Latest News

ಕಾಂಗ್ರೆಸ್ ಯಾವ ಪುರುಷಾರ್ಥಕ್ಕಾಗಿ ಇಂದು ಪಾದಯಾತ್ರೆ ಮಾಡುತ್ತಿದೆ?

 

VB-GRAM-G ಎನ್ನುವಂತಹ ಒಂದು ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಯೋಜನೆಯನ್ನು ಕೇಂದ್ರ ಸರಕಾರ ಮಾಡಿದೆ. ಗ್ರಾಮೀಣ ಜನರಿಗೆ ಜೀವನ ಪರ್ಯಂತ ಉದ್ಯೋಗ ಖಾತ್ರಿ ನೀಡುವ ಯೋಜನೆಯಾಗಿ ಇದನ್ನು ಪರಿಷ್ಕರಿಸಿ ಜಾರಿ ಮಾಡಿದೆ.

ಆದರೆ ಕಾಂಗ್ರೆಸ್ ಇದನ್ನು ಬಹಳ ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡಿ ಪಾದಯಾತ್ರೆಗೆ ಮುಂದಾಗಿದೆ. ಕಾಂಗ್ರೆಸ್ ನ ವಿರೋಧಕ್ಕೆ ಕಾರಣ ಏನು ಅಂತ ತಿಳಿದರೆ ಇದು ತೀರಾ ನಗೆಪಾಟಲಿನ ಸಂಗತಿ ಅನ್ನುವುದು ನಿಮಗೆಲ್ಲ ಅರ್ಥವಾಗುತ್ತದೆ. ಒಂದು ಕಾಯ್ದೆಯ ಮುಖಾಂತರ ಈ ದೇಶದ ಜನರಿಗೆ ಉದ್ಯೋಗದ ಭರವಸೆಯನ್ನು ಕೊಡಬೇಕು ಅಂತ ಉದ್ದೇಶದಿಂದ ಪ್ರಾರಂಭವಾದ ಈ ಕಾಯ್ದೆ ಕಾಲ ಕಾಲಕ್ಕೆ ಸಂದರ್ಭಾನುಸಾರ ಬದಲಾವಣೆ ಆಗುತ್ತಾ ಬಂದಿರುವುದು ಎಒ್ಲರಿಗೂ ಗೊತ್ತಿರುವ ವಿಷಯ. ಮೊದಲು ಕೂಲಿಗಾಗಿ ಕಾಳು ಅಂತ ಇತ್ತು; ನಂತರ ನರೇಗಾ ಆಯ್ತು, ಆ ಮೇಲೆ ಮನ್ರೇಗಾ ಆಯ್ತು. ಗ್ರಾಮೀಣ ಜನತೆ ವಲಸೆ ಹೋಗುವುದನ್ನು ತಪ್ಪಿಸುವುದು, ಅವರಿಗೆ ಉದ್ಯೋಗದ ಖಾತ್ರಿ ನೀಡುವುದು ಇದರ ಮೂಲ ಉದ್ದೇಶ.

ಆದರೆ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಮನ್ರೇಗಾ ಮುಖಾಂತರ ಕೋಟ್ಯಂತರ ಹಣವನ್ನು‌ ಲೂಟಿ ಮಾಡ್ತಾ ಇದೆ. ಆ ಲೂಟಿಯನ್ನು ತಪ್ಪಿಸುವುದಕ್ಕಾಗಿ ಮೋದೀಜಿ ಸರಕಾರವಿದನ್ನು ಒಂದು ಹೊಸ ಆಯಾಮದಲ್ಲಿ ಪುನಾರಚಿಸಿ (ರೀಮಾಡ್ಯೂಲ್) VB-Gram-G ಕಾಯ್ದೆಯನ್ನು ರೂಪಿಸಿದೆ.

ತಮಗೆ ಭ್ರಷ್ಟಾಚಾರ ಮಾಡಲು ಇನ್ನು ಮುಂದೆ ಈ ಕಾಯ್ದೆಯಿಂದ ಅವಕಾಶ ಸಿಗದು ಅನ್ನುವ ಒಂದೇ ಒಂದು ಕಾರಣದಿಂದ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ.

ಸಿಎಜಿ ಮತ್ತು ಮಿಕ್ಕ ಎಲ್ಲಾ ಏಜೆನ್ಸಿಗಳ ವರದಿಯ ಅನುಸಾರ – ಕರ್ನಾಟಕದಲ್ಲಿ ಮನ್ರೇಗಾ ಕಾಯ್ದೆ ಮುಖಾಂತರ ಸುಮಾರು 500 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಕಲಿ ಜಾಬ್ ಕಾರ್ಡ್ ಗಳನ್ನು ಬಳಸಿ ದೇಶದಲ್ಲಿ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಈ ಭ್ರಷ್ಟಾಚಾರ ಎಗ್ಗಿಲ್ಲದೇ ಮುಂದುವರಿದಿದೆ.

ಭಾರತ ವಿಕಾಸವಾಗುತ್ತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಕಾಲಘಟ್ಟದಲ್ಲಿ ಭಾರತ ಸರಕಾರ ಈ ಯೋಜನೆಗೋಸ್ಕರ ಸುಮಾರು ಒಂದು ಲಕ್ಷ ಕೋಟಿ ರೂ ವಿನಿಯೋಗ ಮಾಡುತ್ತಿದೆ.

ಬೇರೆ ಬೇರೆ ರಾಜ್ಯಗಳ ಪಾಲುದಾರಿಕೆಯೊಂದಿಗೆ ಈ ಮೊತ್ತ ಒಂದೂವರೆ ಲಕ್ಷ ಕೋಟಿ ಮೀರುತ್ತದೆ.

ಈ ಹೂಡಿಕೆಯ ಮೊತ್ತ ರಾಷ್ಟ್ರದ ಆಸ್ತಿಯಾಗಿ ಹೊರಹೊಮ್ಮಬೇಕು ಎನ್ನುವ ಉದಾತ್ತ ಆಶಯದೊಂದಿಗೆ ಕೇಂದ್ರ ಸರಕಾರ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದೆ. ಇದರಿಂದ ತಮಗೆ ಭ್ರಷ್ಟಾಚಾರ ಮಾಡಲು ಅವಕಾಶ ಸಿಗುತ್ತಿಲ್ಲ ಎಂಬುದೇ ಕಾಂಗ್ರೆಸ್ ನವರ ಚಿಂತೆಯಾಗಿದ್ದು ಪ್ರತಿಭಟನೆಗೆ ಮುಂದಾಗಿದ್ಸಾರೆ. ಇದು ನಿಜಕ್ಕೂ ನಗೆಪಾಟಲಿನ ವಿಷಯ.

 

ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ- ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಬಸ್ ಕಂಡಕ್ಟರ್ ಗಳ ನಕಲಿ ಫೋಟೋಗಳನ್ನು ಬಳಸಿ, ಮಹಿಳೆಯರ ಜಾಬ್ ಕಾರ್ಡ್ ಗಳ ಮೇಲೆ ಪುರುಷರ ಫೋಟೋ ಅಂಟಿಸಿ, ಅದೇ ರೀತಿ ಪುರುಷರ ಜಾಬ್ ಕಾರ್ಡ್ ಗೆ ಮಹಿಳೆಯರ ಫೋಟೋ ಅಂಟಿಸಿ ನಕಲಿ ಜಾಬ್ ಕಾರ್ಡ್ ಮಾಡಿ ಲೂಟಿ ಹೊಡೆದಿದ್ದು ಬಹಿರಂಗವಾಗಿದೆ.

ಕಳೆದ ಹಲವು ದಶಕಗಳಿಂದ ಈ ಭಾಗದ ರಾಜಕೀಯ ನೇತೃತ್ವ ವಹಿಸಿದ ಕುಟುಂಬಕ್ಕೆ, ಪರಿಷ್ಕೃತ ಕಾಯ್ದೆಯ ನಿಯಮಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಅದಕ್ಕೇ ಈ ಪ್ರತಿಭಟನೆಗೆ ಕಾಂಗ್ರೆಸ್ ಇಳಿದಿದೆ.

ಮೋದಿ ಸರಕಾರದ ಸುಧಾರಣಾ ಕ್ರಮಗಳಿಂದಾಗಿ ಕಾಂಗ್ರೆಸ್ ನವರ ಸಂಪಾದನೆ ಕಡಿಮೆಯಾಗಿದೆ. ಅದಕ್ಕೆ ಅವರು ವಿರೋಧಗಳನ್ನು ಮಾಡ್ತಾ ಇದ್ದಾರೆ.

 

-ಎಂ.ಜಿ ಮಹೇಶ್,

ರಾಜ್ಯ ವಕ್ತಾರರು,ಬಿಜೆಪಿ ಕರ್ನಾಟಕ

Contact us for classifieds and ads : +91 9742974234

[embedyt] https://www.youtube.com/embed?listType=playlist&list=PLq4fyKjKzgg12MW4zseviqps27wiy9eCy[/embedyt]