನ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣ ದಿಂದ ಮೈಸೂರಿಗೆ ಸ್ಥಳಾಂತರಿಸಿಕೊಂಡಿತು. ನಂತರದ ದಸರಾ ಆಚರಣೆಗಳನ್ನು ದಿಗ್ವಿಜಯಾರ್ಥವಾಗಿ ನಡೆಸುವ ಬದಲು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಿಗೆ ತಂದು ಆಚರಿಸಿದ್ದು ಗಮನಾರ್ಹ ಅಂಶವಾಗಿದೆ.
ದಸರಾ ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ವೈಭವಯುತವಾಗಿ ನಡೆದು ಬರುತ್ತಿತ್ತು. ರಾಜಾಶ್ರಯದ ದಸರೆಯು ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಅವಗೆ ಕೊನೆಗೊಂಡಿತು. ಭಾರತ ಸ್ವಾತಂತ್ಯ ಪಡೆದು ಭಾಷಾವಾರು ಪ್ರಾಂತ ವಿಂಗಡಣೆಯಾಯಿತು. ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನು ಆಗಿನ ಮುಖ್ಯಮಂತ್ರಿ ಚೆಂಗಲರಾಯರೆಡ್ಡಿ ಅವರಿಗೆ ಒಡೆಯರ್ ಅಕಾರ ಹಸ್ತಾಂತರಿಸಿದರು. ತಾವು ಭಾರತ ಸರ್ಕಾರದ ಪ್ರತಿನಿಯಾಗಿ ರಾಜ್ಯಪಾಲರಾಗಿ, ಪ್ರಮುಖರಾಗಿ ಹಲವು ಹುzಗಳನ್ನು ಅಲಂಕರಿಸಿದ್ದು ಇತಿಹಾಸ.