Latest News

ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ ವಿರೋಧಿಸಿ ಸಹಿ ಸಂಗ್ರಹ

AskMysuru 28/09/2021

ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಪ್ರವೇಶ ದರ ಹೆಚ್ಚಳ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಆಟೋ ಚಾಲಕರು ಹಾಗೂ ವ್ಯಾಪಾರಸ್ಥರು ,ಟಾಂಗಾ ಗಾಡಿ ಅವರಿಂದ ಸಹಿ ಸಂಗ್ರಹ ಪಡೆಯಲಾಯಿತು.

sri krishnadevaraya hampi

ಸಾರ್ವಜನಿಕರಿಂದ ಪಡೆದ ಸಹಿ ಸಂಗ್ರಹವನ್ನು ಮುಂದಿನ ದಿನಗಳಲ್ಲಿ ನಮ್ಮ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಆಡಳಿತ ಮಂಡಳಿ ಅವರಿಗೆ ಹಸ್ತಾಂತರಿಸಿ ಅರಮನೆ ಪ್ರವೇಶ ದರ ಯಥಾಸ್ಥಿತಿ ಕಾಪಾಡಲು ಮನವಿ ಮಾಡುತ್ತೇವೆ ಎಂದು ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ತಿಳಿಸಿದರು.

ಕರೋನಾ ಹೊಡೆತಕ್ಕೆ ಸಿಲುಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಅರಮನೆ ಪ್ರವೇಶ ದರ ಹೆಚ್ಚಳದಿಂದ ಮತ್ತೆ ಹೊಡೆತ ಬೀಳಲಿದು. ಸಂಕಷ್ಟ ಸಂದರ್ಭದಲ್ಲಿ ದರ ಹೆಚ್ಚಳ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು. ಭಾರೀ ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಈಗಷ್ಟೇ ನಿಧಾನವಾಗಿ ಹೊರಗೆ ಬಂದು. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳದಿಂದ ಪ್ರವಾಸಿಗರನ್ನೇ ನಂಬಿ 1000 ರರು ಕುಟುಂಬ ಜೀವನ ಮಾಡುತ್ತಿದ್ದಾರೆ.

ಈಗಾಗಲೇ ಕೋವಿಡ್ ನಿಂದ 2 ವರ್ಷದಿಂದ ಪ್ರವಾಸಿಗರ ಬರದೆ ವ್ಯಾಪಾರಸ್ಥರಿಗೆ ಜೀವನ ಮಾಡಲು ಬಹಳ ಸಂಕಷ್ಟದಲ್ಲಿದ್ದಾರೆ,ಈ ಬಾರಿ ದಸರಾ ದಲ್ಲಾದರೂ ವ್ಯಾಪಾರದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆಸೆಯನ್ನು ವ್ಯಾಪಾರಸ್ಥರಿದ್ದಾರೆ ಇಂತಹ ಸಂದರ್ಭದಲ್ಲಿ ಅರಮನೆ ಪ್ರವೇಶ ದರ ಹೆಚ್ಚಳ ಮಾಡಿರುವುದು ಬೇಸರದ ಸಂಗತಿ ದಸರಾ ಸಂದರ್ಭದಲ್ಲಿ ಅರಮನೆ ಪ್ರವೇಶ ದರ ಹೆಚ್ಚಳ ಮಾಡಿರುವುದು ಪ್ರವಾಸೋದ್ಯಮಕ್ಕೆ ಕುಂಠಿತಗೊಳ್ಳುತ್ತದೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಅರಮನೆಯ ಪ್ರವೇಶ ದರ ಹೆಚ್ಚಳ ಯಾವ ಕಾರಣಕ್ಕೆ ?

ಪ್ರವಾಸಿಗರು ಹೆಚ್ಚಾಗಿ ಬರಲಿ ಎಂದು 1ಕಡೆ ಪ್ರವಾಸೋದ್ಯಮ ವಿಭಿನ್ನ ಕಾರ್ಯಕ್ರಮಗಳು ಆಯೋಜಿಸಿದರೆ ,ಇನ್ನೊಂದೆಡೆ ಅರಮನೆ ಆಡಳಿತ ಮಂಡಳಿ ಪ್ರವಾಸ ದರ ಹೆಚ್ಚಳ ಮಾಡಿರುವುದು ಬೇಸರ ಉಂಟು ಮಾಡುತ್ತದೆ ಹಾಗಾಗಿ ಪ್ರವೇಶ ದರ ಎಂದಿನಂತೆ ಮುಂದುವರಿಸಬೇಕು ಯಾವುದೇ ಕಾರಣಕ್ಕೂ ಇಂತಹ ಸಂದರ್ಭದಲ್ಲಿ ಪ್ರವೇಶ ದರ ಹೆಚ್ಚು ಮಾಡಲು ಮುಂದಾಗಬಾರದು ಎಂದು ಅರಮನೆ ಆಡಳಿತ ಮಂಡಳಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ತೀರ್ಥಕುಮಾರ್, ಮಹೇಂದರ್ ಯಂ ಶೈವಾ, ಶಿವಶಂಕರ್, ಮಹದೇವ್ ಪ್ರಸಾದ್, ಸ್ವಾಮಿ, ಹರೀಶ್ ನಾಯ್ಡು, ಹಾಗೂ ಇನ್ನಿತರರು ಹಾಜರಿದ್ದರು

Contact us for classifieds and ads : +91 9742974234



 
error: Content is protected !!