Articles

“ಆಕಾಶವಾಣಿ, ಭದ್ರಾವತಿ. ಕರ‍್ಯಕ್ರಮ ನಡೆಸಿಕೊಡುತ್ತಿರುವವರು…”

- ಚೇತನ್ ಸಿ ರಾಯನಹಳ್ಳಿ

ಒಮ್ಮೆ ಆಕಾಶವಾಣಿ ಭದ್ರಾವತಿ ಇವರಿಂದ 30ನಿಮಿಷಗಳಿಗೆ ಮಕ್ಕಳಿಂದ ಕರ‍್ಯಕ್ರಮಕ್ಕೆ ಅವಕಾಶ ನೀಡಿದ್ದರು. ಆಗತಾನೇ ಒಂದಿಷ್ಟು ಮಕ್ಕಳು ಕೆಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದ ಸಮಯ. ಆಕಾಶವಾಣಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಆಗ ಆಕಾಶವಾಣಿಯಲ್ಲಿದ್ದ ಸುಧೀಂದ್ರ ಸರ್ ಜೊತೆ ಮಾತನಾಡಿದಾಗ ಯಾವ ರೀತಿಯ ಕರ‍್ಯಕ್ರಮಗಳನ್ನು ಮಕ್ಕಳು ನೀಡಬಹುದು ಎಂದು ತಿಳಿಸಿದರು ಅದರಂತೆ ಶಾಲೆಯಲ್ಲಿ ತಿಳಿಸಿದಾಗ ಆಸಕ್ತ ಮಕ್ಕಳು ಹೆಸರನ್ನು ನೀಡಿದರು.
ಕರ‍್ಯಕ್ರಮಗಳ ಪಟ್ಟಿ ಮಾಡಿದೆವು, ರಂಜಿನಿ ಹೆಗ್ಡೆ ಎಂಬ ವಿದ್ಯಾರ್ಥಿನಿ ಸತತವಾಗಿ ಮೂರು ವರ್ಷವೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಳು. ಅವಳ ಕಿರುಸಂದರ್ಶನವನ್ನು ಮತ್ತೊಬ್ಬ ವಿದ್ಯಾರ್ಥಿ ನೆರವೇರಿಸುವುದು, ಅನನ್ಯಳಿಂದ ವಚನಗಾಯನ, ಯಶಸ್ವಿನಿಯಿಂದ ಕವನ ವಾಚನ, ರಕ್ಷ, ಶರಣ್ಯ, ಶಂತನು, ಪ್ರದ್ಯುಮ್ನ, ಶಶಾಂಕ್ ಇವರಿಂದ ರೇಡಿಯೋ ನಾಟಕ, ರಕ್ಷಿತ, ಭಾವನ, ಪ್ರಕೃತಿ, ಧನುಷ್, ಲೇಖನ್ ಇವರಿಂದ ಸಮೂಹ ಗೀತೆ ಇವುಗಳೇ ಅವರುಕೊಟ್ಟ ಸಮಯವನ್ನು ಮೀರುವ ಹಾಗಿತ್ತು. ಹಾಗೂಹೀಗೂ ಹೊಂದಿಸಿ ಸರಿಯಾದ ಸಮಯಕ್ಕೆ ಹೊಂದಿಸಿಕೊoಡೆವು.

sri krishnadevaraya hampi


ನಿಗದಿತ ದಿನದಂದು ಶಾಲೆಯ ಬಸ್‌ನಲ್ಲಿ ಹೊರಟೆವು. ಇದೊಂತರ ಇವರುಗಳಿಗೆ ಸಣ್ಣ ಪ್ರವಾಸವಾದ ರೀತಿಯಲ್ಲಿ ಅಂತ್ಯಾಕ್ಷರಿ, ಚಪ್ಪಾಳೆ ಎಂದು ಸಾಗತೊಡಗಿದೆವು. ಭದ್ರಾವತಿಯ ಪ್ರಸಿದ್ದ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯ ಎದುರಿಂದ ಹೊರಡುವಾಗ ಶಂತನು ಬಸ್‌ನಲ್ಲಿ ಕೂತು ಅದರ ವಿಡಿಯೋ ಮಾಡತೊಡಗಿದ. ಆಕಾಶವಾಣಿ ಕೇಂದ್ರವನ್ನು ತಲುಪಿದೆವು. ಎಲ್ಲರೂ ಅಲ್ಲೊಂದು ಕೊಠಡಿಯಲ್ಲಿ ಕುಳಿತೆವು. ಮಕ್ಕಳಿಗೆ ಇದೆಲ್ಲ ಹೊಸದು ಹೇಗೆ ನಾವು ಕೂರುವುದು? ರೆಕಾರ್ಡಿಂಗ್ ಹೇಗೆ ಮಾಡಿಕೊಳ್ಳುತ್ತಾರೆ? ಅದುಇದು ಎಂಬ ನೂರಾರು ಪ್ರಶ್ನೆಗಳು, ಅಷ್ಟರಲ್ಲಿ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿದ್ದ ಸುಧೀಂದ್ರ ಸರ್ ಬಂದು ಎಲ್ಲರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ‘10ನಿಮಿಷ ಆಮೇಲೆ ಶುರುಮಾಡೋಣ’ ಎಂದು ಹೊರಟರು ಅಷ್ಟರಲ್ಲಿ ಧನುಷ್ ನಾವುಡ, ‘ಸರ್ ಇಷ್ಟೊತ್ತನಕ ರೇಡಿಯೋದಲ್ಲಿ ಇವರ ಧ್ವನಿಯೇ ಅಲ್ವಾ ಕೇಳ್ತಾ ಇತ್ತು?’ ಎಂದನು. ಅಲ್ಲಿಯ ತನಕ ಅವರ ಕರ‍್ಯಕ್ರಮವೇ ಪ್ರಸಾರವಾಗುತ್ತಿತ್ತು ಕೂಡ.
ಎಲ್ಲರಿಗೂ ಮೊದಲು ಆಕಾಶವಾಣಿ ಹೇಗಿರುತ್ತದೆ ಎಂದು ತಿಳಿಸಿ ರೆಕಾರ್ಡಿಂಗ್ ರೂಮ್ ಗೆ ಕರೆದುಕೊಂಡು ಹೋದರು. ಹೇಗೆ ರೆಕಾರ್ಡಿಂಗ್ ನಡೆಯುತ್ತದೆ. ನಾವುಗಳು ಯಾವಾಗ ಮಾತನಾಡಾಬೇಕು, ತಪ್ಪಾದರೆ ಅದನ್ನು ಹೇಗೆ ಸರಿಮಾಡಿಕೊಳ್ಳಬೇಕು, ಎದುರಿನ ಕೊಠಡಿಯ ದೊಡ್ಡ ಗಾಜಿನ ಹಿಂಬದಿಯಿAದ ಅವರು ನೀಡುವ ಸೂಚನೆಗಳನ್ನು ಆಲಿಸುವುದು ಹೇಗೆ? ಸಣ್ಣ ಶಬ್ಧವಾದರೂ ಅದರಲ್ಲಿ ಹೇಗೆ ಕೇಳುತ್ತದೆ? ಹೀಗೆ ಹಲವಾರು ಮಾರ್ಗದರ್ಶನವನ್ನು ನೀಡಿದರು. ಮಕ್ಕಳನ್ನು ಎದುರಿನ ಕೊಠಡಿಯಲ್ಲಿರಲು ತಿಳಿಸಿ ಪಕ್ಕದ ಕೋಣೆಯಿಂದ ಅವರು ಮಾತನಾಡುವ ಅದಕ್ಕೆ ನಾವು ಪ್ರತಿಕ್ರಿಯೆಯನ್ನು ಹೇಗೆ ನೀಡಬಹುದು ಎಂಬುದನ್ನು ತಿಳಿಯಲಾಯಿತು. ಮೊದಲಿಗೆ ಶಾಲೆಯ ಪರಿಚಯವನ್ನು ಮಾಡಿ ತದನಂತರ ಒಂದೊoದು ಕಾರ್ಯಕ್ರಮವನ್ನು ಮಾಡಿ ನಾವು ಅದನ್ನು ಪ್ರಸಾರಕ್ಕೆ ಹೇಗೆಬೇಕೋ ಹಾಗೆ ಹೊಂದಿಸಿಕೊಳ್ಳುತ್ತೇವೆ ಎಂದರು. ಸರಿ ಆರಂಭವಾಯಿತು. ಅಲ್ಲೇ ಮೂಲೆಯಲ್ಲಿ ಕೂತು ಹುಡುಗರು ಕಿಸಕ್ಕನೇ ನಕ್ಕಾಗ ಎದುರಿನ ಕೊಠಡಿಯಿಂದ ಸರ್, ‘ನಿಲ್ಲಿಸಿ ನೀವು ಮೂಲೆಯಲ್ಲಿ ಕೂತು ಮಾಡುವ ಚೇಷ್ಟೆ ಹೇಗಿರುತ್ತದೆ ನೋಡಿ ಎಂದ ಮಕ್ಕಳ ಧ್ವನಿ ಕೇಳಿಸಿದರು. ನಿರೂಪಣೆಯ ಜೊತೆಗೆ ಮೂಲೆಯಲ್ಲಿ ಮಾತನಾಡುವುದು ಕೂಡ ಸ್ಪಷ್ಟವಾಗಿ ಕೇಳಿದಾಗ ಎಲ್ಲರೂ ಗಪ್‌ಚುಪ್ ಆದರು. ಅಂತೂ ಇಂತು ಹಲವು ಕಟ್, ಟೇಕ್, ಕಾಪಿಗಳ ನಡುವೆ ರೆಕಾರ್ಡಿಂಗ್ ಮುಗಿಯುತು. ಸರ್ ಬಂದು, ‘ಚೆನ್ನಾಗಿ ಕರ‍್ಯಕ್ರಮ ನೀಡಿದ್ದೀರಿ ಅದರಲ್ಲೂ ನಾಟಕದಲ್ಲಿ ಆರೋಗ್ಯ, ಚುಚ್ಚುಮದ್ದು, ಸ್ವಚ್ಚತೆ ಈ ವಿಷಯಗಳ ಬಗ್ಗೆ ಇಬ್ಬರು ಹುಡುಗಿಯರು ಚೆನಾಗಿ ಸಂಭಾಷಣೆ ಒಪ್ಪಿಸಿದರು, ಈ ರೀತಿಯ ಕರ‍್ಯಕ್ರಮಗಳು ಇದ್ದಾಗಲೇ ಚೆಂದ’ ಅಂದರು. (ರಕ್ಷ ಮತ್ತು ಶರಣ್ಯಭಟ್ ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಮೆಲ್ಲಗೆ ನಕ್ಕರು ಕಾರಣ ಆ ನಾಟಕದ ದೃಶ್ಯವನ್ನು ಬಸ್‌ನಲ್ಲಿ ಹೋಗುವಾಗ ಹೇಳಿಕೊಟ್ಟದ್ದು…) ‘ಒಟ್ಟಾರೆಯಾಗಿ ಕರ‍್ಯಕ್ರಮ ಇಷ್ಟವಾಯಿತು, ಬನ್ನಿ ನಿಮಗೆ ಆಕಾಶವಾಣಿಯ ಪರಿಚಯ ಮಾಡಿಕೊಡುವೆ’ ಎಂದರು.
ಎಲ್ಲರೂ ಅವರ ಹಿಂದೆ ನಡೆದೆವು. ಕೇಂದ್ರದಿoದ ಬಂದ ವಾರ್ತೆಯನ್ನು ಹೇಗೆ ಸ್ವೀಕರಿಸುವುದು, ಅದನ್ನು ಪ್ರಸಾರ ಮಾಡುವುದು ಹೇಗೆ? ನೇರ ಫೋನ್‌ಇನ್ ಕರ‍್ಯಕ್ರಮ ನಡೆಯುವುದು, ಶ್ರೋತೃಗಳು ಕೇಳಿದ ಹಾಡನ್ನು ಪ್ರಸಾರ ಮಾಡುವುದು ಹೇಗೆ? ತರಂಗಾoತರಗಳನ್ನು ಸಂರಕ್ಷಿಸುವುದು, ಪ್ರತಿಯೊಂದು ಕೊಠಡಿಗಳಲ್ಲಿ ಸಣ್ಣಪುಟ್ಟ ಧ್ವನಿಗಳು ಬರದಂತೆ ಹೇಗೆ ಮಾಡುವುದು, ಈ ಎಲ್ಲಾ ರೀತಿಯ ಕರ‍್ಯ ಚಟುವಟಿಕೆಗಳು ಹೇಗೆಲ್ಲಾ ನಡೆಯುತ್ತವೆ, ಹೇಗೆ ನಡೆಸುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅವರ ಜೊತೆಗೊಂದಿಷ್ಟು ಮಾತನಾಡಿ ಆಗಾಗ ಕರ‍್ಯಕ್ರಮ ನೀಡಲು ಬನ್ನಿರಿ ಎಂದು ಆತ್ಮೀಯವಾಗಿ ಬೀಳ್ಕೊಟ್ಟರು. ಎಲ್ಲರೂ ಆಕಾಶವಾಣಿಗೆ ಬಂದಿದ್ದ ನೆನಪಿಗಾಗಿ ಫೋಟೊ ತೆಗೆದುಕೊಂಡು ಶಿವಮೊಗ್ಗದ ಕಡೆಗೆ ಹೊರಟೆವು. ಬಸ್ ಮಾಚೇನಹಳ್ಳಿ ಡೈರಿ ಬಳಿ ನಿಂತಿತು. ಅಲ್ಲಿ ಎಲ್ಲರೂ ಐಸ್‌ಕ್ರೀಮ್ ತಿನ್ನಬೇಕೆಂದು, ವಿದ್ಯಾರ್ಥಿಗಳು ಮತ್ತು ಬಸ್ ಚಾಲಕ ಸುನೀಲ್, ಕಂಡಕ್ಟರ್ ಬಾಬಣ್ಣರ ಜೊತೆಗೆ ಮೊದಲೇ ಒಪ್ಪಂದವಾಗಿತ್ತು. ಹಾಗಾಗಿ ಬಸ್ ಚಲಿಸಲೇ ಇಲ್ಲ. ಇವರೆಲ್ಲರನ್ನೂ ಒಮ್ಮೆ ದುರುಗುಟ್ಟಿಕೊಂಡು ನೋಡಿದ್ದಾಯಿತು. ಏನುಮಾಡುವ ಹಾಗಿರಲಿಲ್ಲ ಇದೊಂತರ ಅನಿವಾರ್ಯವಾಗಿ ಅನುಭವಿಸಲೇ ಬೇಕಿತ್ತು. ಮೂವರು ವಿದ್ಯಾರ್ಥಿಗಳ ಜೊತೆಗೆ ಹೋಗಿ ಬೇಕಾದ (ನನ್ನ ಬಜೆಟ್‌ಲಿ ಬರುವಂತಹ) ಐಸ್‌ಕ್ರೀಮ್‌ಗಳನ್ನು ವಿದ್ಯಾರ್ಥಿಗಳ ಜೊತೆಗೆ ತಿಂದು ಶಾಲೆಗೆ ಬಂದೆವು. ಆಗ ಶಾಲೆಯಲ್ಲಿ ಎಲ್ಲರ ಊಟವು ಮುಗಿದಿತ್ತು. ನಾವುಗಳು ಆಗ ಊಟ ಮಾಡಿ ತರಗತಿಗಳಿಗೆ ತೆರಳಿದೆವು. ವಾರದ ನಂತರ ಕರ‍್ಯಕ್ರಮ ಪ್ರಸಾರವಾಯಿತು. ಮೊದಲೇ ಎಲ್ಲಾರಿಗೂ ತಿಳಿಸಿದ್ದೆವು. ಅಂದು ರೇಡಿಯೋ ಕೇಳದವರೆಲ್ಲ ಕೇಳಿದರೂ, ನಮ್ಮ ಕೆಲವು ಮಕ್ಕಳು ಅದನ್ನು ರೆಕಾರ್ಡ್ ಕೂಡ ಮಾಡಿಕೊಂಡರು.
ಆಕಾಶವಾಣಿ ಎಂದಾಗ ಅದರ ಕರ‍್ಯಕ್ರಮ ಹೇಗೇಏನೋ ಅನ್ನುವ ಮಕ್ಕಳು ಒಮ್ಮೆ ಅದನ್ನು ನೋಡಿ ಎಲ್ಲವನ್ನೂ ತಿಳಿದುಕೊಂಡರು. ಈ ರೀತಿಯ ಅನುಭವಗಳು ಬೇಕು. ಆದರೆ ಎಲ್ಲಾ ಮಕ್ಕಳಿಗೂ ಈ ಚೆಂದದ ಅನುಭವ ಸಿಗಲಿಲ್ಲ ಎಂಬುದೊoದೇ ಬೇಸರ, ಹೋಗಿ ಬಂದವರಲ್ಲಿ ಆನಂದ ಅಪಾರ…

Contact us for classifieds and ads : +91 9742974234



 
error: Content is protected !!