Latest News

ನನ್ನ ಆಸ್ತಿ ಸರ್ವೇಗೆ ಅಧಿಕಾರಿಗಳನ್ನು ಕಳುಹಿಸಬೇಡಿ, ಸ್ವತಃ ನಿವೇ ಬನ್ನಿ : ಸಾ.ರಾ. ಮಹೇಶ್

AskMysuru 06/09/2021

ಮೈಸೂರು: ಒಂದು ಗುಂಟೆ ಒತ್ತುವರಿ ಮಾಡಿ ದಟ್ಟಗಳ್ಳಿಯಲ್ಲಿರುವ ಸಾ.ರಾ. ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಲಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆಗೂ ಸಿದ್ಧ. ಒಂದುವೇಳೆ ಒಂದು ಗುಂಟೆ ಒತ್ತುವರಿ ಕಂಡು ಬಂದರೂ ಸರ್ಕಾರಕ್ಕೆ ನನ್ನ ಆಸ್ತಿಯನ್ನು ಬರೆದುಕೊಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.

sri krishnadevaraya hampi

ಚೌಲ್ಟ್ರಿ ಜಾಗದಲ್ಲಿ ಒಂದೇ ಗುಂಟೆ ಒತ್ತುವರಿ ಆಗಿದ್ದರೆ ಆಸ್ತಿಯನ್ನು ರಾಜ್ಯಪಾಲರಿಗೆ ಬರೆದುಕೊಡುತ್ತೇನೆ. ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುನೆ ಎಂದು ನಾನು ಈ ಹಿಂದೆಯೇ ಹೇಳಿಕೆ ನೀಡಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಒತ್ತುವರಿ, ಗೋಮಾಳ ಅಥವಾ ಒಂದೇ ಒಂದು ಗುಂಟೆ ಖರಾಬು ಇದ್ದರೆ ತೋರಿಸಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಕಾನೂನು ಪ್ರಕಾರವೇ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಒತ್ತುವರಿ ಪತ್ತೆ ಹೆಚ್ಚಲು  ಅಧಿಕಾರಿಗಳನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಸ್ವತಃ ಭೂಮಾಪನ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್‌, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ, ವಿಧಾನ ಪರಿಷತ್ ಸದಸ್ಯ ಎಚ್. ವಿಶ‍್ವನಾಥ್ ಅವರೇ ಬಂದು ಸರ್ವೇ ನಡೆಸಲಿ. ಎಚ್ ವಿಶ್ವನಾಥ್ ಅವರು ಒಂದುಕಡೆ ಚೈನ್ ಹಿಡಿಯಲಿ. ಮನೀಶ್ ಮುದ್ಗಿಲ್ ಮತ್ತೊಂದು ಕಡೆ ಚೈನ್ ಹಿಡಿಯಲಿ. ಅದೇನಾದರೂ ಜೋತು ಬಿದ್ದರೆ ರೋಹಿಣಿ ಸಿಂಧೂರಿ ಎತ್ತಿ ಹಿಡಿದುಕೊಳ್ಳಲಿ. ಅವರೇ ನಿಂತು ಸರ್ವೆ ಮಾಡಿಸಲಿ ನನ್ನದು ಅಭ್ಯಂತರ ಇಲ್ಲ ಎಂದರು.

ಗೋಮಾಳ ಆಗಿದ್ದರೆ ನಿಮ್ಮ ಬಳಿಯೇ ದಾಖಲೆ ಇದೆ. ನೀವೊಬ್ಬ ಪ್ರಾಮಾಣಿಕ ಅಧಿಕಾರಿ. ಅದಕ್ಕೆ ಕುಮಾರಸ್ವಾಮಿ ರೈತರ ಸಾಲ ಮನ್ನಾಗೆ ನಿಮ್ಮನ್ನು ನೇಮಕ ಮಾಡಿದರು. 54 ಸಾವಿರ ರೈತರ ಅರ್ಜಿ ನಿಮ್ಮ ಬಳಿ ಇದೆ. ನೀವು ಈ ರಾಜ್ಯದಲ್ಲಿ ಭೂದಾಖಲೆ ಸರ್ವೇಗೆ ರೈತರು ಅರ್ಜಿ ಕೊಟ್ಟಿದ್ದಾರೆ. ಖಾಸಗಿಯವರದ್ದು 2.5 ಲಕ್ಷ ಹಾಗೂ ಸರ್ಕಾರದ್ದು 2.5 ಲಕ್ಷ ಅರ್ಜಿ ಬಾಕಿ ಇದೆ. ಅದಕ್ಕೆ ಯಾವುದೇ ಸಮಿತಿ ಏಕೆ  ರಚಿಸಲಿಲ್ಲ ಎಂದು ಪ್ರಶ್ನಿಸಿದರು.

ರೋಹಿಣಿ ಸಿಂಧೂರಿಯಾಗಲಿ, ಮನೀಶ್ ಮುದ್ಗಿಲ್ ಆಗಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ. ನಾನು ಯಾವುದೇ ಬ್ಲಾಕ್ ಮೇಲ್ ಗೂ ಹೆದರುವುದಿಲ್ಲ. ಇದು ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಹೋರಾಟ. ಇದನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದರು.

ನನ್ನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೂಡ‌‌ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದನ್ನು ಸಾಬೀತು ಮಾಡಿದರೂ ಕೂಡ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಿಂದ ದೂರವಾಗುತ್ತೇನೆ. ಬೇರೆಯವರನ್ನು ಬ್ಲಾಕ್ ಮೇಲ್ ಮಾಡಬಹುದು, ಆದರೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದರು.

ಸಚಿವ ಎಸ್.ಟಿ. ಸೋಮಶೇಖರ್ ಕೂಡ ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ ಎಂದಿದ್ದಾರೆ. ಅವರೇನು ನನ್ನ ಪರವಾಗಿ ಮಾತನಾಡಿಲ್ಲ ಎಂದರು.

Contact us for classifieds and ads : +91 9742974234



 
error: Content is protected !!